ನೆಲಮಂಗಲ [ಡಿ.08]:  2ನೇ ಮದುವೆಯಾಗಿದ್ದ ವ್ಯಕ್ತಿಯೊಬ್ಬ ಮೊದಲ ಹೆಂಡತಿಯ ಮಗನನ್ನು ಸಿಟಿ ತೋರಿಸುವುದಾಗಿ ಕರ್ಕೊಂಡು ಬಂದು ದಾರಿ ಮಧ್ಯದಲ್ಲೇ ಬಿಟ್ಟು ಹೋಗಿರುವ ಘಟನೆ ಪಟ್ಟಣದ ಕುಣಿಗಲ್‌ ಸರ್ಕಲ್‌ ಬಳಿ ನಡೆದಿದೆ.

ಹೊಸದುರ್ಗದ ಬಿಡೇಕಟ್ಟೆಗ್ರಾಮದ ಪ್ರಹ್ಲಾದ್‌ ಎರಡು ಮದುವೆಯಾಗಿದ್ದ. ಮೂರು ವರ್ಷಗಳ ಹಿಂದೆ ರುಕ್ಮಿಣಿ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ, ಮೊದಲ ಹೆಂಡತಿ ಗಂಡನಿಂದ ದೂರವಾಗಿ ಮಕ್ಕಳ ಜೊತೆ ವಾಸವಾಗಿದ್ದಳು. 

ಪ್ರಹ್ಲಾದ್‌ ಅನ್ನುವ ದುರುಳ ಎರಡನೇ ಹೆಂಡತಿಯನ್ನು ಮೆಚ್ಚಿಸಲು ಮೊದಲ ಹೆಂಡತಿಯ ಮಗ 10 ವರ್ಷದ ಪ್ರಜ್ವಲ್‌ನನ್ನ ಊರಿನಿಂದ ಕರ್ಕೊಂಡು ಬಂದು ನೆಲಮಂಗಲದಲ್ಲಿ ಬಿಟ್ಟು ಹೋಗಿದ್ದಾನೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಾಪಿ ತಂದೆಯಿಂದಾಗಿ ಪಾಪ ಆ ಮಗು ಅಪ್ಪನಿಗಾಗಿ ಅಲೆದಾಡುತ್ತಿದೆ. ಪಾಪಿ ತಂದೆ ತನ್ನದೆ ಮಗನಿಗೆ ನಿತ್ಯ ಹೊಡೆಯುತ್ತಿದ್ದಾನಂತೆ. ಬೆಂಕಿಯಲ್ಲಿ ಕೈ ಕಾಲು ಸುಟ್ಟು ಬಾಸುಂಡೆ ಬರುವಂತೆ ಥಳಿಸಿದ್ದಾನೆ. ಅಪ್ಪನಿಂದ ಹಲ್ಲೆಗೊಳಗಾಗಿ ಪಟ್ಟಣದಲ್ಲಿ ಅಲೆಯುತ್ತಿದ್ದ ಬಾಲಕನನ್ನು ರಕ್ಷಿಸಿದ ಸ್ಥಳೀಯರು ನೆಲಮಂಗಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.