Asianet Suvarna News Asianet Suvarna News

ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು; ನಿಮ್ಮೊಂದಿಗೆ ನಾನಿದ್ದೇನೆ: ಹೆಚ್‌ಡಿಕೆ

ಘೋಷಣೆ ಮಾಡಿದ ಸಾಲವನ್ನು ಬಿಜೆಪಿ ಇನ್ನೂ ಕೂಡಾ ಎರಡು ಲಕ್ಷ ಜನ ರೈತರಿಗೆ ಕೊಟ್ಟಿಲ್ಲ ರೈತರು ಸಂಕಷ್ಟದಲ್ಲಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುತ್ತೇನೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು.ನಿಮ್ಮೊಂದಿಗೆ ನಾನಿದ್ದೇನೆ ಎಂದು ಹೆಚ್‌ಡಿ ಕುಮಾರಸ್ವಾಮಿ ಧೈರ್ಯ ತುಂಬಿದರು.

Farmers should not commit suicide for any reason I am with you says HDK rav
Author
First Published Jan 12, 2023, 12:37 PM IST

ಕಲಬುರಗಿ/ ಸೇಡಂ (ಜ.12) : ಅಧಿಕಾರದಲ್ಲಿರಲಿ, ಇಲ್ಲದಿರಲಿ ನಾಡಿನ ಕಡುಬಡವರು ಪ್ರತಿನಿತ್ಯ ನನ್ನ ಬಳಿ ತೆಗೆದುಕೊಂಡು ಬರುವ ಸಮಸ್ಯೆ ಕೇಳಿ ಕೆಲವು ತೀರ್ಮಾನ ತೆಗೆದುಕೊಳ್ಳಲಾಗಿದೆ, ಆ ಪ್ರಯತ್ನವೇ ಪಂಚರತ್ನ ಯೋಜನೆಗಳ ಅನುಷ್ಠಾನಗೊಳಿಸುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು. ಅವರು ಸೇಡಂ ಪಟ್ಟಣಕ್ಕೆ ಪಂಚರತ್ನ ರಥಯಾತ್ರೆಯಲ್ಲಿ ಚಿಂಚೋಳಿ ತಾಲೂಕಿನ ಸುಲೇಪೇಟ ಹಾಗ ನಿಡಗುಂದಾ ಮೂಲಕ ಸೇಡಂ ಪ್ರವೇಶಿಸಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗುದ್ದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು.

ಹೊಸ ಹೊಸ ಆರೋಗ್ಯ ಸಮಸ್ಯೆಗಳು ಕಂಡು ಬರ್ತಿವೆ, ಚಿಕಿತ್ಸೆಗೆ ತುಂಬಾ ಹಣ ವ್ಯಯವಾಗುತ್ತಿದೆ ಅದನ್ನು ಹೊಂದಿಸಲು ಬಡ ಕುಟುಂಬಗಳಿಗೆ ಸಾದ್ಯವಾಗುತ್ತಿಲ್ಲ ಹಾಗಾಗಿ ಪಂಚಾಯತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣದ ಯೋಜನೆಯಿದೆ.

ಜೆಡಿಎಸ್‌ ಗೆದ್ದರೆ ಸಕ್ಕರೆ ಕಾರ್ಖಾನೆ ಸ್ಥಾಪನೆ: ಎಚ್‌.ಡಿ.ಕುಮಾರಸ್ವಾಮಿ

ಸರ್ಕಾರದ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆ ಸಮರ್ಪಕವಾಗಿಲ್ಲ ಹಾಗಾಗಿ ಪಾಲಕರು ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳಿಗೆ ದುಬಾರಿ ಶಿಕ್ಷಣವನ್ನು ಕೊಡಿಸಲಾಗದೆ ಒದ್ದಾಡ್ತಿದ್ದಾರೆ ಅದಕ್ಕಾಗಿ ಸರಕಾರಿ ಶಾಲೆಗಳ ಉನ್ನತೀಕರಣ ಮಾಡುವ ದ್ಯೇಯ ಹೊಂದಿದ್ದಾಗಿ ಹೇಳಿದರು.

ರೈತರು ಯಾವುದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬಾರದು, ಅವರ ಜೊತೆ ಯಾವಾಗಲೂ ನಾನಿದ್ದೇನೆ ಎಂದ ಅವರು ರೈತರ ಸಾಲಮನ್ನಾಕ್ಕೆ ಕಾಂಗ್ರೆಸ್‌ ಸುತಾರಾಂ ಒಪ್ಪಿರಲಿಲ್ಲ ಆದರೂ ಪಟ್ಟುಬಿಡದೆ ಸಾಲ ಮನ್ನಾ ಮಾಡಿದ್ದೇನೆ.

ಘೋಷಣೆ ಮಾಡಿದ ಸಾಲವನ್ನು ಬಿಜೆಪಿ ಇನ್ನೂ ಕೂಡಾ ಎರಡು ಲಕ್ಷ ಜನ ರೈತರಿಗೆ ಕೊಟ್ಟಿಲ್ಲ ಎಂದರು. ಪ್ರತಿ ಕುಟುಂಬ ಸಂಕಷ್ಟದಿಂದ ಪಾರಾಗಲು ಪಂಚರತ್ನ ಯೋಜನೆಗಳನ್ನು ಜಾರಿಗೆ ತರಲಾಗುವುದು. ಸಾಲಗಾರರಾಗದಂತೆ ರೈತರಿಗೆ ಬಿತ್ತನೆ ಬೀಜ ಗೊಬ್ಬರಕ್ಕೆ ಬೇಕಾಗುವ ಹಣ ಕೊಡುವ ಯೋಜನೆಯನ್ನು ತೆಲಂಗಾಣ ಮಾದರಿಯಲ್ಲಿ ಅನುಷ್ಟಾನ ಮಾಡಲಾಗುವುದು ಎಂದ ಅವರು ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ಕೋಲ್ಡ… ಸ್ಟೋರೇಜ್‌ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದರು. ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ವಿದ್ಯುತ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು ಒಂದು ಸಾವಿರ ಅಂಗವಿಕಲರ ಕೆಲಸ ಖಾಯಂ ಮಾಡಿದ್ದೇನೆ. ಇದಕ್ಕೆಲ್ಲಾ ನಾನು ಬೇರೆ ಎಲ್ಲಿಂದಲೂ ತರಲ್ಲ, ನಿಮ್ಮ ತೆರಿಗೆ ಹಣವನ್ನೇ ಈ ತೋಜನೆಗಳಿಗೆ ವಿನಿಯೋಗಿಸುತ್ತೇನೆ

ಒಂದು ಬಾರಿ ಜನತಾದಳದ ಐದು ವರ್ಷದ ಸರಕಾರ ಬರುವಂತೆ ಆಶಿರ್ವದಿಸಿ ಎಂದು ವಿಬಂತಿಸಿದರು. ಪ್ರಾಮಾಣಿಕ ಗುಣ ಹೊಂದಿರುವ, ಸಾಮಾಜಿಕ ಕಳಕಳಿಯ ಯುವಕ ಬಾಲರಾಜ್‌ ಗುತ್ತೇದಾರ ರನ್ನು ಬೆಳೆಸಿ ಹರಸಿ ಆಯ್ಕೆ ಮಾಡಿ ತನ್ನಿ ಎಂದರು. ಮಾಜಿ ಸಚಿವರಾದ ಬಂಡೆಪ್ಪ ಖಾಸೆಂಪುರ್‌, ವೆಂಕಟರಾವ್‌ ನಾಡಗೌಡ, ಸೇಡಂ ಕ್ಷೇತ್ರದ ಅಭ್ಯರ್ಥಿ ಬಾಲರಾಜ್‌ ಗುತ್ತೇದಾರ, ರಾಜಶೇಖರ ನಿಲಂಗಿ ಮಾತನಾಡಿದರು.

ಜ.16ರಂದು ಕುಮಾರಸ್ವಾಮಿ 'ರೈತ ಸಂಕ್ರಾಂತಿ': ರಾಜ್ಯದ ರೈತರ ಜತೆ ಅನ್‌ಲೈನ್ ಸಂವಾದ

ಬಾಲರಾಜ್‌ ಗುತ್ತೇದಾರಗೆ ಶಾಸಕರನ್ನಾಗಿ ಮಾಡಿ

ಜೆಡಿಎಸ್‌ ಪಕ್ಷದ ಪಂಚರತ್ನ ರಥ ಯತ್ರೆಗೆ ಸೇಡಂ ವಿಧಾನಸಭಾ ಕ್ಷೇತ್ರದ ಸುಲೇಪೇಟ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತ್ತು. ಮಾಜಿ ಮುಖ್ಯಮಂತ್ರಿ ಎಚ….ಡಿ.ಕುಮಾರ್‌ ಸ್ವಾಮಿ ಅವರಿಗೆ ಜೆಡಿಎಸ್‌ ಕಾರ್ಯಕರ್ತರು ಕಡಲೆ ಗಿಡದ ಹಾರಹಾಕಿ ಅದ್ದೂರಿ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾತನಾಡಿ ಬರುವ ವಿಧಾನಸಭಾ ಚುನಾವಣೆಯಲ್ಲಿ ಸೇಡಂ ಮತಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಾಲರಾಜ್‌ ಗುತ್ತೇದಾರ ಅವರಿಗೆ ಆರಿಸಿತರಬೇಕು ಗುತ್ತೇದಾರ ಅವರು ಯುವಕರಿದ್ದು ಕ್ರೀಯಾ ಚೀಲರಾಗಿದ್ದಾರೆ , ಬಡವರಪರ ಅನೇಕ ಸಮಾಜೀಕ ಕೇಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ಕೊವಿಡ್‌ ಪ್ರಾರಂಭವಾದಗಿನಿಂದ ಇಲ್ಲಿಯವರೆಗೂ ನಿರಂತರ ಉಚಿತ ಆ್ಯಂಬುಲೇ®್ಸ… ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದ್ದರು.

Follow Us:
Download App:
  • android
  • ios