ಸರ್ಕಾರದ ಸೌಲಭ್ಯಕ್ಕಾಗಿ ಎಫ್‌ಐಡಿ ಕಡ್ಡಾಯ

ತಾಲೂಕಿನ ರೈತರು ಕೃಷಿ ಮತ್ತು ಸಂಬಂಧಪಟ್ಟ ಇಲಾಖೆಯ ವತಿಯಿಂದ ಸರ್ಕಾರದ ಸೌಲಭ್ಯ ಪಡೆಯಲು ಎಫ್‌ಐಡಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್. ಚನ್ನಕೇಶವಮೂರ್ತಿ ತಿಳಿಸಿದ್ದಾರೆ.

FID is mandatory for Govt facility snr

ತಿಪಟೂರು: ತಾಲೂಕಿನ ರೈತರು ಕೃಷಿ ಮತ್ತು ಸಂಬಂಧಪಟ್ಟ ಇಲಾಖೆಯ ವತಿಯಿಂದ ಸರ್ಕಾರದ ಸೌಲಭ್ಯ ಪಡೆಯಲು ಎಫ್‌ಐಡಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್. ಚನ್ನಕೇಶವಮೂರ್ತಿ ತಿಳಿಸಿದ್ದಾರೆ.

ರೈತ ಭಾಂದವರು ಜಮೀನಿನ ದಾಖಲೆಗಳನ್ನು ಅವರ ಎಫ್‌ಐಡಿಯೊಂದಿಗೆ ಜೋಡಣೆ ಮಾಡಿಸುವುದರ ಮುಖೇನ ಸರ್ಕಾರದ ಸವಲತ್ತುಗಳಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ, ಬರ ಪರಿಹಾರ, ಬೆಳೆ ವಿಮೆ, ಕನಿಷ್ಟ ಬೆಂಬಲ ಬೆಲೆ ಯೋಜನೆ, ತೋಟಗಾರಿಕೆ ಇಲಾಖೆಯ ವಿವಿಧ ಸವಲತ್ತುಗಳು, ರೇಷ್ಮೇ ಇಲಾಖೆಯ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಿದೆ. ಇದುವರೆವಿಗೆ ಎಫ್‌ಐಡಿ ಮಾಡಿಸದ ರೈತರು ಹೊಸದಾಗಿ ಎಫ್‌ಐಡಿ ಮಾಡಿಸುವುದು ಹಾಗೂ ಈಗಾಗಲೆ ಎಫ್‌ಐಡಿ ಸೃಜನೆಯಾಗಿದ್ದಲ್ಲಿ ತಮಗೆ ಸಂಬಂಧಿಸಿದ ಎಲ್ಲಾ ಭೂ ದಾಖಲಾತಿಗಳ ಸರ್ವೆ ನಂಬರ್‌ಗಳನ್ನು ಎಫ್‌ಐಡಿಗೆ ಸೇರ್ಪಡೆ ಮಾಡಿಸಬೇಕು ಎಂದರು.

ಪ್ರಸಕ್ತ ಸಾಲಿನಲ್ಲಿ ಘೋಷಣೆಯಾಗಿರುವ ಬರಪರಿಹಾರ ಮೊತ್ತವನ್ನು ಪಡೆಯಲು ಎಫ್‌ಐಡಿ ಸಹ ಕಡ್ಡಾಯವಾಗಿದ್ದು ರೈತ ಬಾಂಧವರು ತಮ್ಮ ಜಮೀನು ಹೊಂದಿರುವುದಕ್ಕೆ ದಾಖಲೆಯಾದ ಪಹಣಿ, ಆಧಾರ್ ಜೆರಾಕ್ಸ್, ಬ್ಯಾಂಕ್ ಪಾಸ್ ಪುಸ್ತಕವನ್ನು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ ಸಂಪರ್ಕಿಸಿ ಎಫ್‌ಐಡಿ ಮಾಡಿಸಿಕೊಳ್ಳಲು ಹಾಗೂ ಎಲ್ಲಾ ಜಮೀನಿನ ಸರ್ವೆ ನಂಬರ್‌ಗಳನ್ನು ಎಫ್‌ಐಡಿಗೆ ಜೋಡಣೆ ಮಾಡಿಸಬೇಕೆಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios