ರಾಮನಗರ(ಜೂ.29):  ಹೋಂ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿ ಹೊರಗೆ ಓಡಾಡುತ್ತಿದ್ದ ಎಂಟು ಮಂದಿಯ ಮೇಲೆ ಎಫ್‌.ಐ.ಆರ್‌ ದಾಖಲಿಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿದ ರಾಮನಗರ ತಾಲೂಕಿನ ಮತ್ತು ಕನಕಪುರ ತಾಲೂಕಿನ ತಲಾ ನಾಲ್ಕು ಮಂದಿಯ ಮೇಲೆ ಸಂಬಂಧಪಟ್ಟ ತಹಸೀಲ್ದಾರ್‌ ಆಯಾಯ ತಾಲೂಕು ಆರಕ್ಷಕ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹೋಂ ಕ್ವಾರಂಟಿನ್‌ನಲ್ಲಿ ಇರಬೇಕಾದವರು ನಿಯಮಗಳನ್ನು ಉಲ್ಲಂಘಿಸಿ ಹೊರಗಡೆ ಓಡಾಡುವುದು ಮತ್ತು ಮನೆಯಲ್ಲಿ ಮೊಬೈಲ್‌ ಬಿಟ್ಟು ಹೋಗುವುದು ಇಲ್ಲವೇ ಇನ್ನಾರಿಗಾದರೂ ಮೊಬೈಲ್‌ ಕೊಟ್ಟಂತಹ ಸಂದರ್ಭಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹೊರಡಿಸಲಾದ ಮಾದರಿ ಮಾರ್ಗಸೂಚಿಗಳನ್ವಯ ಎಫ್‌.ಐ.ಆರ್‌ ದಾಖಲಿಸಲಾಗುವುದು. ಜೊತೆಗೆ ನಿಯಮ ಉಲ್ಲಂಘಿಸುವವರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟಿನ್‌ಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಎಸ್‌. ಅರ್ಚನಾ ತಿಳಿಸಿದ್ದಾರೆ.

ಕೊರೋನಾ ಸೋಂಕಿತರ ಜತೆ ವಿಡಿಯೋ ಸಂವಾದ: ರೋಗಿಗಳಿಗೆ ಧೈರ್ಯ ತುಂಬಿದ DCM ಅಶ್ವತ್ಥ ನಾರಾಯಣ

2 ಕೋವಿಡ್‌ ಪ್ರಕ​ರ​ಣ:

ಜಿಲ್ಲೆಯಲ್ಲಿ ಭಾನು​ವಾರ 2 ಕೋವಿಡ್‌ ಪಾಸಿಟಿವ್‌ ಪ್ರಕರಣ ದಾಖ​ಲಾ​ಗಿದ್ದು, ಒಟ್ಟು ಸೋಂಕಿ​ತರ ಸಂಖ್ಯೆ 150ಕ್ಕೆ ಏರಿಕೆ. ಮಾಗಡಿ ಹಾಗೂ ಚನ್ನ​ಪ​ಟ್ಟ​ಣ​ದ​ಲ್ಲಿ ತಲಾ ಒಂದೊಂದು ಪ್ರಕ​ರಣ ಕಂಡು ಬಂದಿ​ದ್ದು,​ಅ​ವ​ರನ್ನು ರಾಮ​ನ​ಗರ ಕೋವಿಡ ಆಸ್ಪ​ತ್ರೆ​ಗೆ ದಾಖ​ಲಿ​ಸ​ಲಾ​ಗಿದೆ. ಭಾನು​ವಾರ ಒಂದೇ ದಿನ 23 ಜನರು ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತಾರೆ.

ಮೃತ ವ್ಯಕ್ತಿಗೆ ಸೋಂಕು ದೃಢ:

ರಾಜ​ರಾ​ಜೇ​ಶ್ವರಿ ಆಸ್ಪ​ತ್ರೆ​ಯಲ್ಲಿ ಶನಿ​ವಾರ ಮಾಗಡಿ ಪಟ್ಟ​ಣದ 48 ವರ್ಷ ವಯ​ಸ್ಸಿನ ವ್ಯಕ್ತಿ ಕೊರೋನಾ ಸೋಂಕಿ​ನಿಂದಲೇ ಮೃತ​ಪ​ಟ್ಟಿ​ದ್ದಾರೆ ಎಂಬು​ದನ್ನು ಜಿಲ್ಲಾ​ಧಿ​ಕಾರಿ ಎಂ.ಎಸ್‌.ಅ​ರ್ಚನಾ ದೃಢ​ಪ​ಡಿ​ಸಿ​ದ್ದಾ​ರೆ. ಈ ಪ್ರಕ​ರಣ ಸೇರಿ​ದಂತೆ ಜಿಲ್ಲೆ​ಯಲ್ಲಿ ಕೋವಿಡ್‌ ಗೆ ಬಲಿ​ಯಾ​ದ​ವ​ರ ಸಂಖ್ಯೆ 7ಕ್ಕೆ ಏರಿ​ಕೆ​ಯಾ​ದಂತಾ​ಗಿ​ದೆ.