ಮೈಸೂರು (ಫೆ.04): ಫೆ.6 ರಂದು ರಾಜ್ಯದ ಎಲ್ಲೆಡೆ ಹೆದ್ದಾರಿ ಬಂದ್ ನಡೆಸಿ ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲಿಸುವುದಾಗಿ ರಾಜ್ಯದ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. 

ಅಂದು ಮಧ್ಯಾಹ್ನ 12 ರಿಂದ ರಾಜ್ಯದ ಎಲ್ಲಾ ಹೆದ್ದಾರಿ ಬಂದ್ ಮಾಡಲಾಗುವುದು. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮ ಖಂಡನೀಯ ಎಂದರು.

ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ?

ಈಗಲೂ ದೆಹಲಿ ಪೊಲೀಸರ ಮೂಲಕ ರೈತರ ಸ್ಥಳಕ್ಕೆ ಬೇಲಿ ಹಾಕಿಸಲಾಗುತ್ತಿದೆ. ಮುಕ್ತ ಮಾರುಕಟ್ಟೆ ನೀತಿಯನ್ನು ರೈತರು  ಸದಾ ವಿರೋಧಿಸುತ್ತಿದ್ದಾರೆ. ಆದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತಿಳಿಸಿದರು.