ಮೈಸೂರು(ಸೆ.28): ಪ್ರೊಫಿ ಸಲ್ಯೂಷನ್ಸ್ ಕಂಪನಿಯ ಸಿಎಸ್‌ಆರ್ ನಿಧಿಯ ಸಹಾಯದಿಂದ ಪೂರ್ಣ ಚೇತನ ಪಬ್ಲಿಕ್ ಶಾಲಾ ಆವರಣದ ಸುಮಾರು ಎರಡು ಎಕರೆ ಜಾಗದಲ್ಲಿ ಮಕ್ಕಳ, ಯುವಕರ ಸಾಹಸ ಕ್ರೀಡಾ ಉದ್ಯಾನವವನ್ನು ಅಭಿವೃದ್ಧಿಪಡಿಸಿದ್ದು, ಇದು ಪ್ರಥಮ ಸಾಹಸ ಕ್ರೀಡೆಗಳ ಉದ್ಯಾನವವಾಗಿದೆ.

ಈ ಉದ್ಯಾನವನದಲ್ಲಿ ಮಕ್ಕಳು, ಯುವಕರು ಸುಮಾರು 30 ಬಗೆಯ ಸಾಹಸ ಚಟುವಟಿಕೆಗಳು, 25 ಅಡಿ ಎತ್ತರದ ಜಿಪ್‌ಲೈನ್, ಕೆಸರು ಗದ್ದೆ ಓಟ, ಮಳೆ ನೃತ್ಯ ಮುಂತಾದ ಆಟಗಳನ್ನು ಅಳವಡಿಸಲಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುತ್ತಿರುವ ಮಕ್ಕಳು, ಯುವಕರು ವಿಭಿನ್ನ ಅನುಭವನ್ನು ಹೊಂದಿ ಆನಂದಿಸುತ್ತಿದ್ದಾರೆ.

ಮಂಡ್ಯ: ದಸರಾ ಪೆಂಡಾಲ್ ಹಾಕೋದಿಕ್ಕೂ JDS, BJP ಜಗಳ

ದಿನನಿತ್ಯ ಈ ಕಾರ್ಯಕ್ರಮವು ಎರಡು ಅವಧಿ ನಡೆಯುತ್ತದೆ- ಸೆ. 29 ರಿಂದ ಅ. 6ರವರೆಗೆ ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಮಧ್ಯಾಹ್ನ 2 ರಿಂದ 5ರವರೆಗೆ ಪ್ರತಿ
ಅವಧಿಯಲ್ಲಿ 35 ರಿಂದ 40 ಮಕ್ಕಳು, ಯುವಕರಿಗೆ ಅವಕಾಶವಿರುತ್ತದೆ. ಮಾಹಿತಿಗಾಗಿ ಮೊ. 9901010990 ಸಂಪರ್ಕಿಸಬಹುದು.

ಮೇಲಾಧಿಕಾರಿ ಲಂಚಕ್ಕೆ ಬೇಡಿಕೆ: ಬಸ್‌ ಚಾಲಕ ಆತ್ಮಹತ್ಯೆಗೆ ಯತ್ನ