Asianet Suvarna News Asianet Suvarna News

ಬಳ್ಳಾರಿ: ಬಿರುಗಾಳಿಗೆ ನೆಲಕಚ್ಚಿದ ಪಪ್ಪಾಯಿ ಬೆಳೆ: ಸಂಕಷ್ಟದಲ್ಲಿ ರೈತ..!

*  ಪಪ್ಪಾಯಿ ಬೆಳೆದ ರೈತನ ಕಣ್ಣೀರಿನ ಕಥೆಯಿದು
*  ಕೈ ಬಂದ‌ ಫಸಲು ಬಾಯಿಗೆ ಬರಲಿಲ್ಲ
*  ಪಪ್ಪಾಯಿ ಬೆಳೆ ಹಾನಿಯಿಂದ 50 ಲಕ್ಷ ರೂಪಾಯಿಗೂ ಅಧಿಕ ನಷ್ಟ
 

Farmers Faces Problems Due to Storm in Ballari and Vijayanagara grg
Author
Bengaluru, First Published May 11, 2022, 7:59 AM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಮೇ.10): ಕಳೆದೆರಡು ದಿನಗಳಿಂದ ಸುರಿದ ಮಳೆ(Rain) ಮತ್ತು‌ ಬಿರುಗಾಳಿಗೆ ಬಳ್ಳಾರಿ(Ballari) ಮತ್ತು ವಿಜಯನಗರ(Vijayanagara) ಜಿಲ್ಲೆಯ ರೈತರು ನಲುಗಿ ಹೋಗಿದ್ದಾರೆ. ಅದರಲ್ಲೂ ಪಪ್ಪಾಯಿ, ಬಾಳೆ, ದಾಳಿಂಬೆ, ಭತ್ತ, ಸೇರಿದಂತೆ ಸಾಕಷ್ಟು ಬೆಳೆ ಹಾನಿಯಾಗಿ ರೈತರು ಕಣ್ಣಿರಿನಲ್ಲಿ ಕೈತೋಳೆಯುಂತಾಗಿದೆ. ಇನ್ನು ಬಳ್ಳಾರಿಯಲ್ಲಿ ರೈತನೊಬ್ಬ ಕಷ್ಟಪಟ್ಟು ಬೆಳೆ ಬೆಳೆದಿದ್ದ, 8 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಬಂಪರ್ ಆಗಿ ಬಂದಿತ್ತು. ಇನ್ನೇನೂ ಪಪ್ಪಾಯಿ ಫಸಲನ್ನ ಕಟಾವ್ ಮಾಡಬೇಕು ಅನ್ನೋಷ್ಟರಲ್ಲಿ ರೈತರ ಬಾಳಲ್ಲಿ ಮಳೆಗಾಳಿ ಬಿರುಗಾಳಿ ಸಂಪೂರ್ಣ ಹಾಳಾಗಿ ಹೋಗಿದೆ. 

ಕೈಗೆ ಬಂದ ಫಸಲು ಬಾಯಿಗೆ ಬರಲಿಲ್ಲ ಅನ್ನೋ ಹಂಗಾಗಿದೆ

ಈ ದೃಶ್ಯಗಳನ್ನೊಮ್ಮೆ ನೋಡಿ ಒಂದು ಕಡೆ ಗಾಳಿ ಮಳೆಗೆ ಮುರಿದ ಬಿದ್ದ ಮರಗಳು. ನೆಲಕ್ಕೆ ಉರುಳಿದ ಪಪ್ಪಾಯಿ ಕಾಯಿಗಳು. ಮತ್ತೊಂದು ಕಡೆ ಕಟಾವ್ ಮಾಡುವ ಮುನ್ನವೇ ಮಣ್ಣಪಾಲು ಬಾಳೆ ತೆನೆಗಳು. ಹೀಗೆ ಒಂದಲ್ಲ ಎರಡಲ್ಲ ಹಲವು ರೈತರು(Farmers) ಕಳೆದೆರಡು ದಿನದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಅದರಲ್ಲೂ ಒಂದೇ ಕಡೆ 8 ಎಕರೆ ಪ್ರದೇಶದಲ್ಲಿ ಬೆಳೆದ ಸಾವಿರಾರು ಪಪ್ಪಾಯಿ(Papaya) ಮರಗಳು ನೆಲದ ಪಾಲಾಗಿರೋ ದೃಶ್ಯ ಕರುಳು ಹಿಂಡುವಂತಿದೆ. 

Ballari ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ

ಹೌದು, ಸಾಮಾನ್ಯವಾಗಿ ಬಳ್ಳಾರಿ ಅಂದ್ರೆ ಬಿಸಿಲು ರಣಬಿಸಿಲು ಅಂತಾರೆ. ಆದ್ರೆ ಈ ವರ್ಷದ ಬೇಸಿಗೆಯಲ್ಲಿ ಬಿಸಿಲಿನ ಜೊತೆ ಜೊತೆಗೆ ಬಿರುಗಾಳಿ(Storm) ಜೋರಾಗಿದೆ. ಕಳೆದೊಂದು ಎರಡು ಮೂರು ದಿನಗಳಿಂದ ಅವಳಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ  ಜಿಲ್ಲೆಯಲ್ಲಿ ಸಾಕಷ್ಟು ಪ್ರದೇಶದಲ್ಲಿ ಬೆಳೆ ಹಾನಿಗೀಡಾಗಿದೆ. ಮಳೆ ಮತ್ತು ಬಿರುಗಾಳಿಗೆ ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ಬೆಳೆದ ಪಪ್ಪಾಯಿ ಬೆಳೆಯೆಲ್ಲಾ ಸಂರ್ಪೂಣವಾಗಿ ನೆಲಕಚ್ಚಿದೆ.  ಸುಬ್ರಮಣ್ಯ ಎನ್ನುವವರು ಒಂದು ಎಕರೆಗೆ  ಒಂದುವರೆ ಲಕ್ಷ ರೂಪಾಯಿಯಂತೆ ಖರ್ಚು ಮಾಡಿ 8 ಎಕರೆ ಪ್ರದೇಶದಲ್ಲಿ ಪಪ್ಪಾಯಿ ಬೆಳೆ ಬೆಳೆದಿದ್ರು. 8 ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ ಬೆಳೆ ಕಟಾವ್ ಗೆ ಬಂದ ವೇಳೆ ಬಿರುಗಾಳಿಗೆ ಪಪ್ಪಾಯಿ ಮರಗಳೆಲ್ಲಾ ನೆಲಕ್ಕುರುಳಿವೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಪಪ್ಪಾಯಿ ಬೆಳೆ ಫಸಲು ಕೈಗೆ ಬಂದ ವೇಳೆಯೇ ಬಿರುಗಾಳಿಗೆ ಹಾನಿಗೊಳಗಾಗಿರುವುದರಿಂದ ರೈತ ಸುಬ್ರಮಣ್ಯ ಅವರಿಗೆ 50 ಲಕ್ಷ ರೂಪಾಯಿಗೂ ಅಧಿಕ ನಷ್ಟವುಂಟಾಗಿದೆ. 

ಮುಸ್ಲಿಂ ಓಲೈಕೆಗೆ ಮುಂದಾಗಿದ್ದಾರಂತೆ ಸಚಿವ ಶ್ರೀರಾಮುಲು: ಕದ್ದುಮುಚ್ಚಿ ಮಸೀದಿ ಅಭಿವೃದ್ಧಿಗೆ ಹಣ ಕೊಡ್ತಿದ್ದಾರಂತೆ!

ಸ್ಥಳಕ್ಕೆ ಭೇಟಿ‌ನೀಡಿದ ಅಧಿಕಾರಿಗಳು

ಇನ್ನೂ ಹಾನಿಗೊಳಗಾದ ಪ್ರದೇಶಕ್ಕೆ ತೋಟಗಾರಿಕೆ ಇಲಾಖೆಯ(Department of Horticulture) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  ರೈತನಿಗೆ ಸ್ವಾಂತನ ಹೇಳೋ‌ ಮೂಲಕ  ರೈತನ ಬಳಿ ಖರ್ಚು ವೆಚ್ಚದ ಮಾಹಿತಿ ಪಡೆದಯುತ್ತಿದ್ದಾರೆ. ಹಾನಿಯ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಪರಿಹಾರ(Compensation)ದೊರಕಿಸಿಕೊಡುವುದಾಗಿ ಭರವಸೆ ನೀಡ್ತಿದ್ದಾರೆ..

ಆನೆ ಹೊಟ್ಟೆಗೆ ಅರೆಕಾಸಿನ‌ ಮಜ್ಜಿಗೆ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಅಕಾಲಿಕ ಮಳೆ ಹಾಗೂ ಬಿರುಗಾಳಿಗೆ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದ ಪಪ್ಪಾಯಿ. ಬಾಳೆ,ಭತ್ತ, ದಾಳಿಂಬೆ ಬೆಳೆ ಹಾನಿಗೀಡಾಗಿದೆ. ರೈತರು ಕಷ್ಟಪಟ್ಟು ಸಾಲ ಸೋಲ ಮಾಡಿ ಬೆಳೆದ ಬೆಳೆ ಕೈಗೆ ಬಂದ ವೇಳೆ ಮಳೆಗಾಳಿಗೆ ಹಾನಿಗೀಡಾಗಿರುವುದರಿಂದ ಅನ್ನದಾತರು ಕಣ್ಣೀರಿಡುವಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದು ಹಾನಿಗೀಡಾಗಿರುವ ರೈತರಿಗೆ ಸರ್ಕಾರ  ಅಲ್ಪಸ್ಬಲ್ಪ ಪರಿಹಾರ ನೀಡುತ್ತಿದೆ. ಆದ್ರೇ ಕನಿಷ್ಟ ಹಾನಿಗೊಳಗಾದ ಪ್ರದೇಶದಲ್ಲಿ ನಷ್ಟದ ಅರ್ಧದಷ್ಟು ಪರಿಹಾರ ನೀಡಲಿ ಎನ್ನುವುದು ರೈತರ ಆಗ್ರಹವಾಗಿದೆ.
 

Follow Us:
Download App:
  • android
  • ios