ಮಸ್ಕಿ: ನೀರಿನ ಗೇಜ್‌ ಹೆಚ್ಚಿಸುವಂತೆ ರೈತರಿಂದ ಧರಣಿ

ಎಡನಾಲೆಯಲ್ಲಿ ನೀರು ಹರಿಸುವ ಗೇಜ್‌ ಪ್ರಮಾಣ ಕಡಿಮೆ ಮಾಡಿರುವುದರಿಂದ ಭತ್ತದ ಬೆಳೆ ನೀರು ಸಾಲದೇ ಒಣಗುತ್ತಿವೆ ಎಂದು ಧರಣಿ ನಡೆಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Farmers Protest to Increase Water Gauge at Maski in Raichur grg

ಮಸ್ಕಿ(ಡಿ.25):  ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಂಜಳ್ಳಿ, ತುರ್ವಿಹಾಳ, ಮಲದಗುಡ್ಡ ಸೇರಿದಂತೆ ವಿವಿಧ ಭಾಗದ 40, 46, 48, 49ನೇ ಉಪಕಾಲುವೆ ವ್ಯಾಪ್ತಿಯಲ್ಲಿ ಗೇಜ್‌ ಪ್ರಮಾಣ ಕಡಿಮೆಗೊಳಿಸಿದ್ದಾರೆ ಬೆಳೆದ ಭತ್ತದ ಬೆಳೆಗಳಿಗೆ ನೀರು ಸಾಲುತ್ತಿಲ್ಲ, ಇದರಿಂದ ಬೆಳೆಗಳು ಒಣಗುತ್ತಿವೆ. ಕೂಡಲೇ ಗೇಜ್‌ ಹೆಚ್ಚಿಸುವಂತೆ ರೈತರು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ನಡೆಯಿತು.

ತುಂಗಭದ್ರಾ ಎಡನಾಲೆಯ ವ್ಯಾಪ್ತಿಯಲ್ಲಿ ತುರ್ವಿಹಾಳ, ಮಲದಗುಡ್ಡ, ಗುಂಜಳ್ಳಿ ಸೇರಿ 40ರಿಂದ 49ನೇ ಉಪಕಾಲುವೆ ವ್ಯಾಪ್ತಿಯಲ್ಲಿ ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು, ಇನ್ನು ಕೆಲವರು ಸಸಿಗಳನ್ನು ಹಾಕಿದ್ದಾರೆ. ಆದರೆ, ಎಡನಾಲೆಯಲ್ಲಿ ನೀರು ಹರಿಸುವ ಗೇಜ್‌ ಪ್ರಮಾಣ ಕಡಿಮೆ ಮಾಡಿರುವುದರಿಂದ ಭತ್ತದ ಬೆಳೆ ನೀರು ಸಾಲದೇ ಒಣಗುತ್ತಿವೆ ಎಂದು ಧರಣಿ ನಡೆಸಿ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Raichur News: ಕಾಂಗ್ರೆಸ್‌, ಬಿಜೆಪಿ ಮುಖಂಡರ ನಡುವೆ ವಾಗ್ವಾದ

ಘಟನೆ ತಿಳಿದು ಸ್ಥಳಕ್ಕೆ ಶಾಸಕ ಆರ್‌.ಬಸನಗೌಡ ತುರ್ವಿಹಾಳ ಸಹೋದರ ಕೆಪಿಸಿಸಿ ಎಸ್ಟಿಘಟಕದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಆರ್‌.ಸಿದ್ಧನಗೌಡ ತುರ್ವಿಹಾಳ ಬೇಟಿ ನೀಡಿ, ನೀರಾವರಿ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಬರುವಂತೆ ಸೂಚಿಸಿ, ಗೇಜ್‌ ಪ್ರಮಾಣ ಹೆಚ್ಚಿಸಿ ನೀರು ಹರಿಸುವಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದರು.

ಗೇಜ್‌ ಹೆಚ್ಚಳ ಧರಣಿ ವಾಪಸ್‌: 

ರೈತರ ಸಮಸ್ಯೆ ಆಲಿಸಿದ ಆರ್‌.ಸಿದ್ಧನಗೌಡ ತುರ್ವಿಹಾಳ ಅವರು ನೀರಾವರಿ ಇಲಾಖೆಯ ಇಇ ಅವರಿಗೆ ಸಂಪರ್ಕಿಸಿ ಇಲ್ಲಿನ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಇದರಿಂದ ಭತ್ತ ಒಣಗುತ್ತಿದೆ. ಆದ್ದರಿಂದ ಗೇಜ್‌ ಪ್ರಮಾಣ ಹೆಚ್ಚಿಸಿ ಇಲ್ಲದಿದ್ದರೆ ರೈತರೊಂದಿಗೆ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು. ಕೂಡಲೇ ನೀರಾವರಿ ಇಲಾಖೆಯ ಅಧಿಕಾರಿಗಳು ಗೇಜ್‌ ಪ್ರಮಾಣ ಹೆಚ್ಚಿಸಲಾಗುವುದು ಎಂದಾಗ ರೈತರು ಧರಣಿ ಕೈಬಿಟ್ಟ ಪ್ರಸಂಗ ಜರುಗಿತು.
ಈ ಸಂದರ್ಭದಲ್ಲಿ ನೂರಾರು ರೈತರು ಹಾಗೂ ನೀರಾವರಿ ಇಲಾಖೆಯ ಎಇಇ ಹನುಮಂತಪ್ಪ, ಜೆಇ ಶಿವಶಂಕರ, ತುರ್ವಿಹಾಳ ಪಿಎಸ್‌ಐ ಚಂದ್ರಪ್ಪ ಸೇರಿದಂತೆ ಇತರರು ಇದ್ದರು.

Raichur: ಸಂತೋಷ್‌ ಜಿ ಬಗ್ಗೆ ಮಾತನಾಡುವ ನೈತಿಕತೆ ಕುಮಾರಸ್ವಾಮಿಗೆ ಇಲ್ಲ : ಶಾಸಕ ಕೆ.ಶಿವನಗೌಡ ನಾಯಕ

ಎಡನಾಲೆಯ ಭಾಗದಲ್ಲಿ ರೈತರು ಭತ್ತದ ಸಸಿಗಳನ್ನು ನಾಟಿ ಮಾಡಿದ್ದು ಸಮರ್ಪಕವಾಗಿ ನೀರು ಇಲ್ಲದಿದ್ದರೆ ಒಣಗುತ್ತವೆ. ಆದ್ದರಿಂದ ನೀರಿನ ಗೇಜ್‌ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹೇಳಿದ್ದೇನೆ ಅಂತ ಆರ್‌.ಸಿದ್ಧನಗೌಡ ತುರ್ವಿಹಾಳ ಹೇಳಿದ್ದಾರೆ. 

ಮೇಲಗ್ಡೆ ಭಾಗದಲ್ಲಿ ನೀರಿನ ಗೇಜ್‌ ಪ್ರಮಾಣದಲ್ಲಿ ಕಡಿಮೆಯಾಗಿದ್ದರಿಂದ ಕೆಳೆಭಾಗಕ್ಕೆ ನೀರಿನ ಪ್ರಮಾಣ ಕಡಿಮೆಯಾಗಿತ್ತು ಆದರೆ ಇದೀಗ ನೀರು ಸರಿಯಾಗಿ ಹರಿಯುತ್ತಿದೆ ರೈತರ ಬೆಳೆಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಅಂತ ತುರ್ವಿಹಾಳ ವಿಭಾಗ ನೀರಾವರಿ ಇಲಾಖೆ ಎಇಇ ಹನುಮಂತಪ್ಪ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios