ತೋಟಕ್ಕೆ ಬೆಂಕಿ ಬಿದ್ದು 2000 ತೆಂಗಿನ ಸಸಿ ನಾಶ: 24 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು!

ತಾಲೂಕಿನ ಬೀರೇನಹಳ್ಳಿಯ ಬುಡೇನ್‌ ಸಾಬ್ ಎನ್ನುವವರ ಎರಡು ಎಕರೆ ಅಡಿಕೆ, ತೆಂಗಿನ ತೋಟಕ್ಕೆ ಬೆಂಕಿ ಬಿದ್ದುಸಾವಿರಾರು ತೆಂಗಿನ ಸಸಿಗಳು ನಾಶವಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

Fire in a nut plantation 2000 coconut saplings destroyed Officials do not reach the spot even after 24 hours at hiriyur rav

ಹಿರಿಯೂರು (ಮಾ.26): ತಾಲೂಕಿನ ಬೀರೇನಹಳ್ಳಿಯ ಬುಡೇನ್‌ ಸಾಬ್ ಎನ್ನುವವರ ಎರಡು ಎಕರೆ ಅಡಿಕೆ, ತೆಂಗಿನ ತೋಟಕ್ಕೆ ಬೆಂಕಿ ಬಿದ್ದುಸಾವಿರಾರು ತೆಂಗಿನ ಸಸಿಗಳು ನಾಶವಾಗಿ ಅಪಾರ ಪ್ರಮಾಣದ ನಷ್ಟವುಂಟಾಗಿದೆ.

ಜಮೀನಿನಲ್ಲಿದ್ದ ಸುಮಾರು 2000 ಅಡಿಕೆ ಸಸಿಗಳು, 50 ತೆಂಗಿನ ಮರಗಳು, ಡ್ರಿಪ್‌ಪೈಪ್‌ಗಳು, ವಾಸದ ಗುಡಿಸಲು ಮತ್ತು ಅದರಲ್ಲಿದ್ದ ಮೋಟಾರ್‌ ಪಂಪ್‌, ಪಿವಿಸಿ ಪೈಪ್‌, ಕೇಬಲ… ವೈರ್‌, ಟಾರ್ಪಲ… ಸಂಪೂರ್ಣ ಅಗ್ನಿಗೆ ಆಹುತಿಯಾಗಿವೆ. ಆಧಾರ್‌ ಕಾರ್ಡ, ಪಾಸ್‌ ಬುಕ್‌, ರೇಷನ್‌ ಕಾರ್ಡ, ಡ್ರೈವಿಂಗ್‌ ಲೈಸೆನ್ಸ್ ಮತ್ತಿತರ ದಾಖಲಾತಿಗಳು ಸಹ ಅಗ್ನಿಗೆ ಆಹುತಿಯಾಗಿದ್ದು ಘಟನೆ ನಡೆದು 24 ಗಂಟೆಯಾಗುತ್ತಾ ಬಂದರೂ ಸಂಬಂಧಪಟ್ಟಯಾವ ಅಧಿಕಾರಿಗಳು ಸ್ಥಳಕ್ಕೆ ಹಾಜರಾಗಿ ಪರಿಶೀಲನೆ ನಡೆಸಿಲ್ಲ ಎಂದು ರೈತ ದೂರಿದ್ದಾರೆ. ಪ್ರಭಾರ ಅಗ್ನಿ ಶಾಮಕ ಠಾಣಾಧಿಕಾರಿ ಸುಭಾನ್‌ ಸಾಬ್‌ರವರ ನೇತೃತ್ವದ ತಂಡ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ..

ಅರಣ್ಯ ಇಲಾಖೆ ಸಿಬ್ಬಂದಿ ಎಡವಟ್ಟು: ಫೈರ್‌ಲೈನ್‌ ರೂಪಿಸಲು ಹಚ್ಚಿದ ಬೆಂಕಿಗೆ ರೈತನ ತೋಟ ಸುಟ್ಟು ಭಸ್ಮ

ವಿದ್ಯುತ್ ಶಾರ್ಟ್ ಸೆರ್ಕ್ಯೂಟ್‌ನಿಂದ ಅಡಿಕೆ ತೋಟಕ್ಕೆ ಬೆಂಕಿ:

ಶಿರಸಿ : ವಿದ್ಯುತ್‌ ಶಾರ್ಟ್ ಸಕ್ರ್ಯೂಟ್‌ನಿಂದ ಅಡಿಕೆ ತೋಟಕ್ಕೆ ಬೆಂಕಿ ತಗುಲಿದ ಘಟನೆ ತಾಲೂಕಿನ ಹೆಗಡೆ ಕಟ್ಟಾಬಾಳೇಗದ್ದೆ(Hegde katta balegaddde) ಸಮೀಪದ ಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಸುಮಾರು ಅರ್ಧ ಎಕರೆಗೂ ಅಧಿಕ ಪ್ರದೇಶದಲ್ಲಿ ಬೆಳೆದ ಅಡಿಕೆ ತೋಟ ಬೆಂಕಿಗಾಹುತಿಯಾಗಿದೆ.

ಕಲಗದ್ದೆಯ ಲಕ್ಷ್ಮೇನಾರಾಯಣ ಹೆಗಡೆ(Lakshmi narayana hegde) ಎಂಬವರಿಗೆ ಸೇರಿದ ತೋಟ ಇದಾಗಿದೆ. ಅಡಿಕೆ ತೊಟದ ನಡುವೆ ವಿದ್ಯುತ್‌ ತಂತಿ ಹಾದುಹೋಗಿದೆ. ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದಾಗಿ ಸುಮಾರು 100 ಅಡಿಕೆ ಮರಗಳಿಗೆ ಹಾಗೂ ಅಡಿಕೆ ಸಸಿಗಳಿಗೆ ಹಾನಿಯಾಗಿದೆ.

Gadag: ಅನ್ನದಾತ ಬಾಳಲ್ಲಿ ಬಂಗಾರವಾಗಬೇಕಿದ್ದ ಬಾಳೆ ಬೆಂಕಿಗಾಹುತಿ!

Latest Videos
Follow Us:
Download App:
  • android
  • ios