ನಗರ ಲ್ಯಾಬೊರೇಟರಿ ಘಟಕದಲ್ಲಿ ಭಾರೀ ಬೆಂಕಿ ಅವಘಡಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಕೆಮಿಕಲ್ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

ರಾಯಚೂರು (ಏ.22) : ನಗರ ಲ್ಯಾಬೊರೇಟರಿ ಘಟಕದಲ್ಲಿ ಭಾರೀ ಬೆಂಕಿ ಅವಘಡಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಕೆಮಿಕಲ್ ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.

 ವಡ್ಲೂರು ಗ್ರಾಮದ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿರುವ ಘಟನೆ. ಕೆಮಿಕಲ್ ಫ್ಯಾಕ್ಟರಿಗೆ ಬೆಂಕಿ ಹೊತ್ತಿದ್ದರಿಂದ ಸುತ್ತಲೂ ಆವರಿಸಿದ ದಟ್ಟವಾದ ಹೊಗೆ. ಬೆಂಕಿಯ ಕನ್ನಾಲೆಗೆ ಹೊತ್ತಿ ಉರಿದ ಅಪಾರ ಪ್ರಮಾಣದ ಕೆಮಿಕಲ್. ಬೆಂಕಿಯ ಜ್ವಾಲೆಗೆ ಅಕ್ಕಪಕ್ಕದ ಕೆಮಿಕಲ್ ಕಂಪನಿಗೂ ತಗಲುವ ಆತಂಕವಾಗಿದೆ. 

ಬೆಂಕಿ ಆವರಿಸುತ್ತಿದ್ದಂತೆ ಒಳಗಡೆ ಸಂಗ್ರಹಿಸಿಟ್ಟಿದ್ದ ಕೆಮಿಕಲ್ ಸ್ಫೋಟದಿಂದ ಹೊತ್ತಿ ಉರಿದ ಘಟಕ. ದಟ್ಟವಾದ ಹೊಗೆ ಜತೆಗೆ ಕೆಮಿಕಲ್‌ನ ವಿಷಕಾರಿ ಗಾಳಿ ಸುತ್ತಲು ಆವರಿಸಿದೆ. ಹೊಗೆ ಮತ್ತು ವಾಸನೆಯಿಂದ ಆತಂಕಗೊಂಡಿರುವ ಸ್ಥಳೀಯರು.

ದುರಂತದ ಮಾಹಿತಿ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, 5 ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.

ಅಗ್ನಿ ಅವಘಡ, ಅಪಾರ ಹಾನಿ

ಕೊಪ್ಪಳ: ನಗರದ ಕುಣಿಕೇರಿ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಹೋಟೆಲ್‌ ಸೇರಿದಂತೆ ಮೂರು ಅಂಗಡಿ ಭಸ್ಮವಾಗಿದ್ದು,ಲಕ್ಷಾಂತರ ಹಾನಿಯಾಗಿದೆ. ವಿದ್ಯುತ್‌ ಶಾರ್ಚ್‌ ಸಕ್ರ್ಯೂಟ್‌ನಿಂದ ಬೆಂಕಿ ಶುಕ್ರವಾರ ಮಧ್ಯಾಹ್ನ ಹೊತ್ತಿಕೊಂಡು ಅಪಾರ ಭಸ್ಮವಾಗಿದೆ.ಅಗ್ನಿಶಾಮಕ ದಳ ಬಂದು ನಂದಿಸುವ ವೇಳೆಗೆ ಬಹುತೇಕ ಸುಟ್ಟುಕರಕಲಾಗಿವೆ. ಸ್ಥಳಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ, ಜೆಡಿಎಸ್‌ ಅಭ್ಯರ್ಥಿ ಸಿ.ವಿ. ಚಂದ್ರಶೇಖರ ಹಾಗೂ ಬಿಜೆಪಿ ಮುಖಂಡ ಅಮರೇಶ ಕರಡಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ಸಂಚರಿಸುತ್ತಿದ್ದ ಸೇನಾ ವಾಹನದ ಮೇಲೆ ಉಗ್ರರ ಗ್ರೇನೇಡ್ ದಾಳಿ, ನಾಲ್ವರು ಯೋಧರು ಸಜೀವ ದಹನ!