ಮದುವೆಯಾಗಲು ಖ್ಯಾತ ಟಿವಿ ನಿರೂಪಕನನ್ನು ಅಪಹರಿಸಿದ ಉದ್ಯಮಿ ಮಹಿಳೆ!
ಮದುವೆಯಾಗುವ ಉದ್ದೇಶದಿಂದ ಉದ್ಯಮಿ ಮಹಿಳೆಯೊಬ್ಬರು ಟಿವಿ ನಿರೂಪಕನನ್ನು ಅಪಹರಿಸಿದ ಆಶ್ಚರ್ಯಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ.
ಹೈದರಾಬಾದ್ (ಫೆ.24): ಮದುವೆಯಾಗುವ ಉದ್ದೇಶದಿಂದ ಉದ್ಯಮಿ ಮಹಿಳೆಯೊಬ್ಬರು ಟಿವಿ ನಿರೂಪಕನನ್ನು ಅಪಹರಿಸಿದ ಆಶ್ಚರ್ಯಕರ ಘಟನೆ ಹೈದರಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ.
ಮಹಿಳೆಯು ಎಂತಹ ಚಾಲಾಕಿಯೆಂದರೆ ಮ್ಯೂಸಿಕ್ ಚಾನಲ್ ನಲ್ಲಿ ನಿರೂಪಕನಾಗಿರುವ ಪ್ರಣವ್ ಸಿಸ್ಲಾ (Pranav Sistla) ಚಲನ ವಲನಗಳನ್ನು ಗಮನಿಸಲು ಆತನ ಕಾರಿನಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಫೋನ್ ಸಂಭಾಷಣೆ ಕದ್ದಾಲಿಸಿ 15 ಕೋಟಿ ರೂ ಲಾಭ ಗಳಿಸಿದ ಪತಿ!
ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರ ನಡೆಸುತ್ತಿರುವ 31 ವರ್ಷದ ಮಹಿಳೆ ಭೋಗಿರೆಡ್ಡಿ ತೃಷ್ಣಾ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಟಿವಿ ಆ್ಯಂಕರ್ ಫೋಟೋಗಳನ್ನು ನೋಡಿ ಎರಡು ವರ್ಷಗಳ ಹಿಂದೆ ಖಾತೆದಾರರೊಂದಿಗೆ ಚಾಟ್ ಮಾಡಲು ಪ್ರಾರಂಭಿಸಿದ್ದಳು. ಆದರೆ ಆ ಖಾತೆದಾರನು ತನ್ನ ಸ್ವಂತ ಫೋಟೋದ ಬದಲಿಗೆ ಟಿವಿ ಆಂಕರ್ ಫೋಟೋವನ್ನು ಮ್ಯಾಟ್ರಿಮೋನಿ ಸೈಟ್‌ನಲ್ಲಿ ಪ್ರೊಫೈಲ್ ಚಿತ್ರವಾಗಿ ಬಳಸಿಕೊಂಡಿದ್ದ ಎಂಬುದನ್ನು ಮಹಿಳೆ ತಡವಾಗಿ ಅರಿತುಕೊಂಡಳು.
ನಂತರ ಅವಳು ಪ್ರೊಫೈಲ್ ಮೂಲಕ ಟಿವಿ ನಿರೂಪಕನನ್ನು ಹುಡುಕಿದಳು ಮತ್ತು ಆತನ ಫೋನ್ ನಂಬರ್ ಕೂಡ ಸಂಗ್ರಹಿಸಿದಳು. ಆಕೆ ಇನ್‌ಸ್ಟೆಂಟ್ ಮೆಸೇಜಿಂಗ್ ಆಪ್ ಮೂಲಕ ಆ್ಯಂಕರ್‌ನನ್ನು ಸಂಪರ್ಕಿಸಿದಳು. ಆದರೆ ಯಾರೋ ಅಪರಿಚಿತ ವ್ಯಕ್ತಿ ತನ್ನ ಫೋಟೋವನ್ನು ಬಳಸಿ ಮ್ಯಾಟ್ರಿಮೋನಿ ಸೈಟ್‌ನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿದ್ದಾನೆ . ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದೇನೆ ಎಂದು ನಿರೂಪಕ ಮಾಹಿತಿ ನೀಡಿದರು.
ಮತ್ತೆ ಅನ್ನದಾತ-ಪೊಲೀಸರ ಸಂಘರ್ಷ: ಇನ್ಸ್‌ಪೆಕ್ಟರ್‌ಗೆ ಗಾಯ, ರೈತರ ಸಾವಿನ ಸಂಖ್ಯೆ 4ಕ್ಕೆ ಏರಿಕೆ
ಆದರೆ, ಮಹಿಳೆ ಆ್ಯಂಕರ್‌ಗೆ ಸಂದೇಶ ಕಳುಹಿಸುವುದನ್ನು ಮುಂದುವರಿಸಿದ್ದಾಳೆ. ಮಹಿಳೆಯ ಕಾಟ ತಾಳಲಾರದೆ ನಿರೂಪಕ ನಂಬರ್ ಬ್ಲಾಕ್ ಮಾಡಿದ್ದಾನೆ. ಆದರೆ ಆಂಕರ್‌ನನ್ನು ಮದುವೆಯಾಗಲು ನಿರ್ಧರಿಸಿದ್ದ ಮಹಿಳೆ, ಈ ಎಲ್ಲಾ ವಿಚಾರಗಳನ್ನು ಸರಿಪಡಿಸಬಹುದು ಎಂದು ಭಾವಿಸಿ ನಿರೂಪಕನನ್ನು ಅಪಹರಿಸಲು ಯೋಜಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಯೋಜನೆಯಂತೆ ಅವಳು ಆಂಕರ್ ಅನ್ನು ಅಪಹರಿಸಲು ನಾಲ್ಕು ಜನರನ್ನು ನೇಮಿಸಿಕೊಂಡಳು ಮತ್ತು ಅವನ ಚಲನವಲನಗಳನ್ನು ವೀಕ್ಷಿಸಲು ನಿರೂಪಕನ ಕಾರಿನಲ್ಲಿ ಟ್ರ್ಯಾಕಿಂಗ್ ಸಾಧನವನ್ನು ಅಳವಡಿಸಿದಳು. ಫೆಬ್ರವರಿ 11 ರಂದು, ನಾಲ್ವರು ಬಾಡಿಗೆ ಪುರುಷರು ನಿರೂಪಕನನ್ನು ಅಪಹರಿಸಿ ಮಹಿಳೆಯ ಕಚೇರಿಗೆ ಕರೆದೊಯ್ದು ಮನಬಂದಂತೆ ಕೆಟ್ಟದಾಗಿ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆದರಿಕೆ ಬಳಿಕ ಪ್ರಾಣಭಯದಿಂದ ಟಿವಿ ನಿರೂಪಕ ಮಹಿಳೆಯ ಕರೆಗಳಿಗೆ ಪ್ರತಿಕ್ರಿಯಿಸಲು ಒಪ್ಪಿಕೊಂಡರು. ಆ ಬಳಿಕವೇ ಕಿಡ್ನಾಪರ್ಸ್ ಆತನನ್ನು ಬಿಟ್ಟು ಮನೆಗೆ ಕಳುಹಿಸಿದ್ದಾರೆ. ಇದಾದ ಬಳಿಕ ಘಟನೆಗೆ ಸಂಬಂಧಿಸಿದಂತೆ ನಿರೂಪಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, 363 (ಅಪಹರಣ), 341 (ತಪ್ಪು ತಿಳುವಳಿಕೆ), 342 (ಅಕ್ರಮ ಬಂಧನ), ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದಾದ ಬಳಿಕ ಮಹಿಳೆ ಮತ್ತು ನಾಲ್ವರು ಅಪಹರಣಕಾರರನ್ನು ಬಂಧಿಸಲಾಗಿದೆ.
31 ವರ್ಷದ ಭೋಗಿರೆಡ್ಡಿ ತೃಷ್ಣಾ ಅವರು ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ಮಾರ್ಕೆಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ಭೋಗಿರೆಡ್ಡಿ ತೃಷ್ಣಾ ಅವರು CMO ಮತ್ತು ಮುಖ್ಯ ಡಿಜಿಟಲ್ ಮಾರ್ಕೆಟಿಂಗ್ ಸ್ಟ್ರಾಟೆಜಿಸ್ಟ್ ಆಗಿದ್ದಾರೆ. ಅವರು ಕೋಝಿಕ್ಕೋಡ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಮಾಡಿದ್ದಾರೆ.