ಕಪ್ಪ​ತ್ತಗುಡ್ಡಕ್ಕೆ ಬೆಂಕಿ : 70 ಹೆಕ್ಟೇರ್‌ ಅರ​ಣ್ಯ ನಾಶ

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತಗುಡ್ಡದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 70 ಹೆಕ್ಟೇರ್ ಅರಣ್ಯ ನಾಶವಾಗಿದೆ. 

fire Catches in kappatagudda 70 hectares Forest Destroyed snr

 ಡಂಬಳ (ಜ.26):  ಸಮೀ​ಪದ ಡೋಣಿ ಗ್ರಾಮ ಮತ್ತು ಡೋಣಿ ತಾಂಡಾ ನಡುವಿನ ಕಪ್ಪತ್ತಗುಡ್ಡ ಪ್ರದೇಶಕ್ಕೆ ಬೆಂಕಿ ಹೊತ್ತಿ​ಕೊಂಡು ಸುಮಾರು 70 ಹೆಕ್ಟೇರ್‌ ಅರಣ್ಯ ಸಂಪತ್ತು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

 ಸೋಮವಾರ ಬೆಳಗ್ಗೆ 11ರ ಸುಮಾರಿಗೆ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಗೆಗೆ ಅಪಾರ ಪ್ರಮಾಣದ ಸಸ್ಯ ಸಂಪತ್ತು ನಾಶವಾಗಿದ್ದು, ಸರೀಸೃಪಗಳು, ಸಣ್ಣಸಣ್ಣ ಗುಬ್ಬಿಗಳ ಗೂಡು ಸುಟ್ಟಿದ್ದು, ಅದರಲ್ಲಿದ್ದ ಸಣ್ಣ ಮರಿಗಳು ಬಲಿ​ಯಾ​ಗಿವೆ.

'ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪ​ತ್ತ​ಗು​ಡ್ಡ​ದಲ್ಲಿ ಗಣಿ​ಗಾ​ರಿ​ಕೆಗೆ ಅವ​ಕಾಶ ನೀಡು​ವು​ದಿಲ್ಲ' ...

ಪ್ರತಿವರ್ಷ ಬೇಸಿಗೆ ಆರಂಭಗೊಂಡರೆ ಕಪ್ಪತ್ತಗುಡ್ಡಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚುತ್ತಾರೆ. ಇನ್ನೊಂದೆಡೆ ಕಪ್ಪತ್ತಗುಡ್ಡದಲ್ಲಿರುವ ಹಲವು ಗಾಳಿ​ಯಂತ್ರ ನಿರ್ವಹಣೆಗೆ ಹೋಗುವವರು ಬೀಡಿ, ಸಿಗರೇಟ್‌ ಹೊತ್ತಿ​ಸಿ​ದಾಗ ಅದರ ಕಿಡಿ​ಯಿಂದ​ಲೂ ಬೆಂಕಿ ಹೊತ್ತಿಕೊಳ್ಳು​ತ್ತದೆ ಎಂಬುದು ಪರಿಸರಪ್ರೇಮಿ​ಗಳ ಆರೋ​ಪ​. 

ಈ ಮಧ್ಯೆ, ಕಪ್ಪತ್ತಗುಡ್ಡ ಬೆಟ್ಟದ ಪ್ರದೇಶಗಳಲ್ಲಿ ವಿದ್ಯುತ್‌ಲೈನ್‌ ಹಾದುಹೋಗಿದ್ದು, ಆಗಾಗ ಶಾರ್ಟ್‌ಸಕ್ರ್ಯೂಟ್‌ನಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಇರುತ್ತದೆ ಎನ್ನಲಾ​ಗಿದೆ.

Latest Videos
Follow Us:
Download App:
  • android
  • ios