ಬಳ್ಳಾರಿ: ರಾತ್ರೋರಾತ್ರಿ ಖಾಸಗಿ ಕಂಪನಿಯಿಂದ ಬೆಳೆ ನಾಶ, ಸಂಕಷ್ಟದಲ್ಲಿ ಅನ್ನದಾತ..!
ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ರೈತರ ಮನವೊಲೈಸೋ ಮೂಲಕ ಅವರು ಕೇಳಿದಷ್ಟು ಪರಿಹಾರವನ್ನುನೀಡಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಆದರೆ ಈ ರೀತಿ ದೌರ್ಜನ್ಯವನ್ನು ಮಾಡಿದ್ರೇ, ರೈತರು ಬದುಕೋದಾದ್ರೇ, ಹೇಗೆ ಅನ್ನೋದು ರೈತರು ಪ್ರಶ್ನೆಯಾಗಿದೆ. ಅಲ್ಲದೇ ಇದೀಗ ಖಾಸಗಿ ಕಂಪನಿಯ ವಿರುದ್ದ ರೈತರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆಂದು ಕಂಪನಿಯವರು ಕೂಡ ರೈತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ(ಡಿ.08): ಆ ರೈತರು ಸಾಲಸೋಲ ಮಾಡಿ ಅಷ್ಟೋ ಇಷ್ಟೋ ಇರೋ ಜಮೀನಿನಲ್ಲಿ ಬಿತ್ತನೆ ಮಾಡಿದ್ರು. ಆದರೆ ರಾತ್ರೋರಾತ್ರಿ ಖಾಸಗಿ ಕಂಪನಿಯವರು ಬಂದು ಜೆಸಿಬಿ ಮೂಲಕ ಎಲ್ಲ ಬೆಳೆಯನ್ನು ನಾಶ ಮಾಡಿದ್ದಾರಂತೆ..? ಆ ಖಾಸಗಿ ಕಂಪನಿಯವರಿಗೆ ರೈತರ ಆ ಜಮೀನು ಬೇಕು. ಆದರೆ ರೈತರು ಅದನ್ನು ಖಾಸಗಿ ಕಂಪನಿಯವರಿಗೆ ನೀಡುತ್ತಿಲ್ಲ. ಈ ಹಗ್ಗ ಜಗ್ಗಾಟದಲ್ಲಿ ಖಾಸಗಿ ಕಂಪನಿಯವರು ರೈತರ ಮೇಲೆ ದೌರ್ಜನ್ಯ ಮಾಡುವ ಮೂಲಕ ರಾತ್ರೋರಾತ್ರಿ ಬೆಳೆ ನಾಶ ಮಾಡಿದ್ದಾರೆ.
ಬಿತ್ತನೆ ಮಾಡಿದ ಬೆಳೆ ನಾಶ ಕಂಡು ಕಣ್ಣಿರು ಹಾಕುತ್ತಿರೋ ಅನ್ನದಾತರು
ಸಾವಿರಾರು ರೂಪಾಯಿಗಳು ಖರ್ಚು ಮಾಡಿ ಬಿತ್ತನೆ ಮಾಡಿದ ಬೆಳೆಯನ್ನು ಜೆಸಿಬಿಯಿಂದ ನಾಶ ಮಾಡಿದ್ದಾರಂತೆ ಖಾಸಗಿ ಕಂಪನಿ ಮಾಲೀಕರು..? ಕಷ್ಟಪಟ್ಟು ಬಿತ್ತಿದ ಈರುಳ್ಳಿ, ಮೆಕ್ಕೆಜೋಳ ಸೇರಿದಂತೆ ಕೃಷಿ ಪರಿಕಗಳ ನಾಶ ಮಾಡಿದ್ದಾರೆಂದು ಆರೋಪ.
ಬಳ್ಳಾರಿ: ರಾತ್ರೋ ರಾತ್ರಿ ಟೋಲ್ ಗೇಟ್ ನಿರ್ಮಾಣ, ಗ್ಯಾರಂಟಿ ಹಣ ಸರಿದೂಗಿಸಲು ಸರ್ಕಾರದ ಪ್ಲಾನ್?
ಹೌದು, ಹೀಗೆ ತಮ್ಮ ಹೊಲದ ಮುಂದೆ ಬೆಳೆ ನಾಶವಾಗಿದೆ ಎಂದು ಕಣ್ಣಿರು ಹಾಕುತ್ತಿರೋ ಮಹಿಳೆಯರು ಮತ್ತು ರೈತರು ಸಂಡೂರಿನ ತಾಲೂಕಿನ ರಣಜಿತ್ ಪುರದ ನಿವಾಸಿಗಳು. ಕಾಡಪ್ಪ ಮತ್ತು ಪರಮೇಶ್ವರಪ್ಪ ಅವರಿಗೆ ಸೇರಿದ ನಾಲ್ಕು ಎಕರೆ ಸೇರಿದಂತೆ ಸುತ್ತಮುತ್ತಲಿನ ಹದಿನೈದು ಎಕರೆ ಜಮೀನನ್ನು ಸಂಡೂರಿನ ಖಾಸಗಿ ಕಂಪನಿಯವರು (ಆರ್‌ಐಪಿಎಲ್) ತಮ್ಮ ಮೈನಿಂಗ್ ಏರಿಯಾದ ಡೆವಲಪ್ಮೆಂಟ್ಗಾಗಿ ತೆಗೆದುಕೊಳ್ಳಲು ಪಯತ್ನ ನಡೆಸಿದ್ದಾರೆ. ಸರ್ಕಾರದ ಕೆಐಡಿಬಿ ಮೂಲಕ ಜಮೀನು ವಶಪಡಿಸಿಕೊಳ್ಳುಲು ಪ್ರಯತ್ನ ನಡೆಸಿದೆ. ಆದರೆ ರೈತರು ಮಾತ್ರ ಭೂಮಿ ನೀಡುತ್ತಿಲ್ಲ. ಈ ಬಗ್ಗೆ ಧಾರವಾಡ ಹೈಕೋರ್ಟಿನಲ್ಲಿ ವ್ಯಾಜ್ಯ ನಡೆಯುತ್ತಿದೆ. ಈ ಮಧ್ಯೆ ರಾತ್ರೋ ರಾತ್ರಿ ಕಂಪನಿಯವರು ಜಮೀನಿನಲ್ಲಿ ನಾಲ್ಕು ಎಕರೆಯಲ್ಲಿ ಬೆಳೆದ ಈರುಳ್ಳಿ, ಮೆಕ್ಕೆ ಜೋಳ ಸೇರಿದಂತೆ ಇತರೆ ಬೆಳೆ ನಾಶ ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆಯೋ ಕೆಲಸವನ್ನು ಕಂಪನಿಯವರು ಮಾಡಿದ್ದಾರೆ ಎಂದು ರೈತರಾದ ಪರಮೇಶ್ವರಪ್ಪ, ಹುಲುಗಪ್ಪ ಮತ್ತು ರೈತ ಮುಖಂಡ ಚಾಮರಸ ಮಾಲೀಪಾಟೀಲ್ ಆರೋಪಿಸಿದ್ದಾರೆ.
ಕೆಐಡಿಬಿ ಮೂಲಕ ಒತ್ತಡ ಹಾಕುತ್ತಿರೋ ಖಾಸಗಿ ಕಂಪನಿ
ರೈತರಿಂದ ಭೂಮಿಯನ್ನು ವಶಪಡಿಸಿಕೊಳ್ಳಲು ಸಾಕಷ್ಟು ಮಾರ್ಗಗಳಿವೆ. ರೈತರ ಮನವೊಲೈಸೋ ಮೂಲಕ ಅವರು ಕೇಳಿದಷ್ಟು ಪರಿಹಾರವನ್ನುನೀಡಿ ಭೂಮಿಯನ್ನು ವಶಪಡಿಸಿಕೊಳ್ಳಬೇಕು. ಆದರೆ ಈ ರೀತಿ ದೌರ್ಜನ್ಯವನ್ನು ಮಾಡಿದ್ರೇ, ರೈತರು ಬದುಕೋದಾದ್ರೇ, ಹೇಗೆ ಅನ್ನೋದು ರೈತರು ಪ್ರಶ್ನೆಯಾಗಿದೆ. ಅಲ್ಲದೇ ಇದೀಗ ಖಾಸಗಿ ಕಂಪನಿಯ ವಿರುದ್ದ ರೈತರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆಂದು ಕಂಪನಿಯವರು ಕೂಡ ರೈತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಜಮೀನಿನ ವ್ಯಾಜ್ಯ ಕೋರ್ಟ್ ನಲ್ಲಿ ಇದ್ರೂ ಈ ರೀತಿ ರೈತರ ಹೊಲದಲ್ಲಿ ಬಂದು ಹೇಗೆ ದೌರ್ಜನ್ಯ ಮಾಡಿದ್ದಾರೆ. ಪರಿಹಾರ ನೀಡೋದಷ್ಟೇ ಅಲ್ಲದೇ ಕಂಪನಿಯವರನ್ನು ಬಂಧಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಹೆಂಡ್ತಿ ಸರಿಯಾಗಿ ಆರೈಕೆ ಮಾಡ್ತಿಲ್ಲವೆಂದು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪಾಪಿ ಗಂಡ
ಪರಸ್ಪರ ಕೇಸ್ ದಾಖಲಿಸಿದ ಹಿನ್ನೆಲೆ ಇದೀಗ ಪೊಲೀಸರು ತನಿಖೆ ನಡೆಸುತ್ತೇವೆಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದ್ದಾರೆ.
ಮೊದಲು ನಷ್ಟ ಪರಿಹಾರ ನೀಡಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸೋ ಪೊಲೀಸರು ರೈತರ ಹೊಲಗಳಿಗೆ ಭೇಟಿ ನೀಡಿ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಲು ಮುಂದಾಗಿದ್ದಾರೆ. ಅದೇನೇ ಇರಲಿ ಕಂಪನಿ ಪರಿಹಾರ ಕೊಡಬಹುದು. ನಾಶ ಮಾಡಿದವರ ವಿರುದ್ಧ ಕ್ರಮವಾಗಬಹುದು. ಆದರೆ ಕಷ್ಟ ಪಟ್ಟು ಬೆಳೆದ ಬೆಳೆ ಅದರ ಶ್ರಮಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಉತ್ತರವೇ ಇಲ್ಲ.