ಚಿತ್ರದುರ್ಗ: ಕಣಿವೆ ಮಾರಮ್ಮ ಗುಡ್ಡಕ್ಕೆ ಬೆಂಕಿ, ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶ
ಕಣಿವೆ ಮಾರಮ್ಮ ದೇಗುಲವಿರುವ ಗುಡ್ಡಕ್ಕೆ ಬೆಂಕಿ| ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಬಳಿಯ ಕಣಿವೆ ಗುಡ್ಡದಲ್ಲಿ ಘಟನೆ| ಬೆಂಕಿಗಾಹುತಿಯಾದ ಅಪಾರ ಪ್ರಮಾಣದ ಔಷಧಿ ಸಸ್ಯಗಳು|
ಚಿತ್ರದುರ್ಗ(ಮಾ.14): ಇತಿಹಾಸ ಪ್ರಸಿದ್ಧ ಕಣಿವೆ ಮಾರಮ್ಮ ಗುಡ್ಡಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾದ ಘಟನೆ ತಾಲೂಕಿನ ಕುಂಚಿಗನಾಳ್ ಬಳಿಯ ಕಣಿವೆ ಗುಡ್ಡದಲ್ಲಿ ನಿನ್ನೆ(ಶನಿವಾರ) ನಡೆದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಅತ್ಯಮೂಲ್ಯ ಸಸ್ಯ ಸಂಪತ್ತು ನಾಶವಾಗಿದೆ. ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗುತ್ತಿದೆ. ರಾತ್ರಿಯಿಡೀ ಕಣಿವೆ ಮಾರಮ್ಮ ಗುಡ್ಡ ಧಗಧಗನೆ ಹೊತ್ತಿ ಉರಿದಿದೆ. ಹೀಗಾಗಿ ಅಪಾರ ಪ್ರಮಾಣದ ಔಷಧಿ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ.
ಲಕ್ಷ್ಮೇಶ್ವರ: ಗೊಜನೂರ ಗುಡ್ಡಕ್ಕೆ ಬೆಂಕಿ ಆರಿಸಲು ಹರಸಾಹಸ
ರಾತ್ರಿಯಿಡಿ ಬೆಂಕಿ ಹೊತ್ತಿ ಉರಿದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಪ್ರಯತ್ನ ಮಾಡಿಲ್ಲ, ಗುಡ್ಡಕ್ಕೆ ಬೆಂಕಿ ಬಿದ್ದ ಬಗ್ಗೆ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.