ಬೇಲೂರು (ಸೆ.25):  ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ರಾಜ್ಯ ಸರ್ಕಾರದ ವಿರುದ್ಧ ಭೂ ಸುದಾರಣೆ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಯನ್ನು ವಿರೋಧಿ​ಸಿ ಸೋಮವಾರ ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌ ಮಾಡುವಂತೆ ವಿವಿಧ ಸಂಘಟನೆಯ ಮುಖಂಡರು ಮನವಿ ಮಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ರೈತಸಂಘ ಹಾಗೂ ಪ್ರಗತಿಪರ ಸಂಘಟನೆಗಳಿಂದ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಸೆ.28ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಬೇಲೂರು ತಾಲೂಕಿನಲ್ಲಿ ಸಂಪೂರ್ಣ ಬಂದ್‌ ಮಾಡುವ ಮೂಲಕ ವರ್ತಕರು ಸಹಕರಿಸಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು.

ಸೋಮವಾರ ಕರ್ನಾಟಕ ಬಂದ್? ಏನಿರುತ್ತೆ , ಏನಿರಲ್ಲ? ..

ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸ್ವಾಮೀಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುದಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್‌ ಖಾಸಗೀಕರಣ, ಮಸೂದೆ ಇವುಗಳನ್ನು ಸುಗ್ರೀವಾಜ್ಞೆ ಮೂಲಕ ಕೃಷಿಕರು ಹಾಗೂ ಕೃಷಿ ಕೂಲಿ ಕೆಲಸಗಾರರ ಮೇಲೆ ಮರಣ ಶಾಸನವನ್ನು ಬರೆಯಲು ಹೊರಟಿರುವುದನ್ನು ಖಂಡಿಸಲಾಯಿತು.

ಅಲ್ಲದೆ ಸೆ. 28 ರಂದು ಕರ್ನಾಟಕ ರಾಜ್ಯ ರೈತ ಸಂಘ ಸಹಯೋಗದೊಂದಿಗೆ ಕರ್ನಾಟಕ ದಲಿತಪರ ಸಂಘಟನೆಗಳು, ಕೃಷಿ ಕಾರ್ಮಿಕರು,ದಲಿತ ಸಂಘರ್ಷ ಸಮಿತಿ, ಕರ್ನಾಟಕ ಅಂಬೇಡ್ಕರ್‌ ವಾದ ದಲಿತ ಸಂಘರ್ಷ ಸಮಿತಿ.ಕರ್ನಾಟಕ ರಕ್ಷಣಾ ವೇ​ಕೆ ಪ್ರವೀಣ್‌ ಶೆಟ್ಟಿಬಣ,ಜಯಕರ್ನಾಟಕ ರಕ್ಷಣಾ ವೇ​ಕೆ, ತಾಲೂಕು ವರ್ತಕರ ಸಂಘ ಸೇರಿದಂತೆ ಇನ್ನು ಹಲವು ಸಂಘಟನೆಗಳು ಸೇರಿ,ಆಟೋಚಾಲಕರು,ಮಾಕ್ಸಿ ಕ್ಯಾಬ್‌ ಚಾಲಕರು ,ಸೇರಿದಂತೆ ಸೋಮವಾರದ ಸಂಪೂರ್ಣ ಬಂದ್‌ ಗೆ ಎಲ್ಲರೂ ಸಹ ಸಹಕರಿಸಬೇಕು ಎಂದು ಮನವಿ ಮಾಡಿದರು.

ನಂತರ ಮಾತನಾಡಿದ ರೈತ ಸಂಘದ ತಾಲೂಕು ಅಧ್ಯಕ್ಷ ಭೋಗ ಮಲ್ಲೇಶ್‌ ರೈತರ ಮೇಲೆ ಮರಣ ಶಾಸನ ಬರೆದು ಅನ್ನದಾತರನ್ನು ಬೀದಿಗೆ ತರುವಂತ ಕೆಲಸವನ್ನು ಕೇಂದ್ರ ಹಾಗೂ ರಾಜ್ಯಸರ್ಕಾರ ಮಾಡುತ್ತಿದೆ.ಈ ಕಾಯ್ದೆಯನ್ನು ಕೂಡಲೇ ಹಿಂಪಡೆಯುವ ಮೂಲಕ ರೈತ ಪರ ಸರ್ಕಾರ ಎನ್ನುವುದನ್ನು ಸಾಬೀತು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇ​ಕೆ ಪ್ರವೀಣ್‌ ಶೆಟ್ಟಿಬಣದ ಅಧ್ಯಕ್ಷ ಭೋಜೇಗೌಡ, ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಎಂ,ಕೆ,ಆರ್‌ ಸೋಮೇಶ್‌,ಗೌರವ ಅಧ್ಯಕ್ಷ ರಾಜು, ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ ವಾದ ಬಿ ಎಲ್‌ ಲಕ್ಷ್ಮಣ್‌, ರಂಗನಾಥ್‌ , ಬಸವರಾಜ್‌, ತೀರ್ಥಂಕರ್‌, ಯೋಗೀಶ್‌ ಹಾಗೂ ರೈತ ಮುಖಂಡರು ಹಾಜರಿದ್ದರು.