Asianet Suvarna News Asianet Suvarna News

ಚಿಕ್ಕಮಗಳೂರು: ಬಾಗಿನ ಕೊಟ್ಟು ವಾಪಸಾಗುತ್ತಿದ್ದ ವೇಳೆ ಅಪಘಾತ, ತಂದೆ-ಮಗಳ ದುರ್ಮರಣ

*   ಚಿಕ್ಕಮಗಳೂರು ತಾಲೂಕಿನ ಉದ್ದೆ ಬೋರನಹಳ್ಳಿ ಬಳಿ ನಡೆದ ಘಟನೆ
*   ಗ್ಯಾಸ್ ಸಿಲೆಂಡರ್ ತುಂಬಿದ್ದ ಲಾರಿ, ಟಿವಿಎಸ್ ಬೈಕ್ ನಡುವೆ ಡಿಕ್ಕಿ 
*   ಈ ಸಂಬಂಧ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 

Father Daughter Killed in Road Accident in Chikmagalur grg
Author
Bengaluru, First Published Sep 11, 2021, 7:34 AM IST
  • Facebook
  • Twitter
  • Whatsapp

ಚಿಕ್ಕಮಗಳೂರು(ಸೆ.11): ಬಾಗಿನ ಕೊಟ್ಟು ವಾಪಸಾಗುತ್ತಿದ್ದ ವೇಳೆ ಟಿವಿಎಸ್ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ತಂದೆ ಮಗಳು, ದಾರುಣವಾಗಿ ಸಾವನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಉದ್ದೆ ಬೋರನಹಳ್ಳಿ ಬಳಿ ನಿನ್ನೆ(ಶುಕ್ರವಾರ) ನಡೆದಿದೆ.  

ಮುಗುಳುವಳ್ಳಿ ಗ್ರಾಮದ ಜಯಣ್ಣ(58)  ಹಾಗೂ ರಕ್ಷಿತ(19) ಎಂಬುವರೇ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.  

ಬಳ್ಳಾರಿ: ಜವರಾಯನ ಅಟ್ಟಹಾಸ, ಮಸಣ ಸೇರಿದ ಮದುವೆಯಾಗಬೇಕಿದ್ದ ಜೋಡಿ

ಪಿಳ್ಳೆ ನಲ್ಲಿಯ ದೊಡ್ಡ ಮಗಳ ಮನೆಗೆ ಬಾಗಿನ ಕೊಟ್ಟು, ಚಿಕ್ಕ ಮಗಳ ಜೊತೆ ವಾಪಸ್ ಬರುವಾಗ ಗ್ಯಾಸ್ ಸಿಲೆಂಡರ್ ತುಂಬಿದ್ದ ಲಾರಿ, ಹಾಗೂ ಟಿವಿಎಸ್ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ತಂದೆ ಮಗಳು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಖರಾಯಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios