Asianet Suvarna News Asianet Suvarna News

ನ್ಯೂ ಇಯರ್ ಪಾರ್ಟಿ: ಕುಡಿದ ಮತ್ತಿನಲ್ಲಿ ಗನ್‌ಫೈರ್‌ ಮಾಡಿದ ತಂದೆ: ಮಗನ ದೇಹ ಹೊಕ್ಕ ಬುಲೆಟ್‌, ದುರಂತ ಸಾವು

ಹೊಸ ವರ್ಷದ ಸಂಭ್ರಮಾಚರಣೆ ತಂದ ಆಪತ್ತು
ಕುಡಿದ ಮತ್ತಿನಲ್ಲಿ ಬಂದೂಕಿನಿಂದ ಗನ್‌ಫೈರ್‌ ಮಾಡಿದ ತಂದೆ
ಫೈಟ್‌ ಮಾಡಿದ ಬುಲೆಟ್‌ ಮಗನ ಸ್ನೇಹಿತನ ದೇಹವನ್ನೇ ಹೊಕ್ಕುಬಿಡ್ತು
ಸಂಭ್ರಮಾಚರಣೆ ಸ್ಥಳದಲ್ಲಿಯೇ ಬಿತ್ತು ಒಂದು ಹೆಣ

Father who fired a gun while drunk on New Year son body was riddled with bullets sat
Author
First Published Jan 1, 2023, 11:06 AM IST

ಬೆಂಗಳೂರು (ಜ.1): ಹೊಸ ವರ್ಷದ ದಿನದಂದು ಹಾಡು, ಕುಣಿತ, ಕುಡಿತ, ಸಿಹಿ ಹಂಚಿಕೆ, ಹಾರಾಟ, ಚೀರಾಟ ಸೇರಿ ಎಲ್ಲ ಸಂಭ್ರಮಗಳಿಗೆ ಮಿತಿಯೇ ಇರುವುದಿಲ್ಲ. ಆದರೆ, ಶಿವಮೊಗ್ಗದ ಕುಟುಂಬವೊಂದರಲ್ಲಿ ಅಪ್ಪ ಮಗ ಬಂದೂಕು ಫೈರ್‌ ಮಾಡುವ  ಮೂಲಕ ಸಂಭ್ರಮಿಸುವಾಗ ದೊಡ್ಡ ಅವಘಡವೇ ನಡೆದಿದ್ದು, ತಂದೆ ಸಾವನ್ನಪ್ಪಿದರೆ ಮಗನ ಸ್ನೇಹಿತ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಹೊಸ ವರ್ಷದ ಸಂಭ್ರಮಾಚರಣೆಗಳು ಹಾಡು, ಕುಣಿತಕ್ಕೆ ಮಾತ್ರ ಸೀಮಿತವಾಗಿದ್ದರೆ ಯಾರಿಗೂ ಆಪತ್ತು ತರುವುದಿಲ್ಲ. ನಾವೇ ಬೇರೆ, ನಮ್ಮ ಸ್ಟೈಲೇ ಬೇರೆ ಎನ್ನುವ ಬೇರೆ ಎಂದು ವಿಶಿಷ್ಟ ಸಂಭ್ರಮಾಚರಣೆ ಮಾಡಲು ಹೋದವರು ಹೆಣವಾಗಿದ್ದಾರೆ. ಇನ್ನು ಯಾವುದೇ ಸಂಭ್ರಮಾಚರಣೆಗಳಲ್ಲಿ ಇತಿ-ಮಿತಿ ಮೀರಿದರೆ ಆಪತ್ತು ಕಟ್ಟಿಟ್ಟಬುತ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ, ಶಿವಮೊಗ್ಗದ ಕುಟುಂಬದಲ್ಲಿ ಪ್ರಾಣದ ಜೊತೆಗೆ ಆಟವಾಡುವಂತಹ ಮಿತಿ ಮೀರದ ಸಂಭ್ರಮಕ್ಕೆ ಪ್ರಾಣಪಕ್ಷಿ ಹಾರಿ ಹೋಗಿರುವುದು ನಿಜಕ್ಕೂ ದುರಂತದ ಎಂದೇ ಹೇಳಬಹುದು. 

ಹೊಸ ವರ್ಷದಂದು ಜವರಾಯನ ಅಟ್ಟಹಾಸಕ್ಕೆ ಇಬ್ಬರು ಯುವಕರು ಬಲಿ..!

ಘಟನೆ ನಡೆದಿದ್ದಾದರೂ ಹೇಗೆ?: ಶಿವಮೊಗ್ಗ ನಗರದ ವಿದ್ಯಾನಗರದಲ್ಲಿ ಕುಟುಂಬವೊಂದು ಹೊಸ ವರ್ಷ ಆಚರಣೆ ಸಂಭ್ರಮದಲ್ಲಿ ಗನ್ ಫೈರ್ ಮಾಡುತ್ತಿತ್ತು. ಈ ವೇಳೆ ಕುಡಿದ ಮತ್ತಿನಲ್ಲಿ ಅಪ್ಪ ಗನ್‌ ಫೈರ್‌ ಮಾಡಿದ್ದಾನೆ. ಆದರೆ, ಹೀಗೆ ಗನ್ ಫೈರ್ ಮಾಡಿದಾಗ ಬಂದೂಕಿನಿಂದ ಹೊರಟ ಬುಲೆಟ್‌ ಸೀದ ಮಗನ ಜನ್ಮದಿನ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗೆ ಆಗಮಿಸಿದ್ದ ಮಗನ ಸ್ನೇಹಿತ ವಿನಯ್‌ಗೆ ಬೈ ಮಿಸ್ಟೇಕ್ ಆಗಿ ತಗುಲಿತ್ತು. ಇದರಿಂದ ಗಂಭೀರ ಗಾಯಗೊಂಡಿದ್ದನ್ನು ನೋಡಿದ ಅಪ್ಪ ಶಾಕ್‌ ಆಗಿದ್ದಾರೆ. ಇದೇ ಶಾಕ್‌ನಿಂದ ಹೃದಯಾಘಾತ ಆಗಿದ್ದು, ಸ್ಥಳದಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ: ಇನ್ನು ಸಾವನ್ನಪ್ಪಿದ ವ್ಯಕ್ತಿಯನ್ನು ಮಂಜುನಾಥ್‌ ಎಂದು ಗುರುತಿಸಲಾಗಿದೆ. ತಂದೆ ಹಾರಿಸಿದ ಗನ್‌ ಫೈರ್‌ನಿಂದ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡ ಮಗನ ಸ್ನೇಹಿತ ವಿನಯ್‌ ಅವರನ್ನು ಕುಟುಂಬದ ಇತರೆ ಸದಸ್ಯರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಆದರೆ, ಈ ಘಟನೆಯಿಂದ ಕುಟುಂಬದಲ್ಲಿ ಆಕ್ರಂದ ಮುಗಿಲು ಮುಟ್ಟಿದೆ. ಇದು ಶಿವಮೊಗ್ಗದಲ್ಲಿ ನ್ಯೂ ಇಯರ್ ಸಂದರ್ಭದಲ್ಲಿ ನಡೆದ ಆಚಾತುರ್ಯವಾಗಿದ್ದು, ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಕಂಡು ನಗರದ ಜನತೆ ಸಂಭ್ರಮಕ್ಕೆ ಮಿತಿಗಳಿದ್ದರೆ ಚಂದ ಎಂದು ಮಾತನಾಡುತ್ತಿದ್ದಾರೆ.

ನ್ಯೂ ಇಯರ್‌ ಪಾರ್ಟಿ: ನಶೆಯಲ್ಲಿ ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ದಾಟುವ ವೇಳೆ ಆಯತಪ್ಪಿ ಬಿದ್ದು ಯುವಕ ಸಾವು

ಕುಟುಂಬಕ್ಕೆ ಆಸರೆ ಯಾರು?: ಮನೆಯಲ್ಲಿ ಆರ್ಥಿಕ ಆದಾಯಕ್ಕೆ ತಂದೆ ಮಗ ಕುಟುಂಬಕ್ಕೆ ಆಸರೆಯಾಗಿದ್ದರು. ಇವರಿಬ್ಬರ ದುಡಿಮೆಯಿಂದ ಇಡೀ ಕುಟುಂಬ ನೆಮ್ಮದಿಯಾಗಿ ಜೀವನ ಮಾಡುತ್ತಿತ್ತು. ಆದರೆ, ಹೊಸ ವರ್ಷದ ಸಂಭ್ರಮಾಚರಣೆ ವೇಳೆ ನಡೆದ ಅವಘದಿಂದ ಮನೆ ಮುಖ್ಯಸ್ಥ ಮಂಜುನಾಥ್‌ ಅವರು ತಾವು ಮಾಡಿದ ತಪ್ಪಿನಿಂದ ಹೃದಯಾಘಾತ ಉಂಟಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನು ಮಗನ ಸ್ನೇಹಿತನು ಕೂಡ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಈಗ ಕುಟುಂಬಕ್ಕೆ ಹೊಸ ವರ್ಷದ ದಿನ ದೊಡ್ಡ ಬರಸಿಡಿಲು ಬಡಿದಂತಾಗಿದೆ. 

Follow Us:
Download App:
  • android
  • ios