ಚಾಮರಾಜನಗರದಲ್ಲಿ ಹುಲಿ ಹಾಗೂ ಆನೆ ಕಾಟದಿಂದ ಹೈರಾಣಾದ ರೈತರು

ಅದು ಕಾಡಂಚಿನ ಗ್ರಾಮ. ಆ ಗ್ರಾಮದ ರೈತರು ವ್ಯವಸಾಯವನ್ನೆ ನಂಬಿ ಬದುಕು ನಡೆಸಿತ್ತಿದ್ದಾರೆ. ಆದರೆ ಇದೀಗ ಜಮೀನುಗಳಿಗೆ  ಹೋಗಲು ಭಯ ಪಡುತ್ತಿದ್ದಾರೆ. ಪ್ರತಿ ದಿನ ಜೀವ ಕೈಯಲ್ಲಿಡಿದೆ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಇದೆ.

Farmers Fear from tiger and elephant in Chamarajanagar gvd

ವರದಿ: ಪುಟ್ಟರಾಜು. ಆರ್.ಸಿ, ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಆ.19): ಅದು ಕಾಡಂಚಿನ ಗ್ರಾಮ. ಆ ಗ್ರಾಮದ ರೈತರು ವ್ಯವಸಾಯವನ್ನೆ ನಂಬಿ ಬದುಕು ನಡೆಸಿತ್ತಿದ್ದಾರೆ. ಆದರೆ ಇದೀಗ ಜಮೀನುಗಳಿಗೆ  ಹೋಗಲು ಭಯ ಪಡುತ್ತಿದ್ದಾರೆ. ಪ್ರತಿ ದಿನ ಜೀವ ಕೈಯಲ್ಲಿಡಿದೆ ಜಮೀನಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಅಷ್ಟಕ್ಕೂ ಆ ಗ್ರಾಮದ ಜನರಿಗಿರುವ ಭಯ ಏನು ಅಂತೀರಾ ಈ ಸ್ಟೋರಿ ನೋಡಿ. ಹುಲಿಯ ಹೆಜ್ಜೆ... ಅಲ್ಲೆ ಗಜರಾಜನ ಆರ್ಭಟ.... ಹೌದು! ಸದ್ಯ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹುಂಡೀಪುರ ಹಾಗೂ ಚೌಡಹಳ್ಳಿ ಗ್ರಾಮಸ್ಥರ ಪಾಡಿದು. 

ಕಳೆದ ಕೆಲ ದಿನಗಳಿಂದ ಆನೆ ಹಾಗೂ ಹುಲಿ ಹಾವಳಿಯಿಂದ ಈ ಭಾಗದ ರೈತರು ಹೈರಾಣವಾಗಿದ್ದಾರೆ. ಹುಲಿ ಆನೆ ಕಾಟಕ್ಕೆ ಜಮೀನಿಗೂ ಕಾಲಿಡಲು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆಯು ಕೂಡ ಈ ಭಾಗದಲ್ಲಿ ಹುಲಿ ಕಾಟವಿತ್ತು. ಇಬ್ಬರು ರೈತರನ್ನು ಹುಲಿ ಬಲಿ ಪಡೆದಿತ್ತು.ಬಳಿಕ ಕಾರ್ಯಚರಣೆ ನಡೆಸಿ ಹುಲಿಯನ್ನ ಸೆರೆ ಹಿಡಿಯಲಾಗಿತ್ತು. ಇದೀಗ ಮತ್ತೆ ಹುಲಿ ಹಾಗೂ ಆನೆ ಹಾವಳಿ ಹೆಚ್ಚಾಗಿದೆ. ಮೊನ್ನೆಯಷ್ಟೆ ಚೌಡಹಳ್ಳಿ ಗ್ರಾಮದ ರೈತ ರವಿ ಎಂಬಾತನ ಹುಲಿ ದಾಳಿಯಿಂದ ಕೂದಲೆಳೆ ಅಂತರದಿಂದ  ಪಾರಾಗಿದ್ದಾನೆ. 

ಬಿಜೆಪಿ ರಾಜಕೀಯ ಸಂಸ್ಕೃತಿಯ ಚಿತ್ರಣವನ್ನೇ ಬದಲಿಸಿದೆ: ಶಾಸಕ ಎನ್‌.ಮಹೇಶ್‌

ಇದರಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಕಾಡಂಚಿನ ಜಮೀನಿನುಗಳಲ್ಲಿ ಕೆಲಸಕ್ಕೆ ಬರಲು ಕೂಲಿ ಕಾರ್ಮಿಕರು ಭಯ ಪಡುತ್ತಿದ್ದಾರೆ. ಈ ಬಗ್ಗೆ ಅರಣ್ಯಧಿಕಾರಿಗಳಿಗೆ ಎಷ್ಟೆ ಬಾರಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಜಮೀನಿಗೆ ಹೋಗಲು ನಮಗೆ ಭಯವಾಗುತ್ತಿದೆ. ಜೊತೆಗೆ ಬೆಳೆದ ಫಸಲು ಆನೆ ದಾಳಿಯಿಂದ ನಾಶವಾಗುತ್ತಿದೆ ಅಂತಾರೆ ಸ್ಥಳಿಯ ರೈತರು. ಇಷ್ಟಕ್ಕೆಲ್ಲ ಕಾರಣ ಅರಣ್ಯಧಿಕಾರಿಗಳ ನಿರ್ಲಕ್ಷ್ಯವೆ ಕಾರಣವಾಗಿದೆ ಅನ್ನೋದು ಸ್ಥಳಿಯರ ಆರೋಪ. 

ಆನೆ ಜಮೀಮಿಗೆ ಬಂದರೆ ನಮ್ಮ ರೇಂಜ್‌ನಿಂದ ಬಂದಿಲ್ಲ ಅಂತ ಅಧಿಕಾರಿಗಳು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ರೋಸಿ ಹೋಗಿದ್ದ ರೈತರು ತಿಂಗಳ ಹಿಂದೆ ಅರಣ್ಯಧಿಕಾರಿಗಳಿಗೆ ದಿಗ್ಬಂದನ ಹಾಕಿದ್ದರು. ಆಗ ಒಂದೆರಡು ದಿನದಲ್ಲಿ ಆನೆ ಕಂದಕ ನಿರ್ಮಾಣ ಹಾಗೂ ಸೋಲಾರ್ ಫೇನ್ಸ್ ಸರಿಯಾಗಿ ನಿರ್ವಹಣೆ ಮಾಡುವುದಾಗಿ ಹೇಳಿ ಹೋಗಿದ್ದರು. ಆದ್ರೆ ತಿಂಗಳಾದ್ರು ಇತ್ತ ಅಧಿಕಾರಿಗಳ ಸುಳಿವೆ ಇಲ್ಲ. 

ಜನ್ಮದಿನದಂದೇ ಉಪನ್ಯಾಸಕಿ ಸುಸೈಡ್: ಡೆತ್​ನೋಟ್‌ನಲ್ಲಿ ಗೊಂದಲದ ಅಂಶಗಳು

ಇನ್ನೊಂದು ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ವೆತ್ತುಕೊಳ್ಳಿ ಅಂತ ಸ್ಥಳಿಯರು ಆಗ್ರಹಿಸುತ್ತಿದ್ದಾರೆ. ಬಂಡಿಪುರ ಹುಲಿ ಸಂರಕ್ಷಿತಾರಣ್ಯದ ಪ್ರಾಣಿಗಳಿಂದ  ಕಾಡಂಚಿನ ರೈತರ ಗೋಳು ಹೇಳತೀರದಾಗಿದೆ.  ದಿನೇ ದಿನೇ ಹುಲಿ ಹಾಗೂ ಆನೆ ಕಾಟದಿಂದ ರೈತರು ಹೈರಾಣವಾಗಿ ಹೋಗಿದ್ದಾರೆ. ಇನ್ನು ಮುಂದಾದರೂ ಅಧಿಕಾರಿಗಳು ಈ ರೈತರ ಕೂಗಿಗೆ ಸ್ಪಂದಿಸಿ ಕಾಡು ಪ್ರಾಣಿಗಳ ಹಾವಳಿಗೆ ಬ್ರೇಕ್ ಹಾಕ್ತಾರಾ ಅನ್ನೋದನ್ನ  ಕಾದು ನೋಡಬೇಕಾಗಿದೆ.

Latest Videos
Follow Us:
Download App:
  • android
  • ios