ಗದಗ[ಜು. 17]  ಕಂಡಕ್ಟರ್ ಹಾಗೂ ಪ್ರಯಾಣಿಕರ ನಡುವೆ ಕಿರಿಕ್ ಆಗಿದೆ.  ಪ್ರಯಾಣಿಕರ ಕಿರಿಕ್ ನಿಂದ ಪರಿಣಾಮ ಚಾಲಕ ಬಸ್ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಧಾರವಾಡ ಜಿಲ್ಲೆ  ನವಲಗುಂದ ತಾಲೂಕಿನ ಅಮರಗೊಳಕ್ಕೆ ಬಸ್  ನರಗುಂದ ಪಟ್ಟಣದಿಂದ ತೆರಳುತ್ತಿತ್ತು. ಈ ವೇಳೆ ಅಮರಗೊಳ ನಿವಾಸಿ ಸತೀಶ ಹಾಗೂ ಬಸ್ ಕಂಡಕ್ಟರ್ ನಡುವೆ ಗಲಾಟೆ ಆರಂಭವಾಗಿದೆ. ಕಂಡಕ್ಟರ್ ಹಾಗೂ ಪ್ರಯಾಣಿಕನ ನಡುವಿನ ಜಗಳ ಅತಿಯಾಗಿ ಉಳಿದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

ಇದು ಪರಿಹಾರ ಕಾಣುವ ಲಕ್ಷಣ ಕಾಣದಿದ್ದಾಗ ಚಾಲಕ ಬಸ್ ಅನ್ನು ನರಗುಂದ ಪೊಲೀಸ್ ಠಾಣೆಗೆ ಚಲಾಯಿಸಿದ್ದಾರೆ. ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಪೊಲೀಸ್ ಠಾಣೆ ಎದುರು ಪ್ರಯಾಣಿಕರನ್ನು ಹೊತ್ತು ಬಸ್ ನಿಂತಿದೆ. ಬಸ್ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಜನರ ಪ್ರಯಾಣ ಮಾಡುತ್ತಿದ್ದರು.