Asianet Suvarna News Asianet Suvarna News

ರಾಜ್ಯದ 11 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ಸ್ಯದರ್ಶಿನಿ ಮಳಿಗೆಗಳ ಸ್ಥಾಪನೆ

  • ರಾಜ್ಯಾದ್ಯಂತ ಮೀನು ಮಾರುಕಟ್ಟೆಯನ್ನು ಇನ್ನಷ್ಟುವೃದ್ಧಿಸುವ ಉದ್ದೇಶ
  • ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು (ಕೆಎಫ್‌ಡಿಸಿ) ರಾಜ್ಯದ ಹಲವೆಡೆ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಂಡಿ
Fish markets will start in Karnataka 11 City corporation limits snr
Author
Bengaluru, First Published Sep 27, 2021, 3:56 PM IST

 ಮಂಗಳೂರು (ಸೆ.27):  ರಾಜ್ಯಾದ್ಯಂತ ಮೀನು ಮಾರುಕಟ್ಟೆಯನ್ನು (Fish Market) ಇನ್ನಷ್ಟುವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು (KFDC) ರಾಜ್ಯದ ಹಲವೆಡೆ ಮೀನು ಮಾರುಕಟ್ಟೆಗಳನ್ನು ನಿರ್ಮಿಸುವ ಕೆಲಸ ಕೈಗೆತ್ತಿಕೊಂಡಿದ್ದು, ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ.

ಎನ್‌ಆರ್‌ ಪುರ (ನರಸಿಂಹರಾಜಪುರ), ಸಾಗರ, ಯಾದಗಿರಿ, ಇಂಡಿ, ಸಿರುಗುಪ್ಪ ಮತ್ತು ಸಿಂಧನೂರಿನಲ್ಲಿ ಮೀನು ಮಾರುಕಟ್ಟೆಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ. ಸಾಸ್ತಾನದಲ್ಲಿ ಕಟ್ಟಡ ಪೂರ್ಣಗೊಂಡಿದೆ. ಬೆಳಗಾವಿ (Belagavi) ಮತ್ತು ಹಳೆಯಂಗಡಿಯಲ್ಲಿ ಮಾರುಕಟ್ಟೆಕಟ್ಟಡ ನಿರ್ಮಿಸಲು ಕೆಲಸ ಆರಂಭಿಸಲಾಗಿದೆ ಎಂದು ಕೆಎಫ್‌ಡಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ಎಲ್‌. ದೊಡ್ಡಮನಿ ತಿಳಿಸಿದ್ದಾರೆ.

ಇದಲ್ಲದೆ, ಕುಂದಾಪುರದಲ್ಲಿ ಪೂರ್ಣ ಪ್ರಮಾಣದ ಮೀನು ಮಾರುಕಟ್ಟೆನಿರ್ಮಾಣಕ್ಕಾಗಿ ಪರ್ಯಾಯ ಭೂಮಿ ಗುರುತಿಸುವಂತೆ ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಲಾಡಿಯಲ್ಲಿ ಕೂಡ ಭೂಮಿ ಗುರುತಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ವಿರಾಜಪೇಟೆಯಲ್ಲಿ ಮೀನು ಮಾರುಕಟ್ಟೆಪೂರ್ಣಗೊಳಿಸಲಾಗಿದೆ ಎಂದು ಅವರು ಹೇಳಿದರು.

ಬಂಗುಡೆ ಬೇಕಾ, ಮಾಂಜಿ ಬೇಕಾ.? ಕರಾವಳಿ ತುಂಬೆಲ್ಲಾ ತಾಜಾ ಮೀನಿನ ಘಮಘಮ!

11 ಕಡೆ ಮತ್ಸ್ಯದರ್ಶಿನಿ: ರಾಜ್ಯದ 11 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ಸ್ಯದರ್ಶಿನಿ ಮಳಿಗೆಗಳನ್ನು ಸ್ಥಾಪಿಸುವ ಹೊಸ ಯೋಜನೆಯನ್ನು ಕೆಎಫ್‌ಡಿಸಿ ಹಾಕಿಕೊಂಡಿದೆ. ಈ ಮಳಿಗೆಗಳನ್ನು ಏಕರೂಪದಲ್ಲಿ ವಿನ್ಯಾಸಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ (Bengaluru) 27 ಮತ್ಸ್ಯದರ್ಶಿನಿ ಮಳಿಗೆಗಳನ್ನು ತೆರೆಯಲಾಗಿದೆ.

ಮೊಬೈಲ್‌ ವ್ಯಾನ್‌ಗೆ ಜಾಗ ಹುಡುಕಾಟ: ಮಂಗಳೂರಿನಲ್ಲಿ ಕೆಎಫ್‌ಡಿಸಿಯ ಸಮುದ್ರ ಆಹಾರದ ಮೊಬೈಲ್‌ ವ್ಯಾನ್‌ಗೆ ಈ ಹಿಂದೆ ಕದ್ರಿ ಪಾರ್ಕ್ ಹೊರಗೆ ವ್ಯವಸ್ಥೆಗೊಳಿಸಲಾಗಿತ್ತು. ಮತ್ಸ್ಯಾಹಾರ ಪ್ರಿಯರ ನೆಚ್ಚಿನ ತಾಣವೂ ಆಗಿತ್ತು. ಕೋವಿಡ್‌ ಲಾಕ್‌ಡೌನ್‌ ಬಳಿಕ ಈ ಮೊಬೈಲ್‌ ವ್ಯಾನ್‌ ಸೇವೆಯನ್ನು ಮುಂದುವರಿಸಲು ಸಾಧ್ಯವಾಗಿಲ್ಲ. ಈಗ ಈ ವಾಹನ ನಿಲುಗಡೆ ಮಾಡಲು ಮತ್ತು ಸಮುದ್ರ ಆಹಾರ ಭಕ್ಷ ್ಯಗಳನ್ನು ಜನಪ್ರಿಯಗೊಳಿಸಲು ಹೊಸ ಪ್ರದೇಶ ಹುಡುಕುತ್ತಿದ್ದೇವೆ ಎಂದು ದೊಡ್ಡಮನಿ ತಿಳಿಸಿದ್ದಾರೆ.

ಅಧಿಕಾರಿಗಳಿಗೆ ತೆಂಗಿನಕಾಯಿ ಪ್ರಮಾಣ ಮಾಡಿಸಿದ ಗ್ರಾಮಸ್ಥರು..!

ಕುಳಾಯಿಯಲ್ಲಿ ಮೀನು ಸಂಸ್ಕರಣಾ ಘಟಕ

ಮಂಗಳೂರು ಹೊರವಲಯದ ಕುಳಾಯಿಯಲ್ಲಿ ಮೀನು ಸಂಸ್ಕರಣಾ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಇನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸಮಿತಿಯಿಂದ ಅನುಮೋದನೆ ಸಿಗಲು ಬಾಕಿಯಿದೆ. ತದಡಿಯಲ್ಲಿ ಮೀನು ಸಂಸ್ಕರಣಾ ಘಟಕದ ಕೆಲಸ ಪೂರ್ಣಗೊಂಡಿದ್ದು, ಕಾರ್ಯಾಚರಣೆಗೆ ಇ-ಟೆಂಡರ್‌ ಕರೆಯಲಾಗಿದೆ.

Follow Us:
Download App:
  • android
  • ios