ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ: ಜಿಲ್ಲಾಡಳಿತಕ್ಕೆ ಮಾಹಿತಿನೇ ಇಲ್ವಾ?
ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ವಿಲೇವಾರಿ| ಕಳೆದ ಎಂಟು ದಿನಗಳಲ್ಲಿ 7-8 ಸಾವಿರ ಕೋಳಿಗಳ ಸಾವು| ಪೌಲ್ಟ್ರಿ ಫಾರಂ ಮಾಲೀಕರಿಂದ ಹಕ್ಕಿಜ್ವರವ ಮುಚ್ಚಿ ಹಾಕುವ ಯತ್ನ| ಸತ್ತ ಕೋಳಿಗಳನ್ನು ಲ್ಯಾಬ್‌ಗೆ ಕಳಿಸದ ಪಶು ವೈದ್ಯಕೀಯ ಅಧಿಕಾರ ವರ್ಗ|
ದಾವಣಗೆರೆ(ಮಾ.15): ಮಹಾಮಾರಿ ಕೊರೋನಾ ವೈರಸ್ ಹಾವಳಿ ಮಧ್ಯೆ ಜಿಲ್ಲೆಯಲ್ಲಿ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಹೌದು, ಜಿಲ್ಲೆಯ ಹರಿಹರ ತಾಲೂಕಿನ ಕೊಂಡಜ್ಜಿ ಪೌಲ್ಟ್ರಿ ಫಾರಂನಲ್ಲಿ ಸಾವಿರಾರು ಕೋಳಿಗಳು ನಿಗೂಢವಾಗಿ ಸಾವನ್ನಪ್ಪುತ್ತಿವೆ. ಇದರಿಂದ ಜಿಲ್ಲಾದ್ಯಂತ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಸತ್ತ ಕೋಳಿಗಳನ್ನು ಹತ್ತಿರದ ಕೊಂಡಜ್ಜಿ ಗುಡ್ಡಕ್ಕೆ ರವಾನೆ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಚೀಲಗಳಲ್ಲಿ ಸತ್ತ ಕೋಳಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಕಳೆದ ಎಂಟು ದಿನಗಳಲ್ಲಿ 7-8 ಸಾವಿರ ಕೋಳಿಗಳು ಸಾವನ್ನಪ್ಪಿವೆ. ಪೌಲ್ಟ್ರಿ ಫಾರಂ ಮಾಲೀಕರು ಹಕ್ಕಿಜ್ವರವನ್ನು ಮುಚ್ಚಿ ಹಾಕುವ ಯತ್ನ ನಡೆಸಿದ್ದಾರೆ. ಕೋಳಿಗಳು ಸಾಯುತ್ತಿರುವ ವಿಷಯವನ್ನು ಪಶು ಆರೋಗ್ಯ ಇಲಾಖೆಗೆ ತಿಳಿಸದೇ ದೊಡ್ಡ ಪ್ರಮಾದವನ್ನೇ ಮಾಡಲಾಗಿದೆ. ಪೌಲ್ಟ್ರಿ ಉದ್ಯಮಕ್ಕೆ ಹೊಡೆತ ಬೀಳುತ್ತದೆ ಎಂದು ಪೌಲ್ಟ್ರಿ ಫಾರಂ ಮಾಲೀಕರಿಂದ ತೆರೆಮರೆಯಲ್ಲಿ ಇಂತಹ ಕೃತ್ಯ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ದಾವಣಗೆರೆ: ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ- ಮಗು ಸಾವು?, ಉದ್ರಿಕ್ತರಿಂದ ಪ್ರತಿಭಟನೆ
ಸತ್ತ ಕೋಳಿಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹರಡದಂತೆ ಹೀಗೆ ಮಾಡಲಾಗಿದೆ. ಕೋಳಿಗಳು ನಿಗೂಢವಾಗಿ ಸಾಯುತ್ತಿರುವುದರಿಂದ ರಾತ್ರೋ ರಾತ್ರಿ ಕೋಳಿ ಫಾರಂಗಳು ಬರಿದಾಗುತ್ತಿವೆ. ಇದರಿಂದ ಪೌಲ್ಟ್ರಿ ಮಾಲೀಕರಿಗೆ ಲಕ್ಷಾಂತರ ರೂ.ನಷ್ಟ ಉಂಟಾಗಿದೆ
ಆದರೆ, ಹಕ್ಕಿಜ್ವರದ ಶಂಕೆಯ ಮಾಹಿತಿ ಮುಚ್ಚಿಡುತ್ತಿರುವ ಪ್ರಯತ್ನವನ್ನ ಪೌಲ್ಟ್ರಿ ಮಾಲೀಕರು ಮಾಡುತ್ತಿದ್ದಾರೆ. ಈ ಮೂಲಕ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಜಿಲ್ಲೆಯಯಲ್ಲೀ ಈಗಾಗಲೇ 7-8 ಸಾವಿರ ಕೋಳಿ ಸತ್ತರೂ ಕೂಡ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲ. ಇಷ್ಟೆಲ್ಲಾ ಆದ್ರೂ ಪಶು ವೈದ್ಯಕೀಯ ಅಧಿಕಾರ ವರ್ಗ ಮಾತ್ರ ಸತ್ತ ಕೋಳಿಗಳನ್ನು ಲ್ಯಾಬ್‌ಗೆ ಕಳಿಸಿಲ್ಲ ಎಂದು ಹೇಳಲಾಗುತ್ತಿದೆ.