Asianet Suvarna News Asianet Suvarna News

ಹಿರೇಕೆರೂರು: ಯೂರಿಯಾಕ್ಕಾಗಿ ರೈತರ ನೂಕುನುಗ್ಗಲು, ಅನ್ನದಾತನ ಪರದಾಟ

15 ದಿನ​ಗ​ಳಿಂದ ಗೊಬ್ಬ​ರ​ಕ್ಕಾಗಿ ರೈತರ ಪರ​ದಾ​ಟ| 2 ಗಂಟೆ ವಾಹನ ದಟ್ಟ​ನೆ| ಗೊಬ್ಬರ ಬಂದಿದೆ ಎಂಬ ಸುದ್ದಿ ಹರಡುತಿದ್ದಂತೆ ಸುತ್ತಮುತ್ತಲಿನ ಗ್ರಾಮದ ರೈತರು ತಮ್ಮ ತಮ್ಮ ವಾಹನಗಳೊಂದಿಗೆ ಉಗ್ರಾಣದ ಮುಂದೆ ಏಕಾಏಕಿ ಬಂದು ಸೇರಿದ ಕಾರಣ ಟ್ರಾಫಿಕ್‌ ಜಾಮ್‌|

Farmers Faces Urea Fertilizer Problems in Hirekeruru in Haveri district
Author
Bengaluru, First Published Jul 18, 2020, 9:02 AM IST

ಹಿರೇಕೆರೂರು(ಜು.18):  ಕಳೆದ 15 ದಿನ​ಗ​ಳಿಂದ ಯೂರಿಯಾ ಗೊಬ್ಬರ ಸಿಗ​ದೆ ತಾಲೂಕಿನ ತಾವರಗಿ ಉಗ್ರಾಣದ ಮುಂದೆ ರೈತರು ಪರ​ದಾ​ಡು​ತ್ತಿ​ದ್ದಾ​ರೆ.

ಸತತ ಎರಡ್ಮೂರು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವ ಕಾರಣ ಬೆಳೆಗಳಿಗೆ ಯೂರಿಯಾ ಗೊಬ್ಬರ ಅತೀ ಅವಶ್ಯಕವಾಗಿದೆ. ಆದರೆ, ಎಲ್ಲೂ ಗೊಬ್ಬರ ದೊರೆಯುತ್ತಿಲ್ಲ. ಬರುವ ಗೊಬ್ಬರಕ್ಕಾಗಿ ಉಗ್ರಾಣಗಳ ಮುಂದೆ ರೈತರು ದಿನಾಲೂ ಕಾಯುವ ಪರಿಸ್ಥಿತಿ ಬಂದೊದಗಿದೆ. ಶುಕ್ರ​ವಾ​ರ​ವೂ ಗೊಬ್ಬರದ ಲಾರಿ ಬಂದಿದೆ ಎಂಬ ಸುದ್ದಿ ತಿಳಿದ ರೈತರು ಏಕಾ​ಏ​ಕಿ ಜಮಾವಣೆಗೊಂಡ ಪರಿಣಾಮ ಹಿರೇಕೆರೂರ-ರಾಣಿಬೆನ್ನೂರ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸುಮಾರು 2 ಗಂಟೆಗಳ ಕಾಲ ಟ್ರಾಫಿಕ ಜಾಮ್‌ ಉಂಟಾ​ಗಿ​ತ್ತು.

ಗೊಬ್ಬರ ಬಂದಿದೆ ಎಂಬ ಸುದ್ದಿ ಹರಡುತಿದ್ದಂತೆ ಸುತ್ತಮುತ್ತಲಿನ ಗ್ರಾಮದ ರೈತರು ತಮ್ಮ ತಮ್ಮ ವಾಹನಗಳೊಂದಿಗೆ ಉಗ್ರಾಣದ ಮುಂದೆ ಏಕಾಏಕಿ ಬಂದು ಸೇರಿದ ಕಾರಣ ಟ್ರಾಫಿಕ್‌ ಜಾಮ್‌ ಆಯಿತು. ಇದೇ​ ವೇಳೆ, ಗೊಬ್ಬರ ಪಡೆಯಲು ನೂಕುನುಗ್ಗಲು ಉಂಟಾ​ಯಿತು.

ಹಾವೇರಿ: ಕೊರೋನಾ ಮಧ್ಯೆ ಜಿಲ್ಲೆಯಲ್ಲಿ ಡೆಂಘೀ ಹಾವಳಿ, ಹೆಚ್ಚುತ್ತಿದೆ ಸಾಂಕ್ರಾಮಿಕ ರೋಗ

ಹೆಚ್ಚಿನ ಸಂಖ್ಯೆ​ಯಲ್ಲಿ ರೈತರು ತಮ್ಮ ವಾಹ​ನ​ಗಳ ಸಮೇತ ಉಗ್ರಾ​ಣದ ಮುಂದೆ ಸೇರಿ​ದ್ದ​ರಿಂದ ಟ್ರಾಫಿಕ್‌ ಜಾಮ್‌ ಉಂಟಾ​ಯಿ​ತು. ರೈತರು ತಮ್ಮ ತಮ್ಮ ವಾಹನಗಳನ್ನು ರಸ್ತೆಯ ಎರಡು ಬದಿಗೆ ನಿಲ್ಲಿಸಿ ಗೊಬ್ಬರ ಪಡೆ​ಯ​ಲು ಮಗ್ನರಾಗಿದ್ದರು. ಇದರಿಂದ ವಾಹನ, ಸವಾರರು ಪ್ರಯಾಣಿಕರು ಬೇರೆ ದಾರಿ ಇಲ್ಲದೆ, ರಸ್ತೆ ಖಾಲಿ​ಯಾ​ಗು​ವ​ವ​ರೆ​ಗೆ ಕಾಯುವಂತಾ​ಯಿ​ತು.

ಬಳಿಕ ಟ್ರಾಫಿಕ್‌ ತೆರವುಗೊಳಿಸಲು ಹಿರೇಕೆರೂರ ಪೊಲೀ​ಸ್‌ ಠಾಣೆಯ ಸಿಬ್ಬಂದಿ ಬರಬೇಕಾಯಿತು. ಪೊಲೀಸ್‌ ಸಿಬ್ಬಂದಿ ಊರ ನಾಗರಿಕರ ಸಹಾಯದಿಂದ ಸಂಚಾರ ತೆರವುಗೊಳಿಸಿದರು. ಪ್ರತಿ ಸಾರಿ ಗೊಬ್ಬರ ಬಂದಾಗಲೂ ಇದೇ ತರಹದ ಸಮಸ್ಯೆ ಎದುರಾಗಿ ಟ್ರಾಫಿ​ಕ್‌ ಆಗುವುದು ಸರ್ವೇ ಸಾಮಾನ್ಯವಾಗಿದೆ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸವಾರರು ಬೇಸತ್ತು ​ಹೋಗಿದ್ದಾರೆ.
 

Follow Us:
Download App:
  • android
  • ios