ಅನ್ನದಾತರಿಗೆ ರೋಹಿಣಿ ಮಳೆ ಆಘಾತ, ಆತಂಕದ ಛಾಯೆ..!

ರೋಹಿಣಿ ಮಳೆ ಜೂ.7ರವರೆಗೂ ಸುರಿಯಬೇಕಿತ್ತು. ಆದರೆ, ಮುಂಗಾರು ಹಂಗಾಮಿನ ಬಿತ್ತನೆಗೆ ಅಗತ್ಯವಾಗಿ ಹದವಾದ ಮಳೆ ಬಾರದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ವರ್ಷ ಸಕಾಲಕ್ಕೆ ಮಳೆ ಆಗಿಲ್ಲ. ಹಾಗಾಗಿ, ಈ ವರ್ಷದ ಮುಂಗಾರು ಹಂಗಾಮು ರೈತರ ಭರವಸೆಯನ್ನು ಹುಸಿಗೊಳಿಸುವಂತೆ ಮಾಡಿದೆ. ಮಳೆಗಾಗಿ ರೈತರು ಕತ್ತೆಗಳ ಮದುವೆಗೆ ಮೊರೆ ಹೋಗಿದ್ದಾರೆ.

Farmers Faces Problems For Monsoon Rain Delay in Belagavi grg

ಶ್ರೀಶೈಲ ಮಠದ

ಬೆಳಗಾವಿ(ಜೂ.16): ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೃಷಿ ಇಲಾಖೆ ಮುಂಗಾರು ಹಂಗಾಮಿಗೆ ಅಗತ್ಯ ಸಿದ್ಧತೆಯನ್ನೇನೋ ಮಾಡಿಕೊಂಡಿದೆ. ಆದರೆ, ರೈತರ ಭರವಸೆಯ ಮಳೆ ಎಂದೇ ಕರೆಯಲ್ಪಡುವ ರೋಹಿಣಿ ಮಳೆ ಕೈ ಕೊಟ್ಟಿದ್ದರಿಂದ ಅನ್ನದಾತ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ತಲೆದೋರಿದೆ.

ರೋಹಿಣಿ ಮಳೆ ಜೂ.7ರವರೆಗೂ ಸುರಿಯಬೇಕಿತ್ತು. ಆದರೆ, ಮುಂಗಾರು ಹಂಗಾಮಿನ ಬಿತ್ತನೆಗೆ ಅಗತ್ಯವಾಗಿ ಹದವಾದ ಮಳೆ ಬಾರದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಈ ವರ್ಷ ಸಕಾಲಕ್ಕೆ ಮಳೆ ಆಗಿಲ್ಲ. ಹಾಗಾಗಿ, ಈ ವರ್ಷದ ಮುಂಗಾರು ಹಂಗಾಮು ರೈತರ ಭರವಸೆಯನ್ನು ಹುಸಿಗೊಳಿಸುವಂತೆ ಮಾಡಿದೆ. ಮಳೆಗಾಗಿ ರೈತರು ಕತ್ತೆಗಳ ಮದುವೆಗೆ ಮೊರೆ ಹೋಗಿದ್ದಾರೆ.

ಚಿಕ್ಕಮಗಳೂರು: ಜೀವನದಿಗಳು ಜನಿ​ಸು​ವ ಜಿಲ್ಲೆ​ಯಲ್ಲೇ ಮಳೆ ಕ್ಷಾಮ !

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ ಇದುವರೆಗೆ 93 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, 86 ಮಿ.ಮೀ. ಮಳೆಯಾಗಿ ಶೇ.7ರಷ್ಟುಮಳೆ ಕೊರತೆಯಾಗಿದೆ. ಕೃಷಿ ಭೂಮಿಯಲ್ಲಿ ತೇವಾಂಶ ಕೊರತೆ ಎದುರಾಗಿದೆ. ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಧೈರ್ಯ ಮಾಡಿ ಇದ್ದ ತೇವಾಂಶದಲ್ಲಿಯೇ, ಒಣ ಮಣ್ಣಿನಲ್ಲಿಯೇ ಬಿತ್ತನೆ ಮಾಡಿದ್ದಾರೆ.

ಈ ಬಾರಿ ಮುಂಗಾರು ಆರಂಭದಲ್ಲೇ ರೈತರಲ್ಲಿ ನಿರಾಸೆ ಮೂಡಿಸಿದೆ. ಬಿತ್ತನೆಗೆ ಸಿದ್ಧತೆ ಮಾಡಿಟ್ಟಹೊಲಗಳಲ್ಲಿ ಬೆಳೆ ಬದಲು ಕಳೆ ಬೆಳೆಯುವ ಪರಿಸ್ಥಿತಿ ಎದುರಾಗಿ ರೈತರನ್ನು ಚಿಂತೆಗೀಡು ಮಾಡಿದೆ. ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಈರುಳ್ಳಿ, ಮೆಣಸಿನಕಾಯಿ, ಭತ್ತ, ಹತ್ತಿ, ಸೋಯಾಬಿನ್‌, ಮೆಕ್ಕೆಜೋಳ ಬೆಳೆಯುವುದು ವಾಡಿಕೆ. ಆದರೆ, ಮಳೆ ಕೊರತೆಯಿಂದಾಗಿ ಅದರಲ್ಲೂ ಹೆಸರು ಬಿತ್ತನೆಗೆ ಮುಂಗಾರಿನ ರೋಹಿಣಿ ಮಳೆಯೇ ಆಧಾರವಾಗಿತ್ತು. ಈಗ ರೋಹಿಣಿ ಕೈಕೊಟ್ಟಿದ್ದರಿಂದ ರೈತರಲ್ಲಿ ಆತಂಕ ಆವರಿಸಿದೆ.

ಸಂಕಷ್ಟದಲ್ಲಿ ರೈತರು:

ಕೃಷಿ ಸಾಮಗ್ರಿಗಳ ಬಾಡಿಗೆ ಹೆಚ್ಚಳ, ಕಾರ್ಮಿಕರ ಕೂಲಿ, ಬಿತ್ತನೆ ಬೀಜ ದರ ಏರಿಕೆಯಿಂದ ಮೊದಲೇ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ರೈತರು ಈಗ ಮಳೆ ಬಾರದೇ ಇರುವುದರಿಂದ ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಮುಂಗಾರು-ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ನೂರಾರು ಎಕರೆ ಬೆಳೆ ನೀರು ಪಾಲಾಯಿತು. ಬೆಳೆ ಕೈಕೊಟ್ಟಿದ್ದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಬೆಳೆ ಬಂದರೂ ಯೋಗ್ಯ ಬೆಲೆ ಸಿಗದೆ ಅನ್ನದಾತರು ಕಂಗಾಲಾದರು. ಕೃಷಿ ಸಾಲ ತೀರಿಸದೇ ಪರದಾಡುವಂತಾಗಿದೆ. ಇದೀಗ ರೈತರು ವರುಣನಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ಮಳೆಗಾಗಿ ಕತ್ತೆಗಳ ಮದುವೆ

ಮಳೆ ಬಾರದೇ ಕಂಗಾಲಾಗಿರುವ ರೈತರು ಈಗ ಮಳೆಗಾಗಿ ಕತ್ತೆಗಳ ಮದುವೆ ಮೊರೆ ಹೋಗಿದ್ದಾರೆ. ಅಥಣಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸೊತ್ರೕಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಿ ಗ್ರಾಮಸ್ಥರು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ, ಬರಗಾಲದ ಆತಂಕ ಮನೆ ಮಾಡಿದೆ. ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕತ್ತೆಗೆ ಸೀರೆ ತೊಡಸಿ, ವಾದ್ಯಮೇಳದೊಂದಿಗೆ ಮದುವೆ ಮಾಡಿಸಿ ಗಮನ ಸೆಳೆದಿದ್ದಾರೆ.

7.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

ಬೆಳಗಾವಿ ಜಿಲ್ಲೆಯಲ್ಲಿ ಕೃಷಿ ಇಲಾಖೆ ಮುಂಗಾರು ಹಂಗಾಮಿನಲ್ಲಿ 7.19 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ (ನೀರಾವರಿ 3.36 ಲಕ್ಷ ಹೆ. ಹಾಗೂ ಮಳೆಯಾಶ್ರಿತ 3.24 ಲಕ್ಷ ಹೆ.) ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಿದೆ. ಕಬ್ಬು, ಮೆಕ್ಕೆಜೋಳ, ಸೋಯಾಬಿನ್‌, ಭತ್ತ ಹಾಗೂ ಹೆಸರು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಜಿಲ್ಲೆಯಲ್ಲಿ 35 ರೈತ ಸಂಪರ್ಕ ಹಾಗೂ 135 ಹೆಚ್ಚುವರಿ ಬೀಜ ವಿತರಣೆ, ಒಟ್ಟು 179 ಕೇಂದ್ರದಿಂದ ಸಹಾಯಧನದಲ್ಲಿ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಅಥಣಿ-14, ಬೈಲಹೊಂಗಲ-34, ಬೆಳಗಾವಿ-12, ಚಿಕ್ಕೋಡಿ-19, ಗೋಕಾಕ 14, ಹುಕ್ಕೇರಿ 38, ಖಾನಾಪುರ 7, ರಾಯಬಾಗ-3, ರಾಮದುರ್ಗ-11 ಹಾಗೂ ಸವದತ್ತಿ-18 ಕೇಂದ್ರಗಳನ್ನು ತೆರೆಯಲಾಗಿದೆ.

47,375 ಕ್ವಿಂಟಾಲ್‌ ಬೀಜ ದಾಸ್ತಾನು

ಬೆಳಗಾವಿ ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ 170 ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ 47,375 ಕ್ವಿಂಟಾಲ… ಬೀಜ ದಾಸ್ತಾನು ಮಾಡಲಾಗಿದೆ. ಪ್ರತಿ ರೈತರಿಗೆ ಸಹಾಯಧನದಡಿ ಒಟ್ಟಾರೆ ಗರಿಷ್ಠ 2 ಹೆಕ್ಟೇರ್‌ (5 ಎಕರೆ) ಅಥವಾ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗುವುದು. 1 ಎಕರೆಗೆ 1 ಪ್ಯಾಕೇಟ್‌, 2 ಎಕರೆಗೆ 2 ಪ್ಯಾಕೇಟ್‌, 3 ಎಕರೆಗೆ 3 ಪ್ಯಾಕೇಟ್‌, 4 ಎಕರೆಗೆ 4 ಪ್ಯಾಕೇಟ್‌, 5 ಎಕರೆಗೆ 5 ಪ್ಯಾಕೇಟ್‌ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ 5 ಪ್ಯಾಕೇಟ್‌ಗೆ ಮಾತ್ರ ಸೀಮಿತಗೊಳಿಸಲಾಗಿದೆ. ಸೋಯಾಬಿನ್‌ 32,850 ಕ್ವಿಂಟಾಲ್‌, ಭತ್ತ 1200, ಹೆಸರು 1200, ಉದ್ದು 800, ತೊಗರಿ 800, ಹೈಬ್ರಿಡ್‌ ಭತ್ತ 25, ಮೆಕ್ಕೆಜೋಳ 8000, ಸಜ್ಜೆ 300, ಸೂರ್ಯಕಾಂತಿ 300, ಜೋಳ 100, ಶೇಂಗಾ 300, ಒಟ್ಟು 47,375 ಕ್ವಿಂಟಾಲ್‌ ಬೀಜ ದಾಸ್ತಾನು ಮಾಡಲಾಗಿದೆ.

ಮಂಡ್ಯ: ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮ, ಭಾರೀ ಮಳೆ

ಪ್ರಸಕ್ತ ಮುಂಗಾರು ಹಂಗಾಮಿನಿಂದ ಬಿತ್ತನೆ ಬೀಜ ಹಾಗೂ ಎಲ್ಲ ಕೃಷಿ ಪರಿಕರಗಳಿಗೆ ಕಿಖ ಅಟಜಛಿ ಕಡ್ಡಾಯವಾಗಿದ್ದರಿಂದ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳಲ್ಲಿ ಬೀಜ ವಿತರಣೆ ವೇಳೆ ಪ್ರತಿ ಪ್ಯಾಕೆಟ್‌ನ್ನು ಸ್ಕಾ್ಯನ್‌ ಮಾಡಿ ಖಛಿಛಿಜ ಒಐಖ ನಲ್ಲಿ ಕಿಖ ಅಟಜಛಿ ಮತ್ತು ಇತರೆ ವಿವರಗಳನ್ನು ದಾಖಲಾದ ನಂತರ ಬೀಜ ವಿತರಣೆ ಮಾಡಲಾಗುತ್ತಿದೆ. ರೈತರು ಈಗಾಗಲೇ ತಂತ್ರಾಂಶದಲ್ಲಿ ತಮ್ಮ ಜಮೀನಿನ ವಿವರಗಳನ್ನು ನೀಡಿದ್ದು, ಅದರಂತೆಯೇ ಬೀಜ ವಿತರಣೆ ಕೈಗೊಳ್ಳಲಾಗುವುದು ಅಂತ ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.  

ಬೆಳಗಾವಿ ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ 170 ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡಲಾಗುತ್ತಿದೆ. 47,375 ಕ್ವಿಂಟಲ್‌ ಬಿತ್ತನೆ ಬೀಜ ದಾಸ್ತಾನು ಇದೆ. ಜಿಲ್ಲೆಯಲ್ಲಿ ಬಿತ್ತನೆ ಬೀಜ ಕೊರತೆ ಇರುವುದಿಲ್ಲ. ರಸಗೊಬ್ಬರ 2.25 ಲಕ್ಷ ಮೆಟ್ರಿಕ್‌ ಟನ್‌ ಲಭ್ಯವಿರುತ್ತದೆ. ಯಾವುದೇ ರೀತಿ ಕೊರತೆ ಇರುವುದಿಲ್ಲ. ಆದರೆ ಬಿತ್ತನೆಗೆ ಅನುಕೂಲಕರ ಮಳೆಯಾಗಿರುವುದಿಲ್ಲ ಅಂತ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ ತಿಳಿಸಿದ್ದಾರೆ.  

Latest Videos
Follow Us:
Download App:
  • android
  • ios