ಬೆಂಗಳೂರು(ಫೆ. 05) ರೈತರು ಚಳುವಳಿಯ ಭಾಗವಾಗಿಲ್ಲ. ರೈತರು ಬಿಜೆಪಿಯ ಜೊತೆಗಿದ್ದಾರೆ. ರೈತರ ಹೆಸರಲ್ಲಿ ಅರಾಜಕತೆ ಸೃಷ್ಟಿಮಾಡಲು ಕೆಲವರು ಪ್ರತಿಭಟನೆ ನಡೆಸ್ತಿದ್ದಾರೆ.. ರೈತರ ಪ್ರತಿಭಟನೆ ತಡೆಯಲು ಸರ್ಕಾರ ಬೇಲಿ ಹಾಕಿಲ್ಲ. ಆದರೆ ಅರಾಜಕತೆ ಸೃಷ್ಟಿಸುವವರ ವಿರುದ್ಧ ಬೇಲಿ ಹಾಕಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ  ಹೇಳಿದ್ದಾರೆ.

ವಿಚಾರವಾದಿ ಭಗವಾನ್ ಮೇಲೆ ಲಾಯರ್ ಒಬ್ಬಳು ಮೀರಾ ರಾಘವೇಂದ್ರ  ಒಂದು ಕೇಸ್ ಹಾಕಿದಾಳೆ. ಭಗವಾನ್ ಅವರ ಅಭಿಪ್ರಾಯ ಹೇಳಿದ್ರು, ಅದಕ್ಕೆ ಅವರಿಗೆ ಅಧಿಕಾರ ಇದೆ. ಆದರೆ ಹೊರಗಡೆ ಬಂದ ಮೇಲೆ ಮಸಿ ಬಳಿದಿರುವುದು ಖಂಡನೀಯ ಎಂದರು.

ಭಗವಾನ್ ಗೆ ಮಸಿ ಹಾಕಿದ ವಕೀಲೆ ಮೇಲೆ ಮತ್ತೊಂದು  ಕೇಸ್

ಈ ಸರ್ಕಾರದಲ್ಲಿ ಸಾಹಿತಿಗಳಿಗೆ ರಕ್ಷಣೆ ಇಲ್ಲ ಎಂಬ ಮಾತನ್ನು ಒಪ್ಪಲು ಸಾಧ್ಯವಿಲ್ಲ. ಮಸಿ ಬಳಿಯುವ ಕ್ರಮವನ್ನ ನಾನು ಸಮರ್ಥಿಸಲ್ಲ. ಆದ್ರೆ ಭಗವಾನ್ ಅವರು ಮಾತಾಡಿರುವುದನ್ನು ಅವರ ತಂದೆ ತಾಯಿಗಳು, ಅವರ ಮಕ್ಕಳು ಸಹ ಒಪ್ಪಲ್ಲ. ಈ ರೀತಿಯ ಹೇಳಿಕೆ ಪಾಕಿಸ್ತಾನದಲ್ಲಿ ನೀಡಿದ್ರೆ ಭಗವಾನ್ ಅವರ ತಲೆಯನ್ನೇ ತೆಗೆಯುತ್ತಿದ್ದರು. ಕೆ. ಭಾಗವಾನ್ ಭಾರತದಲ್ಲಿದ್ದಾರೆ. ಅವರ ಪುಣ್ಯ ಭಾರತ ಆಗಿದ್ದಕ್ಕೆ ಬರೀ ಮಸಿ ಬಳಿದಿದ್ದಾರೆ  ಹಾಗಂತ ಮಸಿ ಬಳಿಯುವ ಕ್ರಮಕ್ಕೆ ನನ್ನ ಸಮರ್ಥನೆ ಇಲ್ಲ ಎಂದರು.

ಪಾಕಿಸ್ತಾನದಂತ ಮನಸ್ಥಿತಿ ಭಾರತದಲ್ಲಿದ್ದಿದ್ದರೆ ಕೆ. ಭಗವಾನ್ ಏಲ್ಲಿ ಉಳಿಯುತ್ತಿದ್ದರು..?  ಇಷ್ಟರೊಳಗೆ ಅವರ ಫೋಟೋಗೆ ಹಾರ ಹಾಕಿಸಿಕೊಳ್ಳುತ್ತಿದ್ದರು.?  ಮಾತಾಡಿಯೂ ಬದುಕಬಹುದಾದ ದೇಶ ಭಾರತ.. ಇಂಥಹ ವಾತಾವರಣದಲ್ಲಿದ್ದು ಇಲ್ಲಿ ಆರಾಧಿಸುವ ದೇವರ ಬಗ್ಗೆ ಮಾತನಾಡಿದ್ದು ತಪ್ಪು, ನಮ್ಮ ಸಹನೆಯನ್ನ ದೌರ್ಬಲ್ಯ ಎಂದುಕೊಳ್ಳಬೇಡಿ ಎಂದರು.