Asianet Suvarna News Asianet Suvarna News

22 ರಿಂದ ಮಾ. 1ರವರೆಗೆ ಟಿಬೆಟಿಯನ್‌ ನ್ಯೂ ಇಯರ್‌ ಸಂಭ್ರಮ

ವೈವಿಧ್ಯತೆಯಲ್ಲಿ ಏಕತೆಗೆ ಮತ್ತೊಂದು ಹೆಸರು ನಮ್ಮ ಭಾರತ. ಇಲ್ಲಿನ ಪರಂಪರೆ ಸಂಸ್ಕೃತಿ ಆಚರಣೆ ನಿಜಕ್ಕೂ ಭಿನ್ನ. ಬೇರೆ ಬೇರೆ ಸಮುದಾಯದ ಧರ್ಮದ ಆಚರಣೆಗಳು ಎಲ್ಲರ ಗಮನ ಸೆಳೆದಿವೆ. ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ನಡೆಯುವ ಟಿಬೆಟಿಯನ್‌ರ ಸಾಂಪ್ರದಾಯಿಕ ಹಬ್ಬ ಜನ ಮನಸೂರೆಗೊಳ್ಳುವಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿದೆ.

Feb 22 to March 11  Tibetan New Year celebrations  snr
Author
First Published Feb 19, 2023, 5:41 AM IST

ಬಿ.ಆರ್‌. ರಾಜೇಶ್‌

 ಬೈಲಕುಪ್ಪೆ :  ವೈವಿಧ್ಯತೆಯಲ್ಲಿ ಏಕತೆಗೆ ಮತ್ತೊಂದು ಹೆಸರು ನಮ್ಮ ಭಾರತ. ಇಲ್ಲಿನ ಪರಂಪರೆ ಸಂಸ್ಕೃತಿ ಆಚರಣೆ ನಿಜಕ್ಕೂ ಭಿನ್ನ. ಬೇರೆ ಬೇರೆ ಸಮುದಾಯದ ಧರ್ಮದ ಆಚರಣೆಗಳು ಎಲ್ಲರ ಗಮನ ಸೆಳೆದಿವೆ. ಅದೇ ಮಾದರಿಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆಯಲ್ಲಿ ನಡೆಯುವ ಟಿಬೆಟಿಯನ್‌ರ ಸಾಂಪ್ರದಾಯಿಕ ಹಬ್ಬ ಜನ ಮನಸೂರೆಗೊಳ್ಳುವಲ್ಲಿ ಹಲವಾರು ವರ್ಷಗಳಿಂದ ಯಶಸ್ವಿಯಾಗಿದೆ.

ಹೊಸ ವರ್ಷದ ದಿನಾಂಕ ಅವರವರ ಸಂಪ್ರದಾಯ ಆಚರಣೆಗೆ ಅನುಗುಣವಾಗಿ ಬದಲಾಗುತ್ತದೆ. ಜನವರಿ ಒಂದನ್ನು ಜಗತ್ತಿನ ಅನೇಕ ಭಾಗದಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸಲಾಗುತ್ತದೆ. ಆದರೆ ಸನಾತನ ಹಿಂದೂ ಧರ್ಮದ ಪ್ರಕಾರ ಜನವರಿ 1 ಕ್ಯಾಲೆಂಡರ್‌ ಬದಲಾವಣೆಯ ದಿನ.

ಯುಗಾದಿ ನಮಗೆ ಹೊಸ ವರ್ಷದ ಆರಂಭ. ಅದೇ ರೀತಿ ಟಿಬೆಟಿಯನ್‌ರ ಹೊಸ ವರ್ಷ ಆರಂಭವಾಗುವುದು ಫೆಬ್ರವರಿ ಅಥವಾ ಮಾಚ್‌ರ್‍ನಲ್ಲಿ ಅದುವೇ ಲೋಸರ್‌ ಹಬ್ಬ.

ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸಾಕಷ್ಟುಜನ ಟಿಬೆಟಿಯನ್‌ರು ಇದ್ದಾರೆ. ಅವರೆಲ್ಲರೂ ಬಹುತೇಕ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ. ನಮ್ಮ ಕೆಲ ಸಂಸ್ಕೃತಿ ಭಾಷೆಯ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಇದರ ಜೊತೆಗೆ ತಮ್ಮ ಪರಂಪರೆ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತಿ ವರ್ಷ ಪಿರಿಯಾಪಟ್ಟಣದ ಬೈಲುಕುಪ್ಪೆ ಟಿಬೆಟಿಯನ್‌ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. 10 ರಿಂದ 15 ದಿನಗಳ ಕಾಲ ಟಿಬೆಟಿಯನ್‌ ಹೊಸ ವರ್ಷದ ಸಂಭ್ರಮ ಸಡಗರ ಜೋರಾಗಿಯೇ ನಡೆಯುತ್ತದೆ. ಈ ಬಾರಿ ಫೆ. 22 ರಿಂದ ಈ ಟಿಬೆಟಿಯನ್‌ ಹೊಸ ವರ್ಷ ಆರಂಭವಾಗುತ್ತಿದೆ. ಹೊಸ ವರ್ಷದ ಆಚರಣೆಗೆ ಪಿರಿಯಾಪಟ್ಟಣದ ಬೈಲಕುಪ್ಪೆಯಲ್ಲಿ ಸಿದ್ದತೆ ಭರ್ಜರಿಯಾಗಿ ನಡೆದಿದೆ.

ಹೊಸ ವರ್ಷಕ್ಕೂ ಮುನ್ನ ಗೂತುರ್‌

ಟಿಬೆಟಿಯನ್‌ರು ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಗೂತೂರ್‌ ಹೆಸರಿನ ಆಚರಿಸುವ ಸಂಪ್ರದಾಯವಿದೆ. ಗೂತೂರ್‌ ಆಚರಣೆಯ ಮೂಲಕ ದುಷ್ಟಶಕ್ತಿಗಳನ್ನು ನಿಗ್ರಹಿಸಲಾಗುತ್ತದೆ. ಈ ಆಚರಣೆ ತಸಿಲಾಂಬೋ ದೇವಸ್ಥಾನದಲ್ಲಿ ನಡೆಸಲಾಗಿದ್ದು, ಇದಕ್ಕಾಗಿ ಬೌದ್ದ ಸನ್ಯಾಸಿಗಳಿಂದ ದಿನವಿಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಟಿಬೆಟಿಯನ್‌ರು ಹುಲಿ ಮುಖವಾಡ ಸೇರಿ ಹಲವು ವೇಷಗಳನ್ನು ಧರಿಸಿ ನೃತ್ಯ ಮಾಡಿದರೆ, ಸಾವಿರಾರು ಟಿಬೆಟಿಯನ್‌ರು ಹಬ್ಬದಲ್ಲಿ ಭಾಗವಹಿಸಿ ಆ ಸುಂದರ ಕ್ಷಣಗಳನ್ನು ಕಣ್ತುಂಬಿ ಕೊಳ್ಳುತ್ತಾರೆ.

ಕೊರೋನಾ ಹಿನ್ನೆಲೆ ಮೂರು ವರ್ಷ ಸ್ಥಗಿತವಾಗಿದ್ದ ಹಬ್ಬ

ಪ್ರತಿ ವರ್ಷದ ವಿಶೇಷ ಆಚರಣೆಗೆ ಕಳೆದ ಮೂರು ವರ್ಷಗಳಿಂದ ಬ್ರೇಕ… ಬಿದ್ದಿತ್ತು. ಕೊರೋನಾ ಮಹಾಮಾರಿಯ ಭೀತಿಯಿಂದಾಗಿ ಸರ್ಕಾರ ಎಲ್ಲ ಧಾರ್ಮಿಕ ಆಚರಣೆಗಳಿಗೂ ಬ್ರೇಕ್‌ ಹಾಕಿತ್ತು. ಕೆಲವು ಆಚರಣೆಗಳಿಗೆ ಮಾತ್ರ ನಿಯಮಬದ್ದವಾಗಿ ಸರಳವಾಗಿ ಆಚರಿಸಲು ಸೂಚಿಸಿತ್ತು. ಆದರೂ ಟಿಬೆಟಿಯನ್‌ರ ಕಳೆದ ಮೂರು ವರ್ಷಗಳಿಂದ ಆಚರಣೆಗೆ ಬ್ರೇಕ… ಹಾಕಿದ್ದರು. ಸ್ವಯಂಪ್ರೇರಿತವಾಗಿ ಹೊಸ ವರ್ಷದ ಆಚರಣೆಯನ್ನು ಕೈ ಬಿಟ್ಟಿದ್ದರು. ಹೊಸ ವರ್ಷದ ಆಚರಣೆಯ ಹಣವನ್ನು ಕೊರೋನಾ ಸಂಕಷ್ಟಕ್ಕೆ ಸಿಲುಕಿದ್ದ ಪಿರಿಯಾಪಟ್ಟದ ಜನರಿಗೆ ಕಿಚ್‌ ವಿತರಿಸಲು ಬಳಸಿ ಮಾನವೀಯತೆ ಮೆರೆದಿದ್ದರು. ಇದೀಗ ಕೊರೋನಾ ಸಂಕಷ್ಟಕಾಲ ದೂರವಾದ ಕಾರಣ ಅದ್ದೂರಿಯಾಗಿ ಟಿಬೆಟಿಯನ್‌ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ಈ ಸಡಗರ ಸಂಭ್ರಮ ಇದೇ ರೀತಿ ಇರಲಿ. ನಾಡಿನಲ್ಲಿ ಸುಖಃ ಸಮೃದ್ದಿ ಶಾಂತಿ ನೆಲೆಸಲಿ ಅನ್ನೋದೆ ಎಲ್ಲರ ಆಶಯ.

ಗ್ರೇಚ್‌ ಪ್ರೇಯರ್‌ ಫೆಸ್ಟಿವಲ್

ಲೋಸರ್‌ನ ಮತ್ತೊಂದು ವಿಶೇಷವೆಂದರೆ ’ಮೊನ್ಲಾಮ…’, ಇದನ್ನು ದಿ ಗ್ರೇಟ್‌ ಪ್ರೇಯರ್‌ ಫೆಸ್ಟಿವಲ… ಎಂದೂ ಕರೆಯುತ್ತಾರೆ. ಎಲ್ಲ ಸಂಪ್ರದಾಯಗಳ ಎಲ್ಲ ಪವಿತ್ರ ಗುರುಗಳ ದೀರ್ಘಾಯುಷ್ಯಕ್ಕಾಗಿ, ಎಲ್ಲ ಜೀವಿಗಳ ಮನಸ್ಸಿನಲ್ಲಿ ಧರ್ಮದ ಉಳಿವಿಗಾಗಿ ಮತ್ತು ಹರಡುವಿಕೆಗಾಗಿ ಮತ್ತು ವಿಶ್ವಶಾಂತಿಗಾಗಿ ಪ್ರಾರ್ಥಿಸುವುದು ಮೋನ್ಲಂನ ಮುಖ್ಯ ಉದ್ದೇಶವಾಗಿದೆ.

ವಿದೇಶದಿಂದ ಆಗಮಿಸಿದ ಟಿಬೆಟಿಯನ್ನರು: ಪ್ರತಿ ವರ್ಷ ಜನವರಿ ಫೆಬ್ರವರಿ ಬಂತು ಎಂದರೆ ವಿದೇಶದಲ್ಲಿ ಕೆಲಸದಲ್ಲಿ ತೊಡಗಿಕೊಂಡಿರುವ ಟಿಬೆಟಿಯನ್‌ ಜನಗಳು ತಮ್ಮ ಹಬ್ಬವನ್ನು ಭಾರತದ ನಾಡ ಕಡೆಗಳಲ್ಲಿ ಇರುವ ಕುಟುಂಬಸ್ಥರೊಂದಿಗೆ ಬಂದು ಒಟ್ಟುಗೂಡಿ ಸಡಗರ ಸಂಭ್ರಮದಿಂದ ಹಬ್ಬದ ಆಚರಣೆ ಮಾಡುತ್ತಿದ್ದರು. ಆದರೆ ದೇಶಾದ್ಯಂತ ಹಬ್ಬಿದ ಕೊರೋನಾದಿಂದ ಮೂರು ವರ್ಷಗಳ ಕಾಲ ಇತ್ತ ಕಡೆ ಪ್ರಯಾಣ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನರು ಭಾರತಕ್ಕೆ ಆಗಮಿಸಿ ತಮ್ಮ ಹಬ್ಬವನ್ನು ಆಚರಿಸಲು ಮುಂದಾಗಿದ್ದಾರೆ.

Follow Us:
Download App:
  • android
  • ios