Asianet Suvarna News Asianet Suvarna News

ಇಂದು ಬೆಳಗಾವಿಗೆ ಕೇಂದ್ರ ಸಚಿವರ ಆಗಮನ: ಅಮಿತ್‌ ಶಾ ವಿರುದ್ಧ ಬೃಹತ್‌ ಪ್ರತಿಭಟನೆ

ರೈತ ಮುಖಂಡ ಚೂನಪ್ಪ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ| 'ಅಮಿತ್ ಶಾ ಹಠಾವೋ... ದೇಶ ಬಚಾವೋ'| ರೈತ ವಿರೋಧಿ ಕಾನೂನುಗಳು ವಾಪಸ್ ಆಗಲೇಬೇಕು ಎಂಬ ಘೋಷಣೆ| ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ ರೈತರು| 

Farmers will Be Held Protest Against Amit Shah in Belagavi grg
Author
Bengaluru, First Published Jan 17, 2021, 9:02 AM IST

ಬೆಳಗಾವಿ(ಜ.17): ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು(ಭಾನುವಾರ) ನಗರಕ್ಕೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನೂತನ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟನೆ ನಡಡೆಸಲು ನಿರ್ಧರಿಸಿವೆ. 

"

ಇಂದು ಬೆಳಿಗ್ಗೆ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರಗೀತೆ ಗಾಯನ ಮಾಡಿ ರೈತ ಮುಖಂಡರು ಪ್ರತಿಭಟನೆಯನ್ನ ಮುಂದುವರಿಸಿದ್ದಾರೆ. ರೈತ ಮುಖಂಡ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, 'ಅಮಿತ್ ಶಾ ಹಠಾವೋ... ದೇಶ ಬಚಾವೋ' ಹಾಗೂ 'ರೈತ ವಿರೋಧಿ ಕಾನೂನುಗಳು ವಾಪಸ್ ಆಗಲೇಬೇಕು' ಎಂಬ ಘೋಷಣೆಗಳನ್ನ ಕೂಗಿ ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈ ವಿರುದ್ಧವೂ ಧಿಕ್ಕಾರ ಕೂಗಿ ಆಕ್ರೋಶವನ್ನ ಹೊರಹಾಕಿದ್ದಾರೆ. ಹೀಗಾಗಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಅಮಿತ್ ಶಾ ಸಂಚರಿಸುವ ರಸ್ತೆಗಳಲ್ಲಿ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಮಾಡಲಾಗಿದೆ. ಎರಡೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ಓರ್ವ ನಗರ ಪೊಲೀಸ್ ಆಯುಕ್ತ, 15 ಎಸ್‌ಪಿ, 53 ಡಿವೈಎಸ್‌ಪಿ, 118 ಸಿಪಿಐ, 235 ಪಿಎಸ್ಐ, 350 ಎಎಸ್ಐ, 2,380 ಪೇದೆಗಳು, ಮುಖ್ಯ ಪೇದೆಗಳು, ಕೆಎಸ್‌ಆರ್‌ಪಿ, ಕೆಎಸ್‌ಐಎಸ್‌ಎಫ್ -16 ತುಕಡಿ, ಎಎಸ್‌ಸಿ-10, ಸಿಆರ್‌ಪಿಎಫ್ ತಂಡವನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.  ಬಿಡಿಡಿಎಸ್, ಎಫ್‌ಪಿಬಿ, ಸಿಐಡಿ, ರಾಜ್ಯ ಗುಪ್ತವಾರ್ತೆ, ಇಂಟರನಲ್ ಸೆಕ್ಯುರಿಟಿ ಘಟಕದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.

ನೂತನ ಸಚಿವರ ಕರಾಮತ್ತು, ಶಾ ಗೋ ಬ್ಯಾಕ್ ಅಭಿಯಾನ ಹಿಂಪಡೆದ ರೈತರು‌...

ಅತೃಪ್ತ ಶಾಸಕರಿಂದ ಅಮಿತ್‌ ಶಾ ಭೇಟಿ 

ಇನ್ನು ಅಮಿತ್ ಶಾ ಭೇಟಿಯಾಗಿ ಪಕ್ಷದಲ್ಲಿನ ಬೆಳವಣಿಗೆ ಕುರಿತು ಮಾತುಕತೆ ನಡೆಸಲು ಅತೃಪ್ತ ಶಾಸಕರು ನಿರ್ಧರಿಸಿದ್ದಾರೆ. ಮಧ್ಯಾಹ್ನ 1.15 ರಿಂದ 3.15ರವರೆಗೆ ಬೆಳಗಾವಿಯ ನ್ಯೂ ಸರ್ಕ್ಯೂಟ್ ಹೌಸ್‌ನಲ್ಲಿರುವ ಅಮಿತ್ ಶಾ ತಂಗಲಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ಮೂಲ ಬಿಜೆಪಿ ಶಾಸಕರು ಅಮಿತ್ ಶಾ ಅವರನ್ನ ಭೇಟಿಯಾಗಿ ದೂರು ನೀಡುವ ಸಾಧ್ಯತೆ ಎಂದು ತಿಳಿದು ಬಂದಿದೆ.

ಅಭಯ್ ಪಾಟೀಲ್, ಸಿದ್ದು ಸವದಿ ಸೇರಿ 10ಕ್ಕೂ ಹೆಚ್ಚು ಶಾಸಕರು ಅಮಿತ್‌ ಶಾ ಅವರಿಗೆ ದೂರು ನೀಡುವ ಸಾಧ್ಯತೆ ಇದೆ.  ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ತಗೆದುಕೊಳ್ಳುತ್ತಿಲ್ಲ, ಮೂಲ ಬಿಜೆಪಿಗರನ್ನು ಕಡೆಗಣಿಸುತ್ತಿರುವುದಕ್ಕೆ ಶಾಸಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. 

ಅನುದಾನ ನೀಡುವಲ್ಲೂ ತಾರತಮ್ಯ ಮಾಡುತ್ತಿದ್ದಾರೆ ಎಂದು ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಡಿಸಿದ್ದಾರೆ. ಇನ್ನು ನಿಗಮ ಮಂಡಳಿ ಸೇರಿ ಇತರ ಹುದ್ದೆಗಳಿಗೆ ನೇಮಕ ವೇಳೆ ತಮ್ಮನ್ನು ಗಣನೆಗೆ ತಗೆದುಕೊಳ್ಳುತ್ತಿಲ್ಲ ಎಂದು ಅಮಿತ್ ಶಾಗೆ ದೂರು ನೀಡಲು ಅಸಮಾಧಾನಿತ ಶಾಸಕರು ನಿರ್ಧರಿಸಿದ್ದಾರೆ. 
 

Follow Us:
Download App:
  • android
  • ios