ಬೆಂಗಳೂರು, [ಮೇ.12]: ಪ್ರೀತಿಸಿದವನ ಜತೆ ಮಗಳು ಓಡಿಹೋದ ಎಂಬ ಕಾರಣಕ್ಕೆ ಮನನೊಂದ ತಂದೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರಿನ ಸಂಜಯ್​​ಗಾಂಧಿ ನಗರದಲ್ಲಿ ಘಟನೆ ನಡೆದಿದ್ದು, ವಿವಾಹಿತ ಉದಯ್ ಎಂಬವನ ಜತೆ ವೇದಾವತಿ ಎಂಬಾಕೆ ಓಡಿಹೋಗಿದ್ದಾಳೆ. ಮಗಳು ಓಡಿ ಹೋಗಿದ್ದಕ್ಕೆ ನೊಂದ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಗೆ ಬಂದು ಹೋಗುತ್ತಿದ್ದ ಉದಯ್, ವೇದಾವತಿಯ ಸ್ನೇಹ ಬೆಳಸಿಕೊಂಡಿದ್ದ. ಬಳಿಕ ಇಬ್ಬರು ಪರಾರಿಯಾಗಿದ್ದರು.ಈ ವಿಷಯವನ್ನು ಉದಯ್‌ ಪತ್ನಿ ವೇದಾವತಿ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಇದ್ರಿಂದ ನೊಂದ ಯುವತಿಯ ತಂದೆ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಗಳು ವೇದಾವತಿ ವಿರುದ್ಧ ದೂರು ದಾಖಲಾಗಿದೆ.