ಕಾರವಾರ [ಜ.14]:  ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ವಿರೋಧಿಸಿ ಜ. 16 ರಂದು ಕಾರವಾರ ಬಂದ್‌ಗೆ ಮೀನುಗಾರರ ಸಂಘಟನೆಗಳು ಕರೆ ನೀಡಿವೆ. 

ಮಂಗಳವಾರದಿಂದಲೇ ಮೀನು ಮಾರುಕಟ್ಟೆ ಅನಿರ್ದಿಷ್ಟಾವಧಿಗೆ ಬಂದ್ ಆಗಿದ್ದು, ಇಂದೂ ಕೂಡ ಮೀನುಗಾರರು ಪ್ರತಿಭಟನೆ ನಡೆಸಿದ್ದಾರೆ. ಸಾಗರಮಾಲಾ ಯೋಜನೆ ವಿರುದ್ಧ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಾಗಿದೆ. 

ಸೋಮವಾರ ಬಂದರು ವಿಸ್ತರಣೆ ಕಾಮಗಾರಿ ಆರಂಭವಾಗುತ್ತಿದ್ದಂತೆ ಮೀನುಗಾರರು ಕಾಮಗಾರಿಗೆ ಅಡ್ಡಿಪಡಿಸಿದಾಗ ಮುಖಂಡರು ಸೇರಿದಂತೆ 80 ಮೀನುಗಾರರನ್ನು ಬಂಧಿಸಿ, ಬಿಡುಗಡೆಗೊಳಿಸಿದರು. ನೂರಾರು ಮೀನುಗಾರರನ್ನು ಚದುರಿಸಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಕಾಮಗಾರಿ ಆರಂಭಿಸಲಾಗಿದೆ. 

ಸಾಗರ ಮಾಲ ವಿರೋಧಿಸಿ ಬೃಹತ್ : ಮೀನುಗಾರರು ಅಸ್ವಸ್ಥ...

ಹೀಗಾಗಿ ಮೀನುಗಾರರ ಸಂಘಟನೆಗಳು ಈಗ ತೀವ್ರ ಹೋರಾಟ ನಡೆಸಲು ನಿರ್ಧರಿಸಿವೆ. ಇದರ ಅಂಗವಾಗಿ ಜ. 16 ರಂದು ಕಾರವಾರ ಬಂದ್‌ಗೆ ಕರೆ ನೀಡಲಾಗಿದೆ.  

ಮೇದಿನಿ ಎಂಬ ಸುಂದರ ಊರಲ್ಲಿ 2ಹಗಲು 1ರಾತ್ರಿ : ಇಲ್ಲಿ ಜೀವಕ್ಕೆ ಗ್ಯಾರಂಟಿ ಇಲ್ಲ!...   
ಅವಕಾಶ ಇಲ್ಲ: ಬಂದ್ ನಡೆಸಲು ಅವಕಾಶವೇ ಇಲ್ಲ. ಒಂದು ವೇಳೆ ಒತ್ತಾಯಪೂರ್ವಕವಾಗಿ ಬಂದ್ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ. ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಬಂದ್ ನಡೆಸುವಂತಿಲ್ಲ. ಸಾಗರಮಾಲಾ ಯೋಜನೆ ವಿರೋಧಿಸಿ ಜ. 16 ರಂದು ಒತ್ತಾಯಪೂರ್ವಕ ಬಂದ್ ನಡೆಸದಂತೆ ಬಂದೋಬಸ್ತ್ ಏರ್ಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.