ತುಮಕೂರು (ಅ.20) : ಉಪ ಚುನಾವಣೆ ನಾಮಪತ್ರ ಸಲ್ಲಿಸುವ ವೇಳೆ ಜನರಿಗೆ ಆಮಿಷವೊಡ್ಡಿದ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಶಿರಾದಲ್ಲಿ ಎಫ್‌ಐಆರ್‌ ದಾಖಲಾಗಿದೆ. 

ನಾಮಪತ್ರ ಸಲ್ಲಿಸುವ ದಿನ ಜನರನ್ನು ಕರೆ ತಂದು ಬೈಕ್‌ಗಳಿಗೆ ಪೆಟ್ರೋಲ್‌ ತುಂಬಿಸಿದ್ದಲ್ಲದೆ ಕಾರ್ಯಕರ್ತರಿಗೆ ಮದ್ಯ ಹಂಚಿದ ಆರೋಪ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಎಫ್‌ಎಸ್‌ಟಿ ತಂಡದಿಂದ ತಡವಾಗಿ ದೂರು ದಾಖಲಾಗಿದೆ. 

ಶಿರಾ ಬೈ ಎಲೆಕ್ಷನ್: ಪರಮೇಶ್ವರ್-ರಾಜಣ್ಣ ಬಿಜೆಪಿಗೆ ಬೆಂಬಲ ಕೊಡ್ತಾರಾ..?

ಫ್ಲೈಯಿಂಗ್‌ ಸ್ಕ್ವಾಡ್ ಟೀಂನಿಂದ ದೂರು ಹಿನ್ನೆಲೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಚುನಾವಣಾಧಿಕಾರಿ ನಂದಿನಿ ದೇವಿ ಆದೇಶದ ಮೇರೆಗೆ ಎಫ್‌ಎಸ್‌ಟಿ ತಂಡ ದೂರು ನೀಡಿತ್ತು.

ಉಪ ಚುನಾವಣೆ ಶಿರಾ ಹಾಗೂ ಆರ್‌ ಆರ್‌ ನಗರದಲ್ಲಿ ನಡೆಯಲಿದ್ದು ನವೆಂಬರ್ 3 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ನವೆಂಬರ್ 10 ರಂದು ಮತ ಎಣಿಕೆ ನಡೆಯಲಿದೆ.