Asianet Suvarna News Asianet Suvarna News

ಹಾಸನ: ನಿಲ್ಲದ ಕಾಡಾನೆಗಳ ದಾಳಿ, ಬೆಳೆ ನಾಶ, ಕಂಗಾಲಾದ ರೈತ

ಭತ್ತದ ಬೆಳೆ ನಾಶ ಪಡಿಸಿದ ಕಾಡಾನೆಗಳು| ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಆನೆಗಳ ದಾಳಿಗೆ ಭತ್ತದ ಬೆಳೆಗೆ ಹಾನಿ| ಕಾಡಾನೆ ಹಾವಳಿ ತಡೆಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ| 

Farmers Faces Problems in Wild Elephant Attack on Field in Hassan District
Author
Bengaluru, First Published Aug 23, 2020, 2:08 PM IST

ಹಾಸನ(ಆ.23): ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಕಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೌದು, ಮೊದಲೇ ಭಾರೀ ಮಳೆಯಿಂದ ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಏತನ್ಮಧ್ಯೆ ಕಾಡಾನೆಗಳು ಕಾಟವೂ ಕೂಡ ಹೆಚ್ಚಾಗಿದೆ. 

ಭಾರೀ ಮಳೆಯಿಂದ ಹಾನಿಗೊಳಗಾಗಿ ಅಳಿದುಳಿದ ಭತ್ತದ ಬೆಳೆಯನ್ನು ಕಾಡಾನೆಗಳು ನಾಶ ಪಡಿಸುತ್ತಿವೆ. ಇದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ. ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಆನೆಗಳ ದಾಳಿಗೆ ಭತ್ತದ ಬೆಳೆ ಹಾನಿಯಾಗಿದೆ. ಕೆಲ ದಿನಗಳ ಹಿಂದೆ ನಾಟಿ ಮಾಡಿದ್ದ ಆನೆಗಳ ದಾಳಿಗೆ ಬೆಳೆ ಸಂಪೂರ್ಣವಾಗಿ ನಾಶವವಾಗಿದೆ.  

ಹಾಸನ : ಹಬ್ಬದ ದಿನವೇ ಯುವಕನ ಕೊಚ್ಚಿ ಬರ್ಬರ ಕೊಲೆ

ಸುಮಾರು 30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಅಡ್ಡಾಡಿ ಬೆಳೆಯನ್ನ ಕಾಡಾನೆಗಳ ಹಿಂಡು ನಾಶಮಾಡಿದೆ. ಕಾಡಾನೆಗಳ ಹಾವಳಿಯಿಂದ ಗ್ರಾಮದ ಶಾಂತಕುಮಾರ್, ಮಂಜು,ಮಧು, ವಿಜಯ್ ಕುಮಾರ್ ಸೇರಿದ ಜಮೀನುಗಳಲ್ಲಿ ಬೆಳೆದಿದ್ದ ಬೆಳೆ ನಾಶವಾಗಿದೆ. ಕಾಡಾನೆ ಹಾವಳಿ ತಡೆಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೂಕ್ತ ಬೆಳೆ ಪರಿಹಾರ ನೀಡಿ, ಕಾಡಾನೆ ಹಾವಳಿ ತಡೆಗಟ್ಟಲು ರೈತರು ಒತ್ತಾಯಿಸಿದ್ದಾರೆ. 
 

Follow Us:
Download App:
  • android
  • ios