ನೆಲ್ಯಾಡಿ (ಮಾ.25): ಖಾಸಗಿ ಬಸ್ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಮಂಗಳೂರು ಸಪೀಪದ ಕಡಬ ಕೌಕ್ರಾಡಿಯ ಮಣ್ಣುಗುಂಡಿಯಲ್ಲಿ ಕುಂದಾಪುರದಿಂದ  ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ  ಕ್ಯಾಂಟರ್ ಗೂಡ್ಸ್ ಲಾರಿ ನಡುವೆ ಬುಧವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದೆ. 

ಫುಲ್ ಟೈಟಾಗಿ ಮಹಿಳೆ ಮನೆಗೆ ನುಗ್ಗಿದ ಪೊಲೀಸ್ ಕಾನ್ಸ್ಟೇಬಲ್ ..

ಈ ವೇಳೆ ಎರಡು ವಾಹನಗಳಿಗೂ ಬೆಂಕಿ ತಗುಲಿದ್ದು ಲಾರಿ ಚಾಲಕ ಮೈಸೂರು ನಿವಾಸಿ ಸಂತೋಷ್ (25) ಸ್ಥಳದಲ್ಲಿಯೇ ಸಜೀವ ದಹನವಾಗಿದ್ದಾನೆ. 

ಬಸ್‌ನಲ್ಲಿದ್ದ ಚಾಲಕರು ಹಾಗೂ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಖಾಸಗಿ ಬಸ್ಸಿನಲ್ಲಿ ತುಳು ಚಿತ್ರನಟಿಯೋರ್ವರು ಇದ್ದರೆಂದು ಹೇಳಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದು,  ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.