ಮನೆ ನಿರ್ಮಿಸದ 77 ಮಂದಿಗೆ ಅಂತಿಮ ನೋಟಿಸ್
ಪ್ರಕೃತಿ ವಿಕೋಪದಡಿ ಮಂಜೂರಾದ ಮನೆಗಳ ಪೈಕಿ 77 ಮನೆಗಳ ಕಾಮಗಾರಿ ಪೂರ್ಣವಾಗದ ಹಿನ್ನೆಲೆ ಅಂತಿಮ ನೋಟಿಸ್ ನೀಡಿ ಕಡತವಿಲೇವಾರಿ ಮಾಡುವಂತೆ ತಹಸೀಲ್ದಾರ್ ಮಹಾಬಲೇಶ್ವರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ
ಕುಣಿಗಲ್ : ಪ್ರಕೃತಿ ವಿಕೋಪದಡಿ ಮಂಜೂರಾದ ಮನೆಗಳ ಪೈಕಿ 77 ಮನೆಗಳ ಕಾಮಗಾರಿ ಪೂರ್ಣವಾಗದ ಹಿನ್ನೆಲೆ ಅಂತಿಮ ನೋಟಿಸ್ ನೀಡಿ ಕಡತವಿಲೇವಾರಿ ಮಾಡುವಂತೆ ತಹಸೀಲ್ದಾರ್ ಮಹಾಬಲೇಶ್ವರ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ
ತಾಪಂ ಸಭಾಂಗಣದಲ್ಲಿ ಕರೆದಿದ್ದ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಮಂಜೂರಾದ ಮನೆಗಳಲ್ಲಿ 77 ಮನೆಗಳು ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ, ಈ ಪೈಕಿ 38 ಮನೆಗಳು ಕಾಮಗಾರಿ ಇದುವರೆಗೂ ಪ್ರಾರಂಭ ಆಗಿಲ್ಲ ಈ ರೀತಿಯ ಉದಾಸೀನತೆಯಿಂದ ಈ ಬಾರಿ ಯೋಜನೆಯ ಅನುಷ್ಠಾನಕ್ಕೆ ತೊಂದರೆ ಆಗಲಿದೆ. ಆದ್ದರಿಂದ ಕೊನೆಯ ನೋಟಿಸ್ ನೀಡಿ ಖಡತ ವಿಲೇವಾರಿ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮನೆ ಮಂಜೂರಾತಿಗೆ ಎರಡು ಲಕ್ಷದಿಂದ ನಾಕು ಲಕ್ಷದವರೆಗೆ ಸರ್ಕಾರ ಹಂತ ಹಂತವಾಗಿ ಅನುದಾನ ನೀಡಲಿದೆ. ಕೆಲವು ಫಲಾನುಭವಿಗಳು ಮೊದಲ ಕಂತು 95 ಸಾವಿರ ಪಡೆದು ಮುಂದಿನ ಹಂತದ ಕಾಮಗಾರಿ ಮಾಡಿಲ್ಲ. ಈ ಬಾರಿಯ ಫಲಾನುಭವಿಗಳಿಗೆ ಸವಲತ್ತು ನೀಡಲು ತೊಂದರೆ ಆಗುತ್ತದೆ. ಅದಕ್ಕೋಸ್ಕರ ಕಡತ ವಿಲೇವಾರಿಗೊಳಿಸಿ ಎಂದರು.
ಕುಡಿವ ನೀರಿನ ವಿಚಾರದಲ್ಲಿ ಗ್ರಾಮೀಣ ಭಾಗದಲ್ಲಿರುವ 102 ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆಯನ್ನು ಆಕ್ವಶೈನ್ ಜಲಸಿರಿ ಸೇರಿದಂತೆ ಬೇರೆಬೇರೆ ಏಜೆನ್ಸಿಗಳು ಮಾಡುತ್ತಿವೆ ಕೆಲವು ಘಟಕಗಳು ಸರಿಯಾಗಿ ನಿರ್ವಹಣೆ ಇಲ್ಲ ಎಂಬ ದೂರಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಅವಶ್ಯಕತೆ ಇರುವ ಸ್ಥಳಗಳಲ್ಲಿ ಕೊಳವೆ ಬಾವಿ ಕೊರೆಯಲು ಸರ್ಕಾರ ತಯಾರಾಗಿದೆ ತಕ್ಷಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಫರ್ನಾಂಡಿಸ್ ಗ್ರಾಮೀಣ ಕುಡಿವ ನೀರಿನ ಮತ್ತು ನೈರ್ಮಲ್ಯ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸೀತಾರಾಮ್ ಪುರಸಭಾ ಮುಖ್ಯ ಅಧಿಕಾರಿ ಶಿವಪ್ರಸಾದ್ ಇದ್ದರು