Belagavi: ಪ್ರಾಣ ಪಣಕ್ಕಿಟ್ಟು ಬೆಕ್ಕಿನ ಮರಿ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

• ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲುಕಿದ್ದ ಬೆಕ್ಕಿನ ಮರಿ
• ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಗಮನಿಸಿದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಅವಧೂತ್
• ಬೆಳಗಾವಿ ಅಗ್ನಿಶಾಮಕ ಸಿಬ್ಬಂದಿಯಿಂದ 'ಆಪರೇಷನ್ ಕ್ಯಾಟ್'..!

firefighters rescued cat at belagavi gvd

ಬೆಳಗಾವಿ (ಜು.24): ವಾಣಿಜ್ಯ ಮಳಿಗೆಯ ಎರಡನೇ ಮಹಡಿಯಲ್ಲಿ ಇಕ್ಕಟ್ಟಿನ ಸ್ಥಳದಲ್ಲಿ ಸಿಲುಕಿದ್ದ ಬೆಕ್ಕಿನ ಮರಿಯನ್ನು ಅಗ್ನಿಶಾಮಕ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಖಡೇಬಜಾರ್ ನಲ್ಲಿ ಇರುವ ವಾಣಿಜ್ಯ ಮಳಿಗೆಯೊಂದರ ಎರಡನೇ ಮಹಡಿಯಲ್ಲಿ ಬೆಕ್ಕಿನ ಮರಿಯೊಂದು ಸಿಲುಕಿಕೊಂಡಿತ್ತು. ಇದೇ ರಸ್ತೆಯಲ್ಲಿ ತೆರಳುತ್ತಿದ್ದ ಫೇಸ್‌ಬುಕ್ ಫ್ರೆಂಡ್ಸ್ ಸರ್ಕಲ್‌ನ ಸದಸ್ಯ ಅವಧೂತ್ ಇದನ್ನು ಗಮನಿಸಿ ಕಟ್ಟಡ ಮೇಲೆ ತೆರಳಿದಾಗ ವಾಣಿಜ್ಯ ಮಳಿಗೆಯ ಎರಡನೇ  ಮಹಡಿಯಲ್ಲಿ ವಾಸವಿದ್ದ ಕುಟುಂಬದವರು ಸಾಕಿದ ಬೆಕ್ಕಿನ ಮರಿ ಎಂದು ಗೊತ್ತಾಗಿದೆ. 

ಈ ವೇಳೆ  BAWA(Belgaum Animal Welfare Association) ಎನ್‌ಜಿಒಗೆ ಮಾಹಿತಿ ನೀಡಿದ್ದಾರೆ. ಆದರೆ ರಾತ್ರಿ ಜಿಟಿ ಜಿಟಿ ಮಳೆಯಾಗುತ್ತಿದ್ದ ಹಿನ್ನೆಲೆ ಬೆಕ್ಕಿನ ಮರಿ ರಕ್ಷಿಸಲಾಗದೇ ಬಳಿಕ ಬೆಳಗಾವಿಯ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬೆಳಗಾವಿಯ ಅಗ್ನಿಶಾಮಕ ಸಿಬ್ಬಂದಿ ಬೆಕ್ಕಿನ ಮರಿಯನ್ನು ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿಫನ್ ಮಾಡಲು ಬಂದ ಅಧಿಕಾರಿಗಳು, ಸರ್ವ್ ಮಾಡಲು ಬಂದ ಬಾಲ ಕಾರ್ಮಿಕನ ರಕ್ಷಣೆ

ನಾಯಿಯನ್ನ ರಕ್ಷಣೆ ಮಾಡಿದ ಅಗ್ನಿಶಾಮಕದಳ, ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ: ಅಗ್ನಿಶಾಮಕ ದಳ ಸಿಬ್ಬಂದಿ ನಾಯಿಯೊಂದನ್ನು ಮನಮಿಡಿಯುವ ರೀತಿ ರಕ್ಷಣೆ ಮಾಡಿದ್ದಾರೆ. ಸಾವು ಬದುಕಿನ ಮಧ್ಯೆ ನಿಂತಿದ್ದ ನಾಯಿಯನ್ನ ರಕ್ಷಿಸಿದ್ದಾರೆ.  ಎಲೆಕ್ಟ್ರಾನಿಕ್ ಸಿಟಿ ಅಗ್ನಿ ಶಾಮಕದಳದ ಠಾಣಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಮನೆಯೊಂದರ ಸಜ್ಜಾ ಮೇಲೆ ಇದ್ದ ನಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ನಾಗನಾಥಪುರದಲ್ಲಿ ರಸ್ತೆ ಬಳಿ ಐದಾರು ನಾಯಿಗಳು ಸೇರಿ ಆಟವಾಡುತ್ತಿದ್ದ ವೇಳೆ ಆಟವಾಡಿಕೊಂಡ  ಅಪಾರ್ಟ್ಮೆಂಟ್ ಒಳಗೆ ಮೊದಲನೆ ಮಹಡಿಗೆ ನುಗ್ಗಿವೆ. ಈ ವೇಳೆ ಅಪಾರ್ಟ್ಮೆಂಟ್ ಮಾಲೀಕ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಒಂದು ನಾಯಿಯನ್ನ ಬಿಟ್ಟು ಎಲ್ಲಾ ನಾಯಿಗಳು ಅಪಾರ್ಟ್ಮೆಂಟ್ ನಿಂದ ಓಡಿ ಹೋಗಿವೆ. ಆ ಒಂದು ನಾಯಿ ಮಾತ್ರ ಮಾಲೀಕನ ಆರ್ಭಟಕ್ಕೆ ಹೆದರಿ ಪಕ್ಕದ ಮನೆ ಮೇಲೆ ಹಾರಿದೆ. 

ಈ ವೇಳೆ ಸ್ಲಿಪ್ ಆಗಿ ಪಕ್ಕದ ಮನೆ ಸಜ್ಜಾ ಮೇಲೆ ಬಿದ್ದಿದ್ದು ರಾತ್ರಿಯೆಲ್ಲಾ ಸಜ್ಜಾ ಮೇಲಿದ್ದು ಜೋರಾಗಿ ಕೂಗಾಡಿದೆ.. ನಾಯಿಯ  ಚೀರಾಟದಿಂದ  ಬೆಳಿಗ್ಗೆ ಎಚ್ಚರವಾದ ಸ್ಥಳೀಯರು ನಾಯಿಯನ್ನ ಹುಡುಕಾಟವನ್ನ ನಡೆಸಿದ್ದಾರೆ. ನಂತರ ಮನೆಯ ಸಜ್ಜೆ ಮೇಲೆ  ನಾಯಿ ಆತಂಕದಿಂದ ಕೂಗಾಟಮಾಡೊದನ್ನ ಗಮನಿಸಿದ್ದು ಸ್ಥಳೀಯರು ರಕ್ಷಣೆ ಮಾಡಲು ಮುಂದಾಗಿದ್ದಾರೆ.. ಈ ವೇಳೆ ಸ್ಥಳೀಯರ ಪ್ರಯತ್ನ ವಿಫಲವಾದಾಗ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ರಸ್ತೆ ಪಕ್ಕದಲ್ಲಿ ಇದ್ದ ನವಜಾತ ಶಿಶುವಿನ ಅಳು ಕೇಳಿ ಓಡೋಡಿ ಬಂದು ರಕ್ಷಿಸಿದ ಸಾರ್ವಜನಿಕರು

ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿ ನಾಯಿಯನ್ನ ರಕ್ಷಣೆ ಮಾಡಿದ್ದಾರೆ.  ಇನ್ನೂ ರಕ್ಷಣೆ ಮಾಡುವ ಸಮಯದಲ್ಲಿ ನಾಯಿಯನ್ನ ಪ್ರೀತಿಯಿಂದ ಮಾತನಾಡಿಸುತ್ತಾ ರಕ್ಷಣೆ ಮಾಡಿದ್ದಾರೆ.. ಇನ್ನೂ ಸ್ಥಳೀಯರು ಅಗ್ನಿಶಾಮಕದಳ ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Latest Videos
Follow Us:
Download App:
  • android
  • ios