ಗೋವಿನ ಕೊಟ್ಟಿಗೆಯಲ್ಲಿ ಅಗ್ನಿ ಅವಘಡ : ಹೋರಿ, ಕರುಗಳು ಬೆಂಕಿಗಾಹುತಿ
- ಗೋವಿನ ಕೊಟ್ಟಿಗೆಗೆ ಬೆಂಕಿ ಹೊತ್ತಿ 4 ಗೋವುಗಳು ಸುಟ್ಟು ಭಸ್ಮ
- ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾದಾಪುರ ಗ್ರಾಮದಲ್ಲಿ ಘಟನೆ
ತುಮಕೂರು (ಜು.27): ಗೋವಿನ ಕೊಟ್ಟಿಗೆಗೆ ಬೆಂಕಿ ಹೊತ್ತಿ 4 ಗೋವುಗಳು ಸುಟ್ಟು ಹೋಗಿರುವ ಘಟನೆ ಚಿಕ್ಕನಾಯಕನಹಳ್ಳಿಯಲ್ಲಿಂದು ನಡೆದಿದೆ.
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾದಾಪುರ ಗ್ರಾಮದಲ್ಲಿ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿದ ಪರಿಣಾಮ ಬೆಂಕಿಯಿಂದ 2 ಹೋರಿ,2 ಕರುಗಳು, ಟಿವಿಎಸ್ ಎಕ್ಸ್ ಎಲ್ ಸುಟ್ಟು ಭಸ್ಮವಾಗಿವೆ.
ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ, ಮೂಕಪ್ರಾಣಿಗಳು ಸಜೀವ ದಹನ
ಮಾದಾಪುರದ ನಿವಾಸಿ ಪರಮೇಶ್ ಎಂಬವರಿಗೆ ಸೇರಿರುವ ಕೊಟ್ಟಿಗೆ ಆಕಸ್ಮಿಕ ಅಗ್ನಿ ಅವಡಕ್ಕೆ ತುತ್ತಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.