Asianet Suvarna News Asianet Suvarna News

Davanagere: ಡಿ.20ರಂದು ಬೆಳಗಾವಿಯ ಸುವರ್ಣಸೌಧದ ಎದುರು ‌ರೈತರಿಂದ ಪ್ರತಿಭಟನೆ

ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.20 ರಂದು‌ ಬೆಳಗ್ಗೆ 10 ಕ್ಕೆ ಬೆಳಗಾವಿಯ ಸುವರ್ಣಸೌಧದ ಎದುರು ‌ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು‌ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಹೇಳಿದರು.

Farmers protest in front of Belagavi Suvarna Soudha on December 20th gow
Author
First Published Dec 16, 2022, 3:52 PM IST

ವರದಿ : ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್ 

ದಾವಣಗೆರೆ (ಡಿ.16); ರೈತರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಡಿ.20 ರಂದು‌ ಬೆಳಗ್ಗೆ 10 ಕ್ಕೆ ಬೆಳಗಾವಿಯ ಸುವರ್ಣಸೌಧದ ಎದುರು ‌ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು‌ಸೇನೆ ರಾಜ್ಯ ಉಪಾಧ್ಯಕ್ಷ ಹೊನ್ನೂರು ಮುನಿಯಪ್ಪ ಹೇಳಿದರು.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸುವ ಕಬ್ಬಿನ ಬೆಲೆ ನಿಗಧಿಗಾಗಿ ಮತ್ತು ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಬಾಕಿ ಹಣಕ್ಕಾಗಿ ಕಬ್ಬು ಬೆಳೆಗಾರರು ನಿರಂತರ ಚಳುವಳಿಗಳನ್ನು ಮಾಡುತ್ತಿದ್ದಾರೆ. ಕೆಲವು ಕಡೆ ಕಾನೂನು ಸುವ್ಯವಸ್ಥೆ ಬಿಗಡಾಯಿಸಿದ್ದರು ಸಹ ಸರ್ಕಾರ ಗಮನ ಹರಿಸುತ್ತಿಲ್ಲ. ರಾಜ್ಯದಲ್ಲಿ ವಿವಿಧ ಬೆಳೆಗಳಿಗೆ ಬೆಲೆ ಕುಸಿತ ಉಂಟಾಗಿದೆ. ಸರ್ಕಾರ ಖರೀದಿ ಕೇಂದ್ರಗಳನ್ನು ಸಹ ಪ್ರಾರಂಭಿಸಿಲ್ಲ. ಅತೀವೃಷ್ಟಿಯಿಂದಾಗಿರುವ ಹಾನಿಗೆ ನ್ಯಾಯಯುತ ಪರಿಹಾರ ವಿತರಿಸಿಲ್ಲ. ರೈತರ ಸಾಲಕ್ಕಾಗಿ ಬ್ಯಾಂಕ್‌ಗಳು, ಸಹಕಾರಿ ಸಂಸ್ಥೆಗಳು ಒಪ್ಪಿ, ಹರಾಜು, ಆನ್‌ಲೈನ್ ಹರಾಜುಗಳನ್ನು ಮಾಡುತ್ತಿದ್ದಾರೆ. ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಇನ್ನೂ ಹಲವು ಸಮಸ್ಯೆಗಳಿಂದ ರೈತರು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

Mysuru : ರೈತರಿಗೆ ತೊಂದರೆಯಾದರೆ ಕಠಿಣ ಕ್ರಮಕ್ಕೆ ಶಿಫಾರಸ್ಸು

ಕೇಂದ್ರ ಸರ್ಕಾರ ಕಬ್ಬಿಗೆ ಎಫ್ ಆರ್ ಪಿ ಮೋಸದ ಬೆಲೆ ಮಾಡಿದೆ. ರೈತರು ಕೊಳ್ಳುವ ಬೀಜ, ಗೊಬ್ಬರ, ಕೂಲಿ, ಸಾಗಣಿಕೆ 3 ಪಟ್ಟು ಹೆಚ್ಚಾಗಿದೆ. ಆದರೂ ಸರ್ಕಾರ ಈಗಲೂ 5ವರ್ಷದ ಹಿಂದಿನ ಬೆಲೆಯನ್ನೇ ನಿಗಧಿ ಮಾಡಿದೆ. ಸಕ್ಕರೆ ಕಾರ್ಖಾನೆಗಳು ಟನ್ ಒಂದಕ್ಕೆ 3,500, ರೂ. ಬೆಲೆ ಕೊಡಬೇಕು ಮತ್ತು ರೈತರು ಸರ್ಕಾರಕ್ಕೆ ಒಂದು ಟನ್ 4,500 ರೂ. ತೆರಿಗೆ ಕೊಡುತ್ತಿದ್ದಾರೆ. ಅದರಲ್ಲಿ 2,000 ರೂ.ಗಳನ್ನ ಸಹಾಯಧನ ಕೊಡಬೇಕು.

ಡಿ.19ಕ್ಕೆ ಮಂಡ್ಯ ಬಂದ್‌ : ಬಡಗಲಪುರ ನಾಗೇಂದ್ರ

ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು, ಬ್ಯಾಂಕ್‌ಗಳು ರೈತರ ಆಸ್ತಿ ಜಪ್ತಿ, ಹರಾಜು, ಆನ್‌ಲೈನ್ ಹರಾಜು ಮಾಡುತ್ತಿರುವುದರ ವಿರುದ್ಧ ಮುಖ್ಯಮಂತ್ರಿಗಳು ಕಾನೂನು ಮಾಡುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ. ತಕ್ಷಣವೇ ಈ ಚಳಿಗಾಲದ ಅಧಿವೇಶನದಲ್ಲೇ ಕಾನೂನು ತರಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು. ದಾವಣಗೆರೆ ಜಿಲ್ಲೆಯಿಂದ 200 ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಿ.ಪಿ.ಮರುಳಸಿದ್ದಯ್ಯ, ಕಬ್ಬಳ ಸಂತೋಷ್ ನಾಯ್ಕ್, ಗೋಶಾಲೆ ಬಸವರಾಜ್, ಹೊನ್ನೂರು ರಾಜು, ಹದಡಿ ಪಾಲಾಕ್ಷ ಮತ್ತಿತರರಿದ್ದರು.

Follow Us:
Download App:
  • android
  • ios