Asianet Suvarna News Asianet Suvarna News

ಮಳೆಗಾಗಿ ಆಕಾಶದತ್ತ ಮುಖ ಮಾಡಿದ ರೈತ..!

ಮಳೆ ಇಲ್ಲದೆ ಒಣಗುತ್ತಿರುವ ಪೈರುಗಳು ಕಳೆ ತೆಗೆಯುವ ಹಂತದಲ್ಲಿದೆ. ಇದರಿಂದ ಕಂಗಲಾಗಿರುವ ರೈತನಿಗೆ ಮಳೆರಾಯನ ಕೃಪೆ ಬೇಕಾಗಿದೆ

Farmers Faces Problems Due to Lack of Rain in Chamarajanagara grg
Author
First Published Oct 6, 2022, 9:00 PM IST

ಹನೂರು(ಅ.06): ಕಳೆದ ತಿಂಗಳು ಉತ್ತಮ ಮಳೆಯಾದ ಹಿನ್ನೆಲೆ ಮಲೆಮಹದೇಶ್ವರ ಬೆಟ್ಟಸೇರಿದಂತೆ ತಾಲೂಕಿನಲ್ಲಿ ಮಳೆಯಾಶ್ರಿತ ಬೆಳೆಗಳನ್ನು ರೈತರು ಜಮೀನಿನಲ್ಲಿ ಬಿತ್ತನೆ ಮಾಡಿದ್ದರು. ಇದೀಗ ಮಳೆ ಇಲ್ಲದೆ ಕಂಗಲಾಗಿರುವ ರೈತರು ಆಕಾಶದತ್ತ ಮುಖ ಮಾಡಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಕಳೆ ತೆಗೆಯುವ ಹಂತದಲ್ಲಿ ಪೈರು ಮಳೆ ಇಲ್ಲದೆ ಬೆಳೆ ಒಣಗುತ್ತಿವೆ. ಮಲೆಮಹದೇಶ್ವರ ಬೆಟ್ಟದ ಹಳೆಯಾರು ಗ್ರಾಮದ ಶಿಕ್ಷಕ ಮಾದಯ್ಯ ಜಮೀನಿನಲ್ಲಿ ನವಣೆ, ಸಾಮೆ ಬಿತ್ತನೆ ಮಾಡಿದ್ದಾರೆ. ಮಳೆಯಿಲ್ಲದೆ ಇದರಿಂದಾಗಿ ರೈತಾಪಿ ವರ್ಗ ಆಕಾಶದತ್ತ ಮುಖ ಮಾಡಿದ್ದಾರೆ.

ತಾಲೂಕಿನಲ್ಲಿ ರೈತರು ಮಳೆಯಾಶ್ರಿತ ಬೆಳೆಗಳಾದ ಮುಸುಕಿನ ಜೋಳ, ರಾಗಿ , ನವಣೆ, ದ್ವಿದಳ ಧಾನ್ಯಗಳ ಸಾಲು ಬಿತ್ತನೆ ಮಾಡಿದ್ದಾರೆ. ಮಳೆ ಇಲ್ಲದ ಕಾರಣ ಬೆಳೆಗಳೆಲ್ಲ ಒಣಗುತ್ತಿದೆ. ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ರೈತರು ಜಮೀನನ್ನು ಹದಗೊಳಿಸಿ ಉತ್ತಮ ಫಸಲು ತೆಗೆಯುವ ಅಂದಾಜಿನಲ್ಲಿ ಬಿತ್ತನೆ ಮಾಡಿದ್ದಾರೆ. ಇದರಿಂದಾಗಿ ರೈತರು ಸಾಲ ಮಾಡಿ ಜಮೀನು ಹದಗೊಳಿಸಿ ಬಿತ್ತನೆ ಮಾಡಿರುವ ಬೆಳೆ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ.

ಪೇಸಿಎಂ ಟೀ ಶರ್ಟ್‌ ಧರಿಸಿದ್ದ ಯುವಕ ವಶಕ್ಕೆ, ಬಂಧನಕ್ಕೂ ಮುನ್ನ ಪೊಲೀಸರು ಹೊಡೆದ ವಿಡಿಯೋ ವೈರಲ್

ಕಂಗಾಲಾದ ರೈತ: 

ಮಳೆಯದ ಹಿನ್ನೆಲೆ ಮಳೆಯಶ್ರಿತ ಬೆಳೆಗಳನ್ನು ಬೆಳೆಯಲು ರಸಗೊಬ್ಬರ ಬಿತ್ತನೆ ಬೀಜ ಪಡೆದು ಜಮೀನು ಹದಗೊಳಿಸಿ ಬಿತ್ತನೆ ಮಾಡಿರುವ ಪೈರು ಹುಲುಸಾಗಿ ಬೆಳೆದಿದೆ. ಆದರೆ, ಮಳೆ ಇಲ್ಲದೆ ಒಣಗುತ್ತಿರುವ ಪೈರುಗಳು ಕಳೆ ತೆಗೆಯುವ ಹಂತದಲ್ಲಿದೆ. ಇದರಿಂದ ಕಂಗಲಾಗಿರುವ ರೈತನಿಗೆ ಮಳೆರಾಯನ ಕೃಪೆ ಬೇಕಾಗಿದೆ. ಹೀಗಾಗಿ, ಆಕಾಶದತ್ತ ಮಾಡಿರುವ ಮಳೆಯಾಶ್ರಿತ ಬೆಳೆ ಬೆಳದಿರುವ ರೈತರು ವರುಣನ ಕೃಪೆ ಬೇಕಾಗಿದೆ. ಇಲ್ಲದಿದ್ದರೆ, ಕಷ್ಟಪಟ್ಟು ಬೆಳೆದಿರುವ ಬೆಳೆಗಳು ನನಗೆ ಹಾಳಾಗುವುದರ ಜೊತೆಗೆ ರೈತ ಸಂಕಷ್ಟಕ್ಕೀಡಾಗುವುದು ರೈತರಲ್ಲೇ ಚಿಂತೆಗೀಡಾಗಿದೆ.
 

Follow Us:
Download App:
  • android
  • ios