ಬೆಂಗಳೂರು (ಸೆ.18): ಆಸ್ತಿಗಾಗಿ ತಮ್ಮ ಮಾವನಿಗೆ ಕಿರುಕುಳ ನೀಡಿದ ಆರೋಪದ ಅಡಿಯಲ್ಲಿ ಜೆಡಿಎಸ್ ಕಾರ್ಪೊರೇಟರ್ ವಿರುದ್ಧ FIR ದಾಖಲಾಗಿದೆ. 

ವಾರ್ಡ್ ನಂಬರ್ 32ರ ಕಾರ್ಪೊರೇಟರ್ ನೇತ್ರ ನಾರಾಯಣ್ ವಿರುದ್ಧ ಕಿರುಕುಳ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

ನೇತ್ರ ನಾರಾಯಣ್ ಮಾವ ಜಯರಾಮಯ್ಯ ನೀಡಿದ ದೂರಿನ ಆದಾರದಲ್ಲಿ ಇದೀಗ ಎಫ್‌ಐಆರ್ ದಾಖಲಾಗಿದೆ. ಆಸ್ತಿ ವಿಚಾರವಾಗಿ ಹಲವು ತಿಂಗಳಿಂದ ಜಗಳ ನಡೆಯುತಿತ್ತು. 

ಗುಂಪು ಕಟ್ಟಿಕೊಂಡು ಬಂದು ಕಿರುಕುಳ ನೀಡುತ್ತಿದ್ದಾರೆ. ಮನೆ ಬಳಿ ಬಂದು ಬೆದರಿಕೆ ಹಾಕಿ ತಮ್ಮ ಖಾಸಗಿ ತನಕ್ಕೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು. 

ಈ ಸಂಬಂಧ ಡಿಜೆ ಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ನೇತ್ರಾ ನಾರಾಯಣ್ ವಿರುದ್ಧ ಎಫ್‌ಐ ಆರ್ ದಾಖಲಿಸಲಾಗಿದೆ. 

ನಟಿ ಆತ್ಮಹತ್ಯೆ: RX 100 ಸಿನಿಮಾ ನಿರ್ಮಾಪಕ ಅರೆಸ್ಟ್ ..

ದೂರಿನ ಸಂಬಂಧ ಎನ್‌ಸಿಆರ್ ಮಾಡಿದ ಪೊಲೀಸರು ಕೋರ್ಟ್ ಅನುಮತಿ ಪಡೆದು ಎಫ್‌ಐ ಆರ್ ದಾಖಲು ಮಾಡಿದ್ದಾರೆ.  

ಕಳೆದ ಜೂನ್ 20 ಎಂದು ದೂರು ದಾಖಲಾಗಿದ್ದು, ಇದಕ್ಕೆ ನೇತ್ರಾ ನಾರಾಯಣ್ ಕೂಡ ಪ್ರತಿದೂರು  ದಾಖಲಿಸಿದ್ದರು. ಇದೀಗ ಕೋರ್ಟ್ ಆದೇಶದ ಮೇರೆ ನೇತ್ರಾ ವಿರುದ್ಧ ಡಿಜೆ ಹಳ್ಳಿ ಠಾಣೆ ಪೊಲೀಸರು ಎಫ್‌ಐ ಆರ್ ದಾಖಲು ಮಾಡಿದ್ದಾರೆ.