ಈರುಳ್ಳಿ ಬೆಳೆದು ಕಂಗಾಲಾದ ಕೋಟೆನಾಡಿನ ರೈತರು, 14 ಸಾವಿರ ಹೆಕ್ಟೇರ್ ಈರುಳ್ಳಿ ನಾಶ!
ಈರುಳ್ಳಿ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ. ಪ್ರತಿ ಬಾರಿ ಲಕ್ಷ ಲಕ್ಷ ಲಾಭ ಗಳಿಸ್ತಿದ್ದ ರೈತರು ಈ ಬಾರಿ ಲಾಭವಿರಲಿ, ಬಿತ್ತನೆಗೆ ಹಾಕಿದ ಬಂಡವಾಳ ಸಹ ಬರ್ತಿಲ್ಲ ಎಂದು ಮನನೊಂದ ರೈತರು ಈರುಳ್ಳಿ ಬೆಳೆಯನ್ನು ಕಟಾವಿಗೂ ಮುನ್ನವೇ ನಾಶ ಪಡಿಸುತಿದ್ದಾರೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.22): ಈರುಳ್ಳಿ ಈ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ. ಪ್ರತಿ ಬಾರಿ ಲಕ್ಷ ಲಕ್ಷ ಲಾಭ ಗಳಿಸ್ತಿದ್ದ ರೈತರು ಈ ಬಾರಿ ಲಾಭವಿರಲಿ, ಬಿತ್ತನೆಗೆ ಹಾಕಿದ ಬಂಡವಾಳ ಸಹ ಬರ್ತಿಲ್ಲ ಎಂದು ಮನನೊಂದ ರೈತರು ಈರುಳ್ಳಿ ಬೆಳೆಯನ್ನು ಕಟಾವಿಗೂ ಮುನ್ನವೇ ನಾಶ ಪಡಿಸುತಿದ್ದಾರೆ. ಕೋಟೆನಾಡು ಚಿತ್ರದುರ್ಗ ತಾಲ್ಲೂಕಿನ ತೋಪುರಮಾಳಿಗೆ ಗ್ರಾಮ, ಚಳ್ಳಕೆರೆ, ಹೊಸದುರ್ಗ ಸೇರಿದಂತೆ ಹಿರಿಯೂರು ತಾಲ್ಲೂಕುಗಳ ರೈತರನ್ನು ಈರುಳ್ಳಿ ಬೆಳೆದ ರೈತರು ಬಾರಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಅದ್ರಲ್ಲೂ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ ಎನಿಸಿರುವ ಈರುಳ್ಳಿಗೆ ಎಲ್ಲೆಡೆ ಬಾರಿ ಬೇಡಿಕೆ ಇದೆ. ಅಲ್ಲದೇ ಈರುಳ್ಳಿಯು ಇಲ್ಲಿನ ರೈತರ ಪಾಲಿಗೆ ಬಂಗಾರದಂತ ಲಾಭ ಕೊಡುವ ಬೆಳೆ ಎನಿಸಿತ್ತು. ಹೀಗಾಗಿ ಅಪಾರ ಲಾಭದ ನಿರೀಕ್ಷೆಯಿಂದ ಬಿತ್ತನೆ ಮಾಡಿದ ರೈತರ ಕನಸಿಗೆ ಇತ್ತೀಚಿಗೆ ಸುರಿದ ಅಕಾಲಿಕ ಮಳೆ ತಣ್ಣೀರು ಎರಚಿದೆ. ಬಹುತೇಕ ಕಡೆ ಈರುಳ್ಳಿ ಕೊಳೆತು ಹೋಗಿದೆ. ಇನ್ನು ಕೆಲವೆಡೆ ಉತ್ತಮ ಇಳುವರಿ ಬಂದರೂ ಕೂಡ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕುಸಿತದಿಂದಾಗಿ ಕೇಳುವವರು ಇಲ್ಲವಾಗಿದೆ. ಹೀಗಾಗಿ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸೋದಿರಲಿ, ಅದನ್ನು ಕಟಾವು ಸಹ ಮಾಡದೇ ಕಳೆನಾಶಕ ಸಿಂಪಡಿಸಿ ನಾಶ ಪಡಿಸ್ತಿರುವ ರೈತರು ಬಿತ್ತನೆಗೆ ಮಾಡಿದ ಸಾಲ, ತೀರಿಸೋದು ಹೇಗೆಂಬ ಆತಂಕದಲ್ಲಿದ್ದಾರೆ. ಹೀಗಾಗಿ ಸರ್ಕಾರ ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ರೈತರಿಗೆ ಈರುಳ್ಳಿಯಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಸುರೇಶ್ ರೈತ ತೋಪುರಮಾಳಿಗೆ ಗ್ರಾಮ: ಇನ್ನು ಈ ಬಗ್ಗೆ ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಅಧಿಕಾರಿಗಳನ್ನು ಕೇಳಿದ್ರೆ, ತೀವ್ರ ಮಳೆಯಿಂದಾಗಿ ಜಿಲ್ಲೆಯಾದ್ಯಂತ 14 ಸಾವಿರ ಹೆಕ್ಟೇರ್ ಈರುಳ್ಳಿ ನಾಶವಾಗಿದೆ. ಹೀಗಾಗಿ ಈ ಬಗ್ಗೆ ನಾವುಗಳು ಸಮೀಕ್ಷೆ ನಡೆಸಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ. ಶೀಘ್ರದಲ್ಲೇ ಪರಿಹಾರ ನೀಡುವ ನಿರೀಕ್ಷೆ ಇದೆ ಅಂತಾರೆ. ಜೊತೆಗೆ ಈರುಳ್ಳಿಯನ್ನು ಹೊರತು ಪಡಿಸಿ 2 ಸಾವಿರ ಹೆಕ್ಟೇರ್ ಮೆಕ್ಕೆಜೋಳ, ರಾಗಿ ಇನ್ನಿತರ ಬೆಳೆಯೂ ನಾಶವಾಗಿದೆ.
Chamarajanagar; ರೈತನ ಕಣ್ಣಲ್ಲಿ ನೀರು ತರಿಸ್ತಿದೆ ಸಣ್ಣೀರುಳ್ಳಿ
ಸುಮಾರು ನೂರಾರು ಕೋಟಿ ಹಣ ರೈತರಿಗೆ ನಷ್ಟ ಆಗಿರಬಹುದು ಎಂಬ ಮಾಹಿತಿಯಿದೆ. ಹಿಂಗಾರು ಮುಂಗಾರು ಎರಡು ಸೇರಿ ಸುಮಾರು 20 ಸಾವಿರ ಹೆಕ್ಟೇರ್ ಬಿತ್ತನೆಯನ್ನು ಈ ಬಾರಿ ರೈತರು ಮಾಡಿದ್ದು. ಅದ್ರಲ್ಲಿ ಮುಕ್ಕಾಲು ಬಾಗ ಮಳೆಯ ಅವಾಂತರದಿಂದ ಹಾನಿ ಆಗಿರೋದೆ ದುರಂತ. ಇದೆಲ್ಲ ಕುರಿತು ಪರಿಹಾರ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭರವಸೆ ನೀಡಿದರು.
Chitradurga; ಜಿಟಿ ಜಿಟಿ ಮಳೆಗೆ ಅಡಿಕೆ, ಈರುಳ್ಳಿ ಬೆಳೆ ಸಂಪೂರ್ಣ ನಾಶ
ಒಟ್ಟಾರೆ ಅತಿವೃಷ್ಟಿ ಹಾಗೂ ಈರುಳ್ಳಿ ಬೆಲೆ ಕುಸಿತ ದಿಂದಾಗಿ ಕೋಟೆನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ರೈತರ ಶ್ರಮಕ್ಕೆ ಫಲ ಇಲ್ಲದಂತಾಗಿದ್ದೂ,ಸರ್ಕಾರ ಇನ್ನಾದ್ರು ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು. ಹಾಗೂ ಅಗತ್ಯ ಪರಿಹಾರ ಒದಗಿಸುವ ಮೂಲಕ ರೈತರ ಸಂಕಷ್ಟದಿಂದ ಪಾರು ಮಾಡಬೇಕಿದೆ.