ಮಂಡ್ಯ(ಫೆ.09): ಮಂಡ್ಯದ ಕೆನರಾ ಬ್ಯಾಂಕ್‌ ಕಟ್ಟಡ ರಾತ್ರೋ ರಾತ್ರಿ ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದ್ದು, ರಾತ್ರಿ ವೇಳೆ ಘಟನೆ ನಡೆದುದರಿಂದ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.

"

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆರಣಿಯಲ್ಲಿ‌ ಘಟನೆ ನಡೆದಿದ್ದು, ಆಕಸ್ಮಿಕ ಬೆಂಕಿ ತಗುಲಿ ಬ್ಯಾಂಕ್ ಕಟ್ಟಡ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಸಾಮೂಹಿಕ ವಿವಾಹಕ್ಕೆ ಹೆಗಡೆ, ಸುಧಾಮೂರ್ತಿ, ಯಶ್ ರಾಯಭಾರಿ

ರಾತ್ರಿ 2 ಗಂಟೆ ವೇಳೆಗೆ ಹೊತ್ತಿಕೊಂಡ ಬೆಂಕಿ ವ್ಯಾಪಕವಾಗಿ ಇಡೀ ಕೊಠಡಿಯನ್ನಾವರಿಸಿತ್ತು. ಬೆಂಕಿ ಕೊಠಡಿ ಹೊರಗೂ ವ್ಯಾಪಿಸುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಬೆಳ್ಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.