Asianet Suvarna News Asianet Suvarna News

ದೇಗುಲ ಪ್ರವೇಶಿಸಿದ 2 ವರ್ಷದ ದಲಿತ ಮಗು : ದಂಡ ವಿಧಿಸಿದ ಮುಖಂಡರು!

  •  ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ
  • ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ
  • ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮುಖಂಡರು ಶರತ್ತು
Fine imposed for Dalit child enters temple in koppal snr
Author
Bengaluru, First Published Sep 21, 2021, 7:32 AM IST
  • Facebook
  • Twitter
  • Whatsapp

 ಹನುಮಸಾಗರ (ಸೆ.21):  ಏನೂ ಅರಿಯದ ಎರಡು ವರ್ಷದ ಮಗುವೊಂದು ಅಚಾನಕ್‌ ಆಗಿ ದೇವಾಲಯ ಪ್ರವೇಶ ಮಾಡಿದ್ದಕ್ಕೆ ಹೆತ್ತವರಿಗೆ ದಂಡ ಹಾಗೂ ದೇವಸ್ಥಾನದಲ್ಲಿ ಕೈಕೊಳ್ಳಬೇಕಿರುವ ಶುದ್ಧಿಕಾರ್ಯಗಳಿಗೆ ತಗಲುವ ವೆಚ್ಚ ನೀಡುವಂತೆ ಗ್ರಾಮದ ಮುಖಂಡರು ಶರತ್ತು ವಿಧಿಸಿದ ಅಮಾನವೀಯ ಘಟನೆ ಕೊಪ್ಪಳ ಜಿಲ್ಲೆ ಹನುಮಸಾಗರ ಸಮೀಪದ ಮಿಯಾಪುರದಲ್ಲಿ ನಡೆದಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಅಸ್ಪೃಶ್ಯತಾ ನಿವಾರಣೆ ಜಾಗೃತಿ ಸಭೆ ನಡೆಸಿದ್ದು ದಂಡ ವಿಧಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.

"

ಮಾಸಿಕ ಖರ್ಚು 1.25 ಕೋಟಿ: ದೇಶದ ಶ್ರೀಮಂತ ದೇಗುಲದಲ್ಲಿ ಆರ್ಥಿಕ ಸಂಕಷ್ಟ

ಘಟನೆ ವಿವರ: ಚನ್ನದಾಸರ ಸಮುದಾಯದ 2 ವರ್ಷದ ಮಗುವನ್ನು ಸೆ.4ರಂದು ಅದರ ಜನ್ಮದಿನದ ಹಿನ್ನೆಲೆಯಲ್ಲಿ ತಂದೆ ದೇವರ ದರ್ಶನಕ್ಕೆಂದು ಕರೆದುಕೊಂಡು ಹೋಗಿದ್ದರು. ಆ ದೇವಸ್ಥಾನಕ್ಕೆ ದಲಿತರ ಪ್ರವೇಶ ಇಲ್ಲದ ಹಿನ್ನೆಲೆಯಲ್ಲಿ ದೇವಸ್ಥಾನದ ಹೊರಗಿಂದಲೇ ನಮಸ್ಕರಿಸಿ ತೆರಳುವುದು ಮಗುವಿನ ತಂದೆಯ ಆಲೋಚನೆಯಾಗಿತ್ತು. ಆದರೆ ಮಗು ದೇವಾಲಯದ ಒಳಗೆ ಹೋಗಿದೆ ಎನ್ನಲಾಗಿದೆ. ಇದನ್ನು ಗಮನಿಸಿದ ತಂದೆ ಮಗುವನ್ನು ಹೊರಗಡೆ ಕರೆದುಕೊಂಡು ಬಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆ.11ರಂದು ಗ್ರಾಮದಲ್ಲಿ ಮುಖಂಡರು ಸಭೆ ನಡೆಸಿ ದೇವಾಲಯ ಅಪವಿತ್ರವಾಗಿದ್ದು, ಹೋಮ ಹವನ ಮಾಡಿ ಸರಿಪಡಿಸಬೇಕು. ಅದಕ್ಕಾಗಿ 25 ಸಾವಿರ ದಂಡ, ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ಆಗುವ ವೆಚ್ಚ ನೀಡಬೇಕೆಂದು ಮಗುವಿನ ತಂದೆಗೆ ಷರತ್ತು ವಿಧಿಸಿದ್ದರು.

ಇದನ್ನು ಖಂಡಿಸಿರುವ ಚನ್ನದಾಸರ ಸಮುದಾಯದವರು ಪೊಲೀಸರ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಪೊಲೀಸ್‌, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ಗ್ರಾಪಂ ಅಧಿಕಾರಿಗಳು ಅಸ್ಪೃಶೃತಾ ನಿವಾರಣೆಯ ಜಾಗೃತಿ ಸಭೆ ನಡೆಸಿ, ಅಸ್ಪೃಶೃತೆ ಸಂಪೂರ್ಣವಾಗಿ ತೊಲಗಿದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ. ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಮಾಡಲು ಎಲ್ಲರಿಗೂ ಸಮಾನ ಅವಕಾಶವಿದೆ. ಅಸ್ಪೃಶೃತೆ ಆಚರಣೆ ಮಾಡುವುದು ಅಕ್ಷಮ್ಯ ಅಪರಾಧ, ಇನ್ನು ಮುಂದೆ ಗ್ರಾಮದಲ್ಲಿ ಈ ರೀತಿ ಚಟುವಟಿಕೆ ನಡೆದರೆ ಕಾನೂನು ಕ್ರಮ ಜರುಗಿಸಲಾಗವುದು ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್‌ ಎಂ.ಸಿದ್ದೇಶ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಾಲಚಂದ್ರ ಸಂಗನಾಳ, ಸಿಪಿಐ ನಿಂಗಪ್ಪ ಎನ್‌.ಆರ್‌, ಪಿಎಸ್‌ಐಗಳಾದ ತಿಮ್ಮಣ್ಣ ನಾಯಕ, ಅಶೋಕ ಬೇವೂರು, ಕಂದಾಯ ನಿರೀಕ್ಷಕ ಉಮೇಶಗೌಡ ಪಾಟೀಲ್‌, ಪಿಡಿಒ ವೆಂಕಟೇಶ ನಾಯ್‌್ಕ ಇದ್ದರು.

ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನಿರಂತರವಾಗಿ ಮುಂದುವರಿಯಲಿ, ಎಲ್ಲ ಸಮುದಾಯದವರು ಅನ್ಯೋನ್ಯವಾಗಿ ಬಾಳಿ ಬದುಕಲಿ ಎಂದು ದೂರು ದಾಖಲಿಸಲಿಲ್ಲ. ಆದರೆ ಇನ್ನು ಇಂತಹ ಘಟನೆ ಆಗದಂತೆ ಎರಡೂ ಸಮುದಾಯದ ಮುಖಂಡರು ನೋಡಿಕೊಳ್ಳಬೇಕು. ಪೊಲೀಸರು ಸಹ ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಳ್ಳಬೇಕು.

-ರಾಘವೇಂದ್ರ ಕೆ, ಚನ್ನದಾಸರ ಸಮುದಾಯದ ರಾಜ್ಯ ಸಂಘಟನಾ ಕಾರ್ಯದರ್ಶಿ

Follow Us:
Download App:
  • android
  • ios