ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟಆಗಿರುವ ಸಾವನದುರ್ಗ ಬೆಟ್ಟಹತ್ತಲು ಪ್ರವಾ​ಸಿ​ಗ​ರಿಗೆ ಶುಲ್ಕ ನಿಗದಿ ಪಡಿಸಿ ಇಕೋ ಟೂರಿಸಂ ಶಾಕ್‌ ನೀಡಿ​ದ್ದು, ಇದಕ್ಕೆ ಸ್ಥಳೀ​ಯ​ರಿಂದ ತೀವ್ರ ವಿರೋಧ ವ್ಯಕ್ತ​ವಾ​ಗಿದೆ.

ಮಾಗಡಿ : ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟಆಗಿರುವ ಸಾವನದುರ್ಗ ಬೆಟ್ಟಹತ್ತಲು ಪ್ರವಾ​ಸಿ​ಗ​ರಿಗೆ ಶುಲ್ಕ ನಿಗದಿ ಪಡಿಸಿ ಇಕೋ ಟೂರಿಸಂ ಶಾಕ್‌ ನೀಡಿ​ದ್ದು, ಇದಕ್ಕೆ ಸ್ಥಳೀ​ಯ​ರಿಂದ ತೀವ್ರ ವಿರೋಧ ವ್ಯಕ್ತ​ವಾ​ಗಿದೆ.

ಸಾವ​ನ​ದು​ರ್ಗ​ದಲ್ಲಿ ಬೆಟ್ಟ ಹತ್ತುವ ಪ್ರವಾ​ಸಿ​ಗರು ಆನ್‌ ಲೈನ್‌ ಮೂಲಕ ಶುಲ್ಕ ಪಾವ​ತಿ​ಸುವು​ದನ್ನು ಕಡ್ಡಾ​ಯ​ಗೊ​ಳಿ​ಸಿದೆ. ಆದರೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿ​ಸದೆ ಏಕಾಏಕಿ ಶುಲ್ಕ ಪಾವತಿಸಬೇಕೆಂದು ಟೂರಿಸಂ ಮಾಡಿರುವ ಕ್ರಮಕ್ಕೆ ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಪ್ರವಾಸಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಿ ನಂತರವಷ್ಟೇ ಬೆಟ್ಟಹತ್ತಲು ಅವಕಾಶ ಎಂದು ಬೋರ್ಡ್‌ಗಳನ್ನು ಹಾಕಲಾಗಿದ್ದು, ಒಬ್ಬರಿಗೆ 303 ರುಪಾ​ಯಿ ನಿಗದಿ ಮಾಡಿರುವುದು ದುಬಾರಿಯಾಗಿದೆ. ಮೂಲ ಸೌಲಭ್ಯಗಳಿಲ್ಲದೆ ಇಷ್ಟುಶುಲ್ಕ ಏಕೆ ಪಾವತಿ ಮಾಡಬೇಕು. ಬೆಟ್ಟದ ಮೇಲೆ ಯಾವುದೇ ನೋಡುವಂತಹ ದೃಶ್ಯಗಳಿಲ್ಲ. ಜೊತೆಗೆ ಪ್ರವಾಸಿಗರಿಗೆ ಯಾ ವುದೇ ಸುರಕ್ಷಿತ ಕ್ರಮಗಳೂ ಇಲ್ಲ. ದುಬಾರಿ ವೆಚ್ಚ ನೀಡಿ ಕುಡಿಯುವ ನೀರನ್ನು ಪಡೆಯಬೇಕು. ಜೊತೆಗೆ ಬೆಟ್ಟ ಹತ್ತಲು ಸರಿಯಾದ ಮಾರ್ಗದರ್ಶನವಿಲ್ಲ ರಜಾ ದಿನಗಳಲ್ಲಿ ಸಾಕಷ್ಟು ಪ್ರವಾಸಿಗರು ಬೆಟ್ಟ ನೋಡಲೆಂದೇ ಬರುತ್ತಿದ್ದರು. ಈಗ ಶುಲ್ಕ ಪಾವತಿ ಮಾಡಬೇಕೆಂದು ಹೇಳುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸ್ಥಳೀಯ ವ್ಯಾಪಾರ ಸ್ಥರಿಗೂ ತೀವ್ರ ತೊಂದರೆಯಾಗಿದೆ. ಕೂಡಲೇ ಇಕೋ ಟೂರಿಸಂ ರವರು ಶುಲ್ಕವನ್ನು ಕೈಗೆಟುಕುವ ದರ ನಿಗದಿ ಮಾಡಬೇಕು. ಜೊತೆಗೆ ಮೂಲ ಸೌಲಭ್ಯಗಳನ್ನು ಕೊಟ್ಟಾಗ ಮಾತ್ರ ಪ್ರವಾಸಿಗರು ಆಗ​ಮಿ​ಸುತ್ತಾರೆ. ಇಲ್ಲವಾದರೆ ಈ ರೀತಿ ಕಾಟಾಚಾರಕ್ಕೆ ಎಂಬಂತೆ ಶುಲ್ಕ ನಿಗದಿ ಮಾಡಿರುವುದರಿಂದ ಸ್ಥಳೀಯರ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಇಕೋ ಟೂರಿಸಂ ಕೂಡಲೇ ಬೆಟ್ಟ ಹತ್ತಲು ಯಾವುದೇ ಶುಲ್ಕ ಪಡೆಯಬಾರದು. ಇಲ್ಲವಾದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ನರಸಿಂಹ ಶೆಟ್ಟಿಆಕ್ರೋ ಶ ವ್ಯಕ್ತಪಡಿಸಿದ್ದಾರೆ.

ಮೂಲ ಸೌಲಭ್ಯಗಳಿಲ್ಲ:

ಬಿಜೆಪಿ ಸರ್ಕಾರ ಸಾವನದುರ್ಗವನ್ನು ಅಭಿವೃದ್ಧಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಬರುವಂತಹ ಪ್ರವಾಸಿಗರಿಗೆ ಶೌಚಗೃಹ, ಕುಡಿಯುವ ನೀರಿನ ವ್ಯವಸ್ಥೆ, ಹೋಟೆಲ್‌ಗಳು ಪಾಕಿಂರ್‍ಗ್‌ ವ್ಯವಸ್ಥೆ ಸೇರಿದಂತೆ ಸುರಕ್ಷಿತ ಕ್ರಮಗಳು ಇಲ್ಲ. ಆದರೂ ಕೂಡ ಈಗ ಬೆಟ್ಟಹತ್ತಲು ಶುಲ್ಕ ನಿಗದಿ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಆರ್‌ಟಿಐ ಕಾರ್ಯಕರ್ತ ನಾಗರಾಜು ಪ್ರಶ್ನಿಸಿದ್ದಾರೆ.

2 ದಿನಗಳಿಂದ ಶುಲ್ಕ: ಕಳೆದ ಎರಡು ದಿನಗಳಿಂದ ಆನ್‌ಲೈನ್‌ ಮೂಲಕ ಶುಲ್ಕ ಪಾವತಿ ಮಾಡಲಾಗುತ್ತಿದ್ದು ಬೇರೆ ಪ್ರವಾಸಿ ತಾಣವನ್ನು ಹೋಲಿಕೆ ಮಾಡಿದರೆ ಇಲ್ಲಿ ದುಬಾರಿ ಬೆಲೆ ಕೊಡಬೇಕಾಗಿದ್ದು ಇಷ್ಟುಬೆಲೆ ಕೊಡುವುದು ಸರಿ ಬರುತ್ತಿಲ್ಲ ಎಂದು ಶುಲ್ಕ ಕಟ್ಟಿದ ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.