Agricultural Loan : 300 ರೈತರ ಮೇಲೆ ಬ್ಯಾಂಕ್‌ ದಾವೆ : ಪ್ರತಿಭಟನೆ

  • 300 ರೈತರ ಮೇಲೆ ಬ್ಯಾಂಕ್‌ ದಾವೆ : ಪ್ರತಿಭಟನೆ
  •  ಪಟ್ರೇನಹಳ್ಳಿ ಬ್ಯಾಂಕ್‌ ಆಫ್‌ ಬರೋಡಾ ಶಾಖೆ ವಿರುದ್ಧ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ
Farmers Protest Against Bank of Baroda in Chikkaballapur snr

 ಚಿಕ್ಕಬಳ್ಳಾಪುರ (ಡಿ.24):   ಕೃಷಿ ಸಾಲ (Agricultural Loan) ತೀರಿಸದ ರೈತರ (Farmers) ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಬ್ಯಾಂಕ್‌ (Bank) ಧೋರಣೆ ವಿರುದ್ದ ರೊಚ್ಚಿಗೆದ್ದ ನೂರಾರು ರೈತರು ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ದಿಢೀರನೆ ಬ್ಯಾಂಕ್‌ ಮುಂದೆ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ ಘಟನೆ ನಗರದ ಹೊರ ವಲಯದ ಪಟ್ರೇನಹಳ್ಳಿಯ ಬ್ಯಾಂಕ್‌ ಆಫ್‌ ಬರೋಡಾ ಶಾಖೆ ಎದುರು ಗುರುವಾರ ಬೆಳಗ್ಗೆ ನಡೆಯಿತು.

ಬ್ಯಾಂಕ್‌ನಿಂದ ಸಾಲ ಪಡೆದಿರುವ ರೈತರು ಕಂತುಗಳ ಪ್ರಕಾರ ಸಾಲ ತೀರಿಸಿಲ್ಲ ಎಂದು ಹೇಳಿ ಬ್ಯಾಂಕ್‌ ವತಿಯಿಂದ ಸುಮಾರು 300 ಕ್ಕೂ ಹೆಚ್ಚು ಸಾಲ ಪಡೆದ ರೈತರ ಮೇಲೆ ನ್ಯಾಯಾಲಯದಲ್ಲಿ ಸಾಲ ಮರು ಪಾವತಿಸುವಂತೆ ಪ್ರಕರಣ ದಾಖಲಿಸಿದ್ದು ಸಾಲ ತೀರಿಸುವಂತೆ ನ್ಯಾಯಾಲಯದ ಮೂಲಕ ನೋಟಿಸ್‌ ಬಂದಿದೆ.

ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ:  ಇದರಿಂದ ರೊಚ್ಚಿಗೆದ್ದ ನೂರಾರು ರೈತರು (Farmers) ಪಟ್ರೇನಹಳ್ಳಿಯಲ್ಲಿರುವ ಬ್ಯಾಂಕ್‌ ಆಫ್‌ ಬರೋಡಾ (Bank Of Baroda) ಶಾಖೆ ಎದುರು ಬ್ಯಾಂಕ್‌ ಅಧಿಕಾರಿಗಳ ಧೋರಣೆ ಖಂಡಿಸಿ ಕೂಡಲೇ ನ್ಯಾಯಾಲಯದಲ್ಲಿ (Court) ಹೂಡಿರುವ ರೈತರ (Farmers) ಮೇಲಿನ ಪ್ರಕರಣವನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಿ ಪ್ರತಿಭಟನಾ ಧರಣಿ ನಡೆಸಿದರು. ಬ್ಯಾಂಕ್‌ ಅಧಿಕಾರಿಗಳ ಕಿರಕುಳಕ್ಕೆ ಬಹಳಷ್ಟುರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಏಕಾಏಕಿ ರೈತರ (Farmers) ಗಮನಕ್ಕೆ ತರದೇ 300 ರೈತರ ಮೇಲೆ ನ್ಯಾಯಾಲಯದಲ್ಲಿ ದಾವೆ ಹೂಡಿರುವುದು ಸರಿಯಲ್ಲ ಎಂದು ರೈತರು ಬ್ಯಾಂಕ್‌ (Bank) ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರ ಹಾಕಿದರು.

ಕೋವಿಡ್‌ ಮತ್ತು ಅತಿವೃಷ್ಟಿಯಿಂದಾಗಿ ರೈತರು (Farmers) ತಾವು ಬೆಳೆದ ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್‌ ಅಧಿಕಾರಿಗಳು ಬೆಳೆ ಸಾಲ ತೀರಿಸುವಂತೆ ಪದೇ ಪದೇ ರೈತರ ಮೇಲೆ ಒತ್ತಡ ಹೇರಿ ರೈತರಿಗೆ ಮಾನಸಿಕವಾಗಿ ಕಿರುಕುಳ ನೀಡಿ ರೈತರ ಘನತೆಗೆ ಕುಂದು ತರುತ್ತಿದ್ದಾರೆಂದು ಪ್ರತಿಭಟನಾನಿರತ ರೈತರು ಆರೋಪಿಸಿದರು.

ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್‌.ಮುನಿಕೃಷ್ಣಪ್ಪ, ರಾಜ್ಯ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ,ಪಿ.ಮುನಿವೆಂಕಟಪ್ಪ, ಕಣಿತಹಳ್ಳಿ ವೆಂಕಟೇಶ್‌, ಬನ್ನಿಕುಪ್ಪೆ ವಿ.ಶ್ರೀನಿವಾಸ್‌, ಅಣಕನೂರು ಅಶೋಕ್‌, ಚಿಕ್ಕಕಾಡಿಗೇನಹಳ್ಳಿ ದಯಾನಂದ, ಪಟ್ರೇನಹಳ್ಳಿ ಪಿ,ಟಿ.ನಾಗರಾಜ್‌, ವರದಹಳ್ಳಿ ಅಶೋಕ್‌, ನುಗತಹಳ್ಳಿ ರವಿ ಸೇರಿದಂತೆ ಸುಮಾರು 300 ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ರೈತರ ಬೇಡಿಕೆ ಏನು?

ರೈತರ ಮೇಲೆ ಹೂಡಿರುವ ಪ್ರಕರಣವನ್ನು (Case) ಕೂಡಲೇ ವಾಪಸ್‌ ಪಡೆಯಬೇಕು, ಕೆನರಾ ಹಾಗೂ ಎಸ್‌ಬಿಐ ಮಾದರಿಯಲ್ಲಿ ರೈತರ ಸಾಲದ ಅಸಲಿನಲ್ಲಿ ಸಾಲ ತೀರಿಸಲು ರಿಯಾಯಿತಿ ನೀಡಬೇಕು, ಬಾಕಿ ಸಾಲ ತೀರಿಸಲು ರೈತರಿಗೆ ಕುಂತುಗಳಲ್ಲಿ ಅವಕಾಶ ನೀಡಿ ರೈತರ ನೆರವಿಗೆ ಧಾವಿಸಬೇಕು, ರೈತರಿಗೆ ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು, ಸಾಲ ತೀರಿಸಲು ರೈತರ ಮೇಲೆ ಒತ್ತಡ ತರುವುದನ್ನು ನಿಲ್ಲಿಸಿ ಸಾಲ ತೀರಿಸಿದ ರೈತರಿಗೆ ಕೂಡಲೇ ಹೊಸ ಸಾಲ ವಿತರಿಸಬೇಕೆಂದು ಆಗ್ರಹಿಸಿ ರೈತರು ಬ್ಯಾಂಕ್‌ ಆಫ್‌ ಬರೋಡಾ ಶಾಖೆಯ ವಿಭಾಗೀಯ ವ್ಯವಸ್ಥಾಪಕ ಗಂಗಧಾರಯ್ಯಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ಪೀಕರಿಸಿದ ವಿಭಾಗೀಯ ವ್ಯವಸ್ಥಾಪಕ ಗಂಗಾಧರಯ್ಯ, ಬೇಡಿಕೆಗಳನ್ನು ಬ್ಯಾಂಕ್‌ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವ ಭರವಸೆ ನೀಡಿ ತೆರಳಿದರು.

  •  300 ರೈತರ ಮೇಲೆ ಬ್ಯಾಂಕ್‌ ದಾವೆ : ಪ್ರತಿಭಟನೆ
  • ಸಾಲ ತೀರಿಸುವಂತೆ ನ್ಯಾಯಾಲಯದ ಮೂಲಕ ನೋಟಿಸ್‌ 
  •  ಪಟ್ರೇನಹಳ್ಳಿ ಬ್ಯಾಂಕ್‌ ಆಫ್‌ ಬರೋಡಾ ಶಾಖೆ ವಿರುದ್ಧ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರ ಪ್ರತಿಭಟನೆ
Latest Videos
Follow Us:
Download App:
  • android
  • ios