ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐ ಆರ್ ದಾಖಲಾಗಿದೆ. ಇದಕ್ಕೆ ಕಾರಣ ಇಲ್ಲಿದೆ

ತುಮಕೂರು (ಅ.13): ಬಾಲಿವುಡ್ ‌ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ತುಮಕೂರಿನ ಕ್ಯಾತ್ಸಂದ್ರ ಠಾಣೆಯಲ್ಲಿ ಸಂಜನಾ ವಿರುದ್ಧ ಎಫ್‌ಐ ಆರ್ ದಾಖಲಾಗಿದೆ. ಜೆಎಂಎಫ್‌ಸಿ ಕೋರ್ಟ್ ನಿರ್ದೇಶನದ ಮೇರೆ ಎಪ್‌ಐಆರ್ ದಾಖಲಾಗಿದೆ. 

ಟ್ವಿಟರ್ ನಲ್ಲಿ ರೈತರನ್ನ ಭಯೋತ್ಪಾದಕರು ಎಂದು ನಿಂದಿಸಿದ್ದ ಕಂಗನಾ ರಣಾವತ್‌ ವಿರುದ್ಧ ತುಮಕೂರಿನ ವಕೀಲ ರಮೇಶ್ ನಾಯ್ಕ್ ಕೋರ್ಟ್ ಮೊರೆ ಹೋಗಿದ್ದರು.

ಕಂಗನಾ ರನೌತ್‌ಳನ್ನು ಯಾಕೆ ಬಾಲಿವುಡ್‌ನಲ್ಲಿ ಎಲ್ರೂ ದ್ವೇಷಿಸ್ತಾರೆ? .

ಕೇಂದ್ರ ಸರ್ಕಾರ ಜಾರಿ ತಂದಿದ್ದ ಕೃಷಿ ತಿದ್ದುಪಡಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದರಿಂದ ರೈತರನ್ನು ಕಂಗನಾ ಭಯೋತ್ಪಾದಕರು ಎಂದು ಹೇಳಿ ಟ್ವಿಟ್ಟರ್ನಲ್ಲಿ ನಿಂದಿಸಿದ್ದರು. ಈ ನಿಟ್ಟಿನಲ್ಲಿ 108,153,504,44 ಅಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ.