Asianet Suvarna News Asianet Suvarna News

ಪ.ಬಂಗಾಲ ವಲಸೆ ಕಾರ್ಮಿಕರಿಂದ ದ.ಕ.ದಲ್ಲಿ ಕೋವಿಡ್‌ ಹೆಚ್ಚಳ ಭೀತಿ..?

*  ಪಶ್ಚಿಮ ಬಂಗಾಲದ ಅಲ್ಲಲ್ಲಿ ಈಗ ಲಾಕ್‌ಡೌನ್‌
*  ಉಳಿದ ಕಡೆಯಿಂದ ದ.ಕ. ಜಿಲ್ಲೆಗೆ ಕಾರ್ಮಿಕರ ಅವ್ಯಾಹತ ವಲಸೆ
*  ವಲಸೆ ಕಾರ್ಮಿಕರ ತಪಾಸಣೆ ಇಲ್ಲ, ಕೋವಿಡ್‌ ಟೆಸ್ಟೂ ನಡೆಯುತ್ತಿಲ್ಲ
 

Fear of Increase in Covid From West Bengal Migrant Workers in Dakshina Kannada grg
Author
Bengaluru, First Published Oct 29, 2021, 2:43 PM IST
  • Facebook
  • Twitter
  • Whatsapp

ಆತ್ಮಭೂಷಣ್‌

ಮಂಗಳೂರು(ಅ.29):  ದಿನೇ ದಿನೇ ಕೊರೋನಾ(Coronavirus) ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ದ.ಕ. ಜಿಲ್ಲೆಯಲ್ಲಿ ಮತ್ತೆ ಕೋವಿಡ್‌ ಉಲ್ಬಣಕ್ಕೆ ಪಶ್ಚಿಮ ಬಂಗಾಲದಿಂದ ವಲಸೆ ಬರುತ್ತಿರುವ ಕಾರ್ಮಿಕರು ಕಾರಣರಾಗುತ್ತಾರಾ ಎಂಬ ಆತಂಕ ಎಲ್ಲರಲ್ಲಿ ಮನೆ ಮಾಡಿದೆ.

ಕೇರಳದಲ್ಲಿ(Kerala) ಕೋವಿಡ್‌(Covid19) ಅಲೆ ಇಳಿಮುಖವಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ(West Begal) ಈಗ ಲಾಕ್‌ಡೌನ್‌(Lockdown) ಆರಂಭವಾಗಿದೆ. ಕಳೆದ ಒಂದು ವಾರದಿಂದ ಅಲ್ಲಿನ ಕೆಲವು ನಗರಗಳು ಲಾಕ್‌ಡೌನ್‌ಗೆ ಒಳಗಾಗಿವೆ. ಇದೇ ವೇಳೆ ಅಲ್ಲಿಂದ ರೈಲಿನಲ್ಲಿ ಸರಾಗವಾಗಿ ಮಂಗಳೂರಿಗೆ(Mangaluru) ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಇದು ಇಲ್ಲಿನ ಜಿಲ್ಲಾಡಳಿತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ದ.ಕ. ಜಿಲ್ಲೆಯಲ್ಲಿ(Dakshina Kannada) ಕೊರೋನಾ ಸೋಂಕಿನ ಸಂಖ್ಯೆಯನ್ನು ಶೂನ್ಯಕ್ಕೆ ಇಳಿಸಬೇಕು ಎಂಬ ಆಶಯಕ್ಕೆ ತಣ್ಣೀರು ಎರಚುವಂತೆ ವಲಸಿಗರು ವಕ್ಕರಿಸುತ್ತಿದ್ದಾರೆ ಎಂಬ ಮಾಹಿತಿ ಜಿಲ್ಲಾಡಳಿತವನ್ನು(District Administration) ತಲುಪಿದೆ.

ಭಾರತದಲ್ಲೇ  ಕೋವಿಡ್ ಟ್ಯಾಬ್ಲೆಟ್  ಸಿದ್ಧ.. ಒಂದು ಮಾತ್ರೆಗೆ ದರ ಎಷ್ಟು?

ಕೋವಿಡ್‌ ಎರಡನೇ ಅಲೆಯ ಅನ್‌ಲಾಕ್‌(Unlock) ಬಳಿಕ ಈಗ ದ.ಕ.ದಲ್ಲಿ ವಲಸೆ ಕಾರ್ಮಿಕರ ಚಟುವಟಿಕೆ ಚಿಗಿತುಕೊಂಡಿದೆ. ನೂರಾರು ವಲಸೆ ಕಾರ್ಮಿಕರು(Migrant Workers) ಮರಳಿ ಆಗಮಿಸುತ್ತಿದ್ದಾರೆ. ಕಟ್ಟಡ ನಿರ್ಮಾಣ ಮಾತ್ರವಲ್ಲದೆ, ಮರಳುಗಾರಿಕೆ, ಮೀನುಗಾರಿಕೆ, ಹೊಟೇಲ್‌ ಉದ್ಯಮಗಳಲ್ಲಿ ಪಶ್ಚಿಮ ಬಂಗಾಳದವರು ಕೂಡ ತೊಡಗಿಸಿಕೊಂಡಿದ್ದಾರೆ. ಈಗ ಪಶ್ಚಿಮ ಬಂಗಾಲದಲ್ಲಿ ಕೋವಿಡ್‌ ಜಾಸ್ತಿಯಾಗಿರುವುದರಿಂದ ಅಲ್ಲಿಂದ ಇಲ್ಲಿಗೆ ಆಗಮಿಸುವ ಕಾರ್ಮಿಕರ ಬಗ್ಗೆ ನಿಗಾ ಇರಿಸಿಕೊಳ್ಳುವ ವ್ಯವಸ್ಥೆ ಇಲ್ಲ. ಇದು ಹೊಸ ಬಗೆಯ ಆತಂಕಕ್ಕೆ ಕಾರಣವಾಗಿದೆ.

ರೈಲು ಮುಕ್ತ ರಹದಾರಿ: 

ಪ್ರಸಕ್ತ ದ.ಕ.ಜಿಲ್ಲೆಯನ್ನು ಪ್ರವೇಶಿಸುವ ಸರಹದ್ದುಗಳಲ್ಲಿ ಬಿಗು ತಪಾಸಣೆಯೇನೋ ಇದೆ. ಆದರೆ ಇದು ಕೇರಳಿಗರಿಗೆ ಮಾತ್ರ ಎಂಬಂತಾಗಿದೆ. ಜಿಲ್ಲಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ(CheckPost) ಕೇರಳದಿಂದ ಆಗಮಿಸುವವರನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ರೈಲಿನಲ್ಲಿ(Train) ಆಗಮಿಸುವ ಪ್ರಯಾಣಿಕರನ್ನು(Passengers) ಬಿಗು ತಪಾಸಣೆಗೆ ಒಳಪಡಿಸುತ್ತಿಲ್ಲ. ಮಂಗಳೂರಿನ ರೈಲು ನಿಲ್ದಾಣಗಳೇ ಪಶ್ಚಿಮ ಬಂಗಾಲ ವಲಸೆ ಕಾರ್ಮಿಕರ ದ.ಕ. ಪ್ರವೇಶಕ್ಕೆ ಮುಕ್ತ ರಹದಾರಿಯಾಗಿ ಪರಿಣಮಿಸಿದೆ.

ವಲಸೆ ಬಂದವರ ಅಂಕಿ ಅಂಶವೇ ಇಲ್ಲ: 

2019ರ ಲಾಕ್‌ಡೌನ್‌ ವೇಳೆ ವಲಸೆ ಕಾರ್ಮಿಕರ ನಿರ್ಗಮನ ಮತ್ತು ಆಗಮನ ಸರ್ಕಾರದ ಸೇವಾ ಸಿಂಧು ವೆಬ್‌ಪೋರ್ಟಲ್‌ನಲ್ಲಿ ದಾಖಲಾಗುತ್ತಿತ್ತು. ಕಾರ್ಮಿಕ ಇಲಾಖೆ ಸಂಗ್ರಹಿಸಿದ ಅಂಕಿಅಂಶ ಪ್ರಕಾರ ದ.ಕ. ಜಿಲ್ಲೆಗೆ ದೇಶದ 9 ರಾಜ್ಯಗಳಿಂದ 22,956 ಮಂದಿ ಕಾರ್ಮಿಕರು ವಲಸೆ ಬಂದಿದ್ದಾರೆ. ಅವರಲ್ಲಿ 1,505 ಪಶ್ಚಿಮ ಬಂಗಾಳದವರು. 2020ರಲ್ಲಿ 2ನೇ ಲಾಕ್‌ಡೌನ್‌ ವೇಳೆ ಇಲ್ಲಿಂದ ತೆರಳಿದ ಒಟ್ಟು 276 ಹೊರ ರಾಜ್ಯದ(Karnataka) ಕಾರ್ಮಿಕರ ಪೈಕಿ ಪಶ್ಚಿಮ ಬಂಗಾಲದವರು 129 ಮಂದಿ. ನಂತರದ ದಿನಗಳಲ್ಲಿ ಇಲ್ಲಿವರೆಗೆ ದ.ಕ.ಗೆ ಬಂದವರು ಹಾಗೂ ಇಲ್ಲಿಂದ ತೆರಳಿದವರು ಎಷ್ಟು ಮಂದಿ ಎಂಬ ಬಗ್ಗೆ ಮಾಹಿತಿ ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಜಿಲ್ಲಾಡಳಿತದಲ್ಲೂ ಇಲ್ಲ.

ರಾಜ್ಯದಲ್ಲಿ AY 4.2 ವೈರಾಣು ಪತ್ತೆ: ರೂಪಾಂತರಿ ವಿಚಾರದಲ್ಲಿ ನಿರ್ಲಕ್ಷ್ಯ ಸಲ್ಲದು..!

ಕೋವಿಡ್‌ 2ನೇ ಅಲೆ ವೇಳೆ ವಲಸೆ ಕಾರ್ಮಿಕರ ಬಗ್ಗೆ 1ನೇ ಅಲೆ ಸಂದರ್ಭ ಇದ್ದಂತೆ ಬಿಗು ಕಟ್ಟುನಿಟ್ಟು ಇರಲಿಲ್ಲ. ವಲಸೆ ಕಾರ್ಮಿಕರು ತಮ್ಮ ಪಾಡಿಗೆ ತಾವು ಬಂದು ಹೋಗುತ್ತಿದ್ದಾರೆ. ಹೀಗಾಗಿ ಎಷ್ಟುಮಂದಿ ಕಾರ್ಮಿಕರು ಹೊರ ರಾಜ್ಯದಿಂದ, ಅದರಲ್ಲೂ ಪಶ್ಚಿಮ ಬಂಗಾಲದಿಂದ ಇಲ್ಲಿಗೆ ಬರುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಮಾಹಿತಿಯೇ ಸಿಗುವುದಿಲ್ಲ.

ಪ್ರಸಕ್ತ ಕೋವಿಡ್‌ಗೆ ಸಂಬಂಧಿಸಿ ರಾಜ್ಯ ಸರ್ಕಾರದಿಂದ(Government of Karnataka) ವಲಸೆ ಕಾರ್ಮಿಕರ ಬಗ್ಗೆ ನಿರ್ದಿಷ್ಟಮಾರ್ಗದರ್ಶನ ಬಂದಿಲ್ಲ. ಕೋವಿಡ್‌ ಪ್ರಕರಣ ಇರುವ ಪಶ್ಚಿಮ ಬಂಗಾಲದಿಂದ ವಲಸೆ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಿರುವ ವಿಚಾರ ಈಗಷ್ಟೆ ಗೊತ್ತಾಗಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ವಲಸೆ ಕಾರ್ಮಿಕರನ್ನು ಕರೆಸುತ್ತಿರುವವರು ಈ ಬಗ್ಗೆ ಕಾರ್ಮಿಕ ಇಲಾಖೆಯಲ್ಲಿ ಕಡ್ಡಾಯವಾಗಿ ಮಾಹಿತಿ ನೀಡುವಂತೆ ಸೂಚಿಸಲಾಗುವುದು. ಅಲ್ಲದೆ ಈಗಾಗಲೇ ಬಂದಿರುವ ಕಾರ್ಮಿಕರನ್ನು ಆರ್‌ಟಿಪಿಸಿಆರ್‌(RTPCR) ತಪಾಸಣೆ ನಡೆಸಿ, ರೈಲು ನಿಲ್ದಾಣಗಳಲ್ಲಿ ಮತ್ತೆ ಕಟ್ಟುನಿಟ್ಟಿನ ತಪಾಸಣೆ ನಡೆಸುವ ಕುರಿತಂತೆ ಸರ್ಕಾರದ ಮಾರ್ಗದರ್ಶನ ಕೋರಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ(Dr Rajendra) ತಿಳಿಸಿದ್ದಾರೆ. 
 

Follow Us:
Download App:
  • android
  • ios