ಬೆಂಗ್ಳೂರಲ್ಲಿ ಮತ್ತೊಂದು ಅಗ್ನಿ ಅವಘಡ: ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ

ಗೋದಾಮಿನಲ್ಲಿ ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತುಗಳನ್ನ ಇಡಲಾಗಿತ್ತು. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ. 

Fire on Plastic Warehouse in Bengaluru grg

ಬೆಂಗಳೂರು(ನ.19):  ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ ಘಟನೆ ಇಂದು(ಭಾನುವಾರ) ನಡೆದಿದೆ. ಕುಂಬಾರ ಪೇಟೆ, ಡಿಎಸ್ ಲೇನ್, ಎಸ್‌ಪಿ ರೋಡ್‌ನಲ್ಲಿರುವ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ತಗುಲಿದೆ.

ಗೋದಾಮಿನಲ್ಲಿ ಮಕ್ಕಳ ಆಟದ ಸಾಮಾನು‌, ಎಲೆಕ್ಟ್ರಾನಿಕ್ ವಸ್ತುಗಳನ್ನ ಇಡಲಾಗಿತ್ತು. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ನಿರತರಾಗಿದ್ದಾರೆ. 
ಪ್ಲಾಸ್ಟಿಕ್ ಗೋದಾಮಿಗೂ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಮೂರು ಹಾಗೂ ನಾಲ್ಕನೇ ಮಹಡಿಯಲ್ಲಿ ದಟ್ಟ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. 

ದೀಪಾವಳಿಯಂದೇ ಮೀನುಗಾರರ ಬದುಕಲ್ಲಿ ಕಗ್ಗತ್ತಲು: ಅಗ್ನಿ ಅವಘಡಕ್ಕೆ ಕೋಟ್ಯಂತರ ರೂ. ಮೌಲ್ಯದ ಸೊತ್ತು ಭಸ್ಮ..!

ಸ್ಥಳದಲ್ಲಿ 5 ಅಗ್ನಿಶಾಮಕ ವಾಹನಗಳ 30 ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಅಗ್ನಿ ಜ್ವಾಲೆ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಬಿಲ್ಡಿಂಗ್ ಗೋಡೆ ಒಡೆದು ನೀರು ಹಾಯಿಸಿ ಅಗ್ನಿ ಜ್ವಾಲೆ ತಹಬದಿಗೆ ತರುವ ಪ್ರಯತ್ನವನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಮಾಡುತ್ತಿದ್ದಾರೆ. 70 ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿಯಿಂದ ಕಾರ್ಯಚರಣೆ ಮುಂದುವರೆದಿದೆ. 

Latest Videos
Follow Us:
Download App:
  • android
  • ios