Asianet Suvarna News Asianet Suvarna News

ಹಲ್ಲೆ ಪ್ರಯತ್ನ ನಡೆದಿತ್ತು, ಪ್ರಾಣ ಭಯವಿದ್ರೂ ಅಕ್ರಮ ಗಣಿ ವಿರುದ್ಧ ಹೋರಾಟ ನಿಲ್ಲದು: ಸುಮಲತಾ

ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟಕ್ಕಿಳಿದಾಗ ನನಗೆ ಪ್ರಾಣ ಬೆದರಿಕೆ ಇತ್ತು. ಕೆಆರ್‌ಎಸ್‌ ಡ್ಯಾಂ ಉಳಿಸುವ ಗುರಿಯನ್ನಿಟ್ಟುಕೊಂಡು ಅಕ್ರಮ ಗಣಿ ನಡೆಸುವವರ ವಿರುದ್ಧ ಸಮರ ನಡೆಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು.

fight against illegal mining will never stop  Says MP sumalatha ambareesh gow
Author
First Published Feb 24, 2024, 1:34 PM IST

ಮಂಡ್ಯ (ಫೆ.24): ಅಕ್ರಮ ಗಣಿಗಾರಿಕೆ ವಿರುದ್ಧ ನಾನು ಏಕಾಂಗಿಯಾಗಿ ಹೋರಾಟಕ್ಕಿಳಿದಾಗ ನನಗೆ ಪ್ರಾಣ ಬೆದರಿಕೆ ಇತ್ತು. ಆದರೂ ನಾನು ಯಾವ ಬೆದರಿಕೆಗೂ ಹೆದರದೆ ಹೋರಾಟ ಮಾಡಿದ್ದೇನೆ. ಕೆಆರ್‌ಎಸ್‌ ಡ್ಯಾಂ ಉಳಿಸುವ ಗುರಿಯನ್ನಿಟ್ಟುಕೊಂಡು ಅಕ್ರಮ ಗಣಿ ನಡೆಸುವವರ ವಿರುದ್ಧ ಸಮರ ನಡೆಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಶುಕ್ರವಾರ ಸಭೆವೊಂದರಲ್ಲಿ ಮಾತನಾಡಿದ ಅವರು, ಗಣಿ ವಿರುದ್ಧದ ನನ್ನ ಹೋರಾಟಕ್ಕೆ ಯಾರ ಬೆಂಬಲವೂ ಇರಲಿಲ್ಲ. ನಾನು ಗಣಿ ಹೋರಾಟಕ್ಕೆ ಇಳಿದಾಗ ನನಗೆ ನಿರಂತರವಾಗಿ ಒತ್ತಡ ಬರುತ್ತಿತ್ತು. ಗಣಿಗಾರಿಕೆ ಹೋರಾಟ ನಿಲ್ಲಿಸಬೇಕೆಂದು ಪ್ರಾಣ ಬೆದರಿಕೆಯನ್ನೂ ಹಾಕಿದ್ದರು. ಆದರೂ ಎದೆಗುಂದಲಿಲ್ಲ ಎಂದರು.

ಮಂಡ್ಯ ಹಾಸನ ಕೋಲಾರ ಜೆಡಿಎಸ್‌ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್‌ ಗ್ರೀನ್‌ಸಿಗ್ನಲ್, ಸುಮಲತಾ ನಡೆಯೇನು?

ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿದೆ. ಆಗ ನನ್ನ ಮೇಲೆ ಹಲ್ಲೆ ನಡೆಸುವ ಪ್ರಯತ್ನವೂ ನಡೆದಿತ್ತು. ಆಗ ಕೆಲವು ಮಹಿಳೆಯರು ನನ್ನ ರಕ್ಷಣೆಗೆ ನಿಂತಿದ್ದರು ಎಂದು ತಿಳಿಸಿದರು. ಅಕ್ರಮ ಗಣಿಗಾರಿಕೆ ವಿರುದ್ಧ ದಿಟ್ಟತನದ ಹೋರಾಟ ನಡೆಸಿದ ಪರಿಣಾಮವಾಗಿ ಹೈಕೋರ್ಟ್ ಕೃಷ್ಣರಾಜಸಾಗರ ಅಣೆಕಟ್ಟು ವ್ಯಾಪ್ತಿಯ 20 ಕಿ.ಮೀ. ಸುತ್ತ ಗಣಿಗಾರಿಕೆಯನ್ನು ನಿಷೇಧಿಸಿದೆ. ಇದು ನನ್ನ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.

 ಮದುವೆಯಾಗಲು ಖ್ಯಾತ ಟಿವಿ ನಿರೂಪಕನನ್ನು ಅಪಹರಿಸಿದ ಉದ್ಯಮಿ ಮಹಿಳೆ!

 ಮಂಡ್ಯ ಕ್ಷೇತ್ರ ತೊರೆಯುವ ಪ್ರಶ್ನೆಯೇ ಇಲ್ಲ: ಸುಮಲತಾ
ಮದ್ದೂರು: ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ತೊರೆದು ಹೋಗುವ ಪ್ರಶ್ನೆಯೇ ಇಲ್ಲ ಎಂದು ಸಂಸದೆ ಸುಮಲತಾ ಶುಕ್ರವಾರ ಪ್ರತಿಕ್ರಿಯೆ ನೀಡಿದರು. ಪಟ್ಟಣದ ಕೋಟೆ ಬೀದಿಯ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಲ್ಲಿ ಸಂಸದರ ಅನುದಾನದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ನನ್ನ ಪತಿ ಅಂಬರೀಶ್ ಇದೇ ಮಂಡ್ಯ ನೆಲದಲ್ಲಿ ಹುಟ್ಟಿ ಇಲ್ಲಿನ ರಾಜಕಾರಣ ಮೂಲಕ ಜನರ ಸೇವೆ ಮಾಡಿದ್ದಾರೆ. ನಾನು ಅವರ ಪತ್ನಿ, ನಾನೇಕೆ ಕ್ಷೇತ್ರ ಬಿಟ್ಟು ಹೋಗಲಿ. ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತಾ ಎಂದರು.

ಅಂಬರೀಶ್ ಅವರು ಇಹಲೋಕ ತ್ಯಜಿಸಿದಾಗ ಅವರಿಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳಿಸಿಕೊಟ್ಟಿದ್ದೇವೆ. ಆನಂತರ ನಾನು ಮಂಡ್ಯದಿಂದಲೇ ಸಂಸದೆಯಾಗಿ ಆಯ್ಕೆಯಾಗಿದ್ದೇನೆ. ನಾನು ಈಗೇಕೆ ಮಂಡ್ಯ ಕ್ಷೇತ್ರ ಬಿಟ್ಟು ಹೋಗಲಿ ನನ್ನ ಸ್ಪರ್ಧೆ ಮಂಡ್ಯದಿಂದಲೇ ಎಂದು ಹೇಳಿದರು. ಜೆಡಿಎಸ್ ಗೆ ಮಂಡ್ಯ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನುವುದು ಅಂತೆ ಕಂತೆಗಳ ಸುದ್ದಿಯಾಗಿದೆ ಅಷ್ಟೆ ಎಂದರು.

Follow Us:
Download App:
  • android
  • ios