*   ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದ ಘಟನೆ*   ಬೆಂಝೀನ್‌ ಸೋರಿ ದುರಂತ*   10ರಿಂದ 15 ಅಡಿ ಎತ್ತರಕ್ಕೆ ಜ್ವಾಲೆ, 3 ತಾಸು ಬೆಂಕಿ 

ಯಲ್ಲಾಪುರ(ಉತ್ತರ ಕನ್ನಡ)(ಅ.14): ಮಂಗಳೂರಿನಿಂದ(Mangaluru) ಮುಂಬೈಗೆ(Mumbai) ರಾಸಾಯನಿಕ(Chemical) ಸಾಗಿಸುತ್ತಿದ್ದ ಟ್ಯಾಂಕರ್‌ವೊಂದು ಯಲ್ಲಾಪುರ(Yellapur) ತಾಲೂಕಿನ ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಆರತಿಬೈಲ್‌ ಘಟ್ಟದ ಬಳಿಯ ತಿರುವಿನಲ್ಲಿ ಬೆಳಗಿನ ಜಾವ ಉರುಳಿ ಬಿದ್ದು, ಭಾರೀ ಅನಾಹುತ ಸಂಭವಿಸಿದೆ. ಟ್ಯಾಂಕರ್‌ನಲ್ಲಿದ್ದ ಬೆಂಝೀನ್‌ ರಾಸಾಯನಿಕ ಸೋರಿಕೆಯಾಗಿ ಟ್ಯಾಂಕರ್‌ ಮಾತ್ರವಲ್ಲದೆ ಅಕ್ಕಪಕ್ಕದ ತೋಟ, ಕಾಡು 3 ಗಂಟೆ ಕಾಲ ಹೊತ್ತಿ(Fire) ಉರಿದಿದೆ.

ಬೆಳಗ್ಗೆ 5.30ರ ಹೊತ್ತಿಗೆ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಆ ಬಳಿಕ ಟ್ಯಾಂಕರ್‌ನಿಂದ ಸೋರಿಕೆಯಾದ ರಾಸಾಯನಿಕ ಹಳ್ಳಕ್ಕೆ ಹರಿದು ಬೆಂಕಿ ತಗುಲಿದೆ. ಸುತ್ತಮುತ್ತಲಿನ ಪ್ರದೇಶದ ಬಾವಿ, ಹಳ್ಳ, ಕಾಲುವೆ ಸೇರಿ ಎಲ್ಲೆಡೆ ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಬೆಂಕಿ ಜ್ವಾಲೆ ಪಸರಿಸಿದೆ. 10-15 ಮೀಟರ್‌ ಎತ್ತರದ ಜ್ವಾಲೆಗಳು ಕಾಣಿಸಿಕೊಂಡಿದೆ. ಪದೇ ಪದೆ ಸಣ್ಣ ಸಣ್ಣ ಸ್ಫೋಟಗಳು(Blast) ಸಂಭವಿಸುತ್ತಿದ್ದುದರಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಅಗ್ನಿಶಾಮಕ ದಳದವರು ಸತತ 4 ಗಂಟೆ ಪ್ರಯತ್ನದ ಬಳಿಕ ಬೆಂಕಿ ನಂದಿಸಿದರು. ಘಟನೆ ವೇಳೆ ಟ್ಯಾಂಕರ್‌ ಚಾಲಕ ಗಾಯಗೊಂಡಿದ್ದಾನೆ.

Karwar| ಮನೆಯೊಳಗೆ ನುಗ್ಗಿ ಮಗು ಹೊತ್ತೊಯ್ಯಲು ಯತ್ನಿಸಿದ ಚಿರತೆ, ಕಂಗಾಲಾದ ಜನತೆ..!

ರಾಸಾಯನಿಕವು ಹಳ್ಳದ ನೀರು ಸೇರಿಕೊಂಡ ಪರಿಣಾಮ ಘಟನಾ ಸ್ಥಳದಿಂದ ಸುಮಾರು ಅರ್ಧ ಕಿ.ಮೀ. ದೂರದ ಮನೆ, ತೋಟಗಳಿಗೂ ಬೆಂಕಿ ವ್ಯಾಪಿಸಿದೆ. ಆರತಿಬೈಲ್‌ ಶಂಕರ ಭಟ್ಟ ಎಂಬುವರ ಮನೆಯ ಬಾವಿಯಲ್ಲಿ ಸಂಗ್ರಹವಾದ ರಾಸಾಯನಿಕ ಏಕಾಏಕಿ ಸ್ಫೋಟಿಸಿ ಬಾವಿ ಹಾಗೂ ಅಕ್ಕಪಕ್ಕದಲ್ಲಿದ್ದ ಪೈಪ್‌ಗಳೂ ಸುಟ್ಟಿವೆ. ಮನೆಯೊಳಗಿದ್ದ ಬಟ್ಟೆಗಳಿಗೂ ಹಾನಿಯಾಗಿದೆ. ಸುಮಾರು 15 ಎಕರೆಗೂ ಅಧಿಕ ಗದ್ದೆ, ತೋಟಕ್ಕೂ ರಾಸಾಯನಿಕ ಸೇರಿಕೊಂಡು ಹಾನಿಯಾಗಿದೆ.
ಘಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ಸ್ಥಳಕ್ಕೆ ಭೇಟಿ ನೀಡಿ, ಎಂಆರ್‌ಪಿಎಲ್‌ ಕಂಪನಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತನಾಡಿ ತಕ್ಷಣ ತಜ್ಞರ ತಂಡ ಕಳುಹಿಸುವಂತೆ ಸೂಚಿಸಿದರು.

ಏನಿದು ಬೆಂಝೀನ್‌ ರಾಸಾಯನಿಕ?

ಕಚ್ಚಾ ತೈಲದಿಂದ ಬೆಂಝೀನ್‌ ಅನ್ನು ಉತ್ಪಾದಿಸಲಾಗುತ್ತದೆ. ಈ ರಾಸಾಯನಿಕವನ್ನು ಹೆಚ್ಚಾಗಿ ಪೈಂಟ್‌, ಪ್ಲಾಸ್ಟಿಕ್‌ ಸೇರಿ ವಿವಿಧ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಸಾಮಾನ್ಯವಾಗಿ ಈ ಬಣ್ಣರಹಿತ ರಾಸಾಯನಿಕ ಅಪಾಯಕಾರಿ. ಸಾಮಾನ್ಯ ವಾತಾವರಣದಲ್ಲಿ ಇದಕ್ಕೆ ಬಹುಬೇಗನೆ ಬೆಂಕಿ ತಗುಲುತ್ತದೆ. ಅಪಘಾತಕ್ಕೀಡಾದ(Accident) ಲಾರಿ ಎಂಆರ್‌ಪಿಎಲ್‌ನಿಂದ ಮುಂಬೈಗೆ ಬೆಂಝೀನ್‌ ಅನ್ನು ಸಾಗಿಸುತ್ತಿತ್ತು ಎನ್ನಲಾಗಿದೆ.