ಕಲಬುರಗಿ(ಆ.13): ಮೊದಲ ಬಾರಿಗೆ ಬೆಂಗಳೂರು-ಕಲಬುರಗಿ ಮಧ್ಯೆ ಸ್ಟಾರ್‌ ಏರ್‌ವೇಸ್‌ನ ವಿಮಾನವನ್ನು ಮಹಿಳಾ ಪೈಲಟ್‌ಗಳು ತಂಡ ಯಶಸ್ವಿಯಾಗಿ ಹಾರಿಸಿ ಗಮನ ಸೆಳೆದಿದೆ. 

ಇಬ್ಬರು ಹಿರಿಯ ಪೈಲಟ್‌ ಸೇರಿ ನಾಲ್ವರು ಮಹಿಳೆಯರ ತಂಡ ಬುಧವಾರದ ಬೆಂಗಳೂರು- ಕಲಬುರಗಿ ಸ್ಟಾರ್‌ ವಿಮಾನ ಸೇವೆ ಪ್ರಯಾಣಿಕರಿಗೆ ನೀಡಿತು. ಕಲಬುರಗಿ ಸಂಸದ ಡಾ. ಉಮೇಶ್‌ ಜಾಧವ್‌ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಯಶಸ್ವಿಯಾಗಿ ವಿಮಾನ ಹಾರಿಸಿದ ಮಹಿಳಾ ಪೈಲಟ್‌ ತಂಡವನ್ನು ಅಭಿನಂದಿಸಿದ್ದಾರೆ. 

'ಬರೀ ಡಿಕೆಶಿ ಅಷ್ಟೇ ಅಲ್ಲ, ಓವೈಸಿ ಕೂಡ ಜೈ ಶ್ರೀರಾಮ ಹೇಳೋ ಕಾಲ ಬರ್ತದೆ'

ಸ್ಟಾರ್‌ ಏರ್‌ವೇಸ್‌ನ ಮಹಿಳಾ ತಂಡಕ್ಕೆ ಶಕ್ತಿ ಬೆಂಬಲ ನೀಡುವ ಈ ಕ್ರಮವನ್ನು ಸಂಸದ ಡಾ.ಉಮೇಶ್‌ ಜಾಧವ್‌ ಅವರು ತಮ್ಮ ಟ್ವಿಟರ್‌ ಸಂದೇಶದ ಮೂಲಕ ಮೆಚ್ಚಿಕೊಂಡಿದ್ದಾರೆ.