Asianet Suvarna News Asianet Suvarna News

ಸತತ ಮಳೆ: ಉಕ್ಕಿ ಹರಿಯುತ್ತಿರುವ ನದಿಗಳು, ಬೆಳ್ತಂಗಡಿಯಲ್ಲಿ ಪ್ರವಾಹ ಭೀತಿ

ನೇತ್ರಾವತಿ ಹಾಗೂ ಮೃತ್ಯುಂಜಯ ನದಿಯಲ್ಲಿ ನೀರಿನ ಮಟ್ಟ ಏರಿಕೆ| ಕಳೆದ ಬಾರಿ ನೆರೆ ಸಂದರ್ಭ ನದಿಯಲ್ಲಿ ಮರಳು ಹಾಗೂ ಕಸಕಡ್ಡಿ ಮರಗಳನ್ನು ತೆರವುಗೊಳಿಸದೇ ಇರುವುದರಿಂದ ಈ ಸಲದ ಮಳೆಗೆ ನೆರೆ ಬರಲು ಕಾರಣವಾಗಬಹುದು ಎಂದು ಜನರ ಇನ್ನಷ್ಟು ಆತಂಕ|

Fears of flooding in Beltangadi in Dakshina Kannada district for Heavy Rain
Author
Bengaluru, First Published Jun 8, 2020, 11:47 AM IST

ಬೆಳ್ತಂಗಡಿ(ಜೂ.08): ತಾಲೂಕಿನ ದಿಡುಪೆ, ಕಿಲ್ಲೂರು, ಕುಕ್ಕಾವು ಮಿತ್ತಬಾಗಿಲು, ಮಲವಂತಿಗೆ ಭಾಗದಲ್ಲಿ ಶನಿವಾರ ಸಂಜೆ ಸತತ ಮಳೆ ಬಿದ್ದ ಪರಿಣಾಮ ನದಿಗಳು ಉಕ್ಕಿ ಹರಿದಿವೆ.

ನೇತ್ರಾವತಿ ಹಾಗೂ ಮೃತ್ಯುಂಜಯ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಜನರು ನೆರೆ ಭೀತಿಯ ಆತಂಕದಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ಮಳೆ ಬಂದು ತಗ್ಗು ಪ್ರದೇಶಗಳೆಲ್ಲ ನೀರಿನಿಂದ ಮುಳುಗಿದ್ದು ಕಳೆದ ವರ್ಷದ ನೆರೆಯನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ.

ದಕ್ಷಿಣ ಕನ್ನಡ: ಕೊರೋನಾ ಸಮಯದಲ್ಲಿ 40 ಡೆಂಘೀ ಕೇಸ್‌!

ಕಳೆದ ಬಾರಿ ನೆರೆ ಸಂದರ್ಭ ನದಿಯಲ್ಲಿ ಮರಳು ಹಾಗೂ ಕಸಕಡ್ಡಿ ಮರಗಳನ್ನು ತೆರವುಗೊಳಿಸದೇ ಇರುವುದರಿಂದ ಈ ಸಲದ ಮಳೆಗೆ ನೆರೆ ಬರಲು ಕಾರಣವಾಗಬಹುದು ಎಂದು ಜನರು ಇನ್ನಷ್ಟು ಆತಂಕ ಪಡು​ತ್ತಿ​ದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಇದೊಂದು ಕಾರಣವಾಗಬಹುದು ಎಂದು ಜನರಾಡಿಕೊಳ್ಳುತ್ತಿದ್ದಾರೆ. ಭಾ​ನು​ವಾರ ಬೆಳಗ್ಗೆ ನೆರೆ ನೀರು ಸಂಪೂರ್ಣ ಇಳಿದಿರುವುದು ಕಂಡು ಬಂದಿದೆ.
 

Follow Us:
Download App:
  • android
  • ios