ಫೆ.13ರಂದು ರೈತ ನೇರ ಮಾರುಕಟ್ಟೆ ದಿನಾಚರಣೆ
ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ 87ನೇ ಜಯಂತಿ ಫೆ. 13 ರಂದು ಜಿಲ್ಲಾ ರೈತ ಸಂಘದ ವತಿಯಿಂದ ಅವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ದು ರೈತ ಉತ್ಪಾದಕ ಕಂಪನಿ ಮುಖಾಂತರ ಗ್ರಾಮ ಸ್ವರಾಜ್ಯಕ್ಕಾಗಿ ವಿಶ್ವ ರೈತ ನೇರ ಮಾರುಕಟ್ಟೆದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ಚಾಮರಾಜನಗರ : ವಿಶ್ವ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ 87ನೇ ಜಯಂತಿ ಫೆ. 13 ರಂದು ಜಿಲ್ಲಾ ರೈತ ಸಂಘದ ವತಿಯಿಂದ ಅವರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ನಮ್ದು ರೈತ ಉತ್ಪಾದಕ ಕಂಪನಿ ಮುಖಾಂತರ ಗ್ರಾಮ ಸ್ವರಾಜ್ಯಕ್ಕಾಗಿ ವಿಶ್ವ ರೈತ ನೇರ ಮಾರುಕಟ್ಟೆದಿನವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ತಿಳಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ದು ರೈತ ಉತ್ಪಾದಕ ಕಂಪನಿ ಮುಖಾಂತರ ರಾಸಾಯನಿಕ ಮುಕ್ತ ಸಾವಯವ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ರೈತರ ವಿಶೇಷ ಮಾರುಕಟ್ಟೆ, ಬೀಜದಿಂದ ಮಾರುಕಟ್ಟೆಯವರೆಗೆ ರೈತರನ್ನು ಸ್ವಾವಲಂಬನೆಯೆಡೆಗೆ ಕರೆದೊಯ್ಯುವ ಸಮಾನ ಮನಸ್ಕರ ವೇದಿಕೆ, ರೈತ ಮತ್ತು ಗ್ರಾಹಕ ಸಮುದಾಯಗಳ ದೃಢ ಸಂಬಂಧಕ್ಕಾಗಿ ರೈತರ ಮತ್ತು ಗ್ರಾಹಕ ವೇದಿಕೆ, ಗುಡಿ ಕೈಗಾರಿಕೆಗಳನ್ನು ಪೋಷಿಸುವುದರ ಮೂಲಕ ಹಳ್ಳಿಗಳನ್ನು ಸುಸ್ಥಿರ ಮತ್ತು ಸ್ವಮರ್ಯಾದೆಯ ಘಟಕಗಳನ್ನಾಗಿಸುವ ಮಹತ್ತರ ಉದ್ದೇಶ, ಕೃಷಿ ಪ್ರವಾಸೋದ್ಯಮ) ಪರಿಕಲ್ಪನೆಯನ್ನು ಬೆಳೆಸುವ ಮಹತ್ತರ ಉದ್ದೇಶ ಹೊಂದಲಾಗಿದೆ ಎಂದರು.
ಇದಕ್ಕಾಗಿ ಫೆ. 13ರಂದು ನಗರದ ನಮ್ದು ಅಂಗಡಿ ಮುಂಭಾಗ ಬೆಳಗ್ಗೆ 10 ರಿಂದ ಸಂಜೆ 8 ರವರೆಗೆ ರೈತ ಸಂತೆ ಹಮ್ಮಿಕೊಂಡಿದ್ದು, ಸಾವಯವ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.
ಕಾರ್ಯಕ್ರದಲ್ಲಿ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್, ಎಸ್ಪಿ ಪದ್ಮಿನಿ ಸೊಹಾ, ಜಿಪಂ ಸಿಇಒ ಪೂವಿತಾ, ಸಾವಯವ ಕೃಷಿಕ ಸುರೇಶ್ ದೇಸಾಯಿ ಇತರರು ಭಾಗವಹಿಸಲಿದ್ದಾರೆ ಎಂದರು.
ಪ್ರತಿ ತಿಂಗಳು ರೈತ ಸಂತೆಯನ್ನು ತಾಲೂಕು ಕೆಂದ್ರಗಳು ಹಮ್ಮಿಕೊಂಡಿದ್ದು, ಪ್ರತಿ ತಿಂಗಳು 13ರಂದು ಚಾಮರಾಜನಗರ- ಯಳಂದೂರು ಸೇರಿದಂತೆ ನಗರದ ನಮ್ದು ಅಂಗಡಿ ಮುಂಭಾಗ, 20ರಂದು ಕೊಳ್ಳೇಗಾಲದ ಶಿವಕುಮಾರ ಸ್ವಾಮಿ ವೃತ್ತ, 26ರಂದು ಹನೂರಿನ ಕೆಎಸ್‌ಆರ್‌ಟಿಸಿ ಮುಂಭಾಗ, 6 ರಂದು ಗುಂಡ್ಲುಪೇಟೆಯ ಬಯಲು ರಂಗಮಂದಿರದಲ್ಲಿ ರೈತ ಸಂತೆಯನ್ನು ನಡೆಸಲಾಗುವುದು ಮತ್ತು ರೈತರು ಮತ್ತು ಗ್ರಾಹಕರ ಸಭೆಗಳನ್ನು ನಡೆಸಲಾಗುವುದು ಎಂದರು.
ಗ್ರಾಹಕರು ರೈತರೊಂದಿಗೆ ನೇರ ಸಂಪರ್ಕ ಹೊಂದಿ ನೇರ ಮಾರುಕಟ್ಟೆವ್ಯವಹಾರ ಮಾಡದಿದ್ದರೆ ಮುಂದೊಂದು ದಿನ ದುಪ್ಪಟ್ಟು ಹಣ ನೀಡಿ ಪದಾರ್ಥಗಳನ್ನು ಪಡೆಯಬೇಕಾಗುತ್ತದೆ. ರೈತರು ಸಾಕಷ್ಟುಬೆಳೆ ಬೆಳೆಯುತ್ತಿದ್ದು, ಮಾರುಕಟ್ಟೆಯ ಅರಿವಿಲ್ಲದೆ, ನಷ್ಟಅನುಭವಿಸುತ್ತಿದ್ದಾರೆ. ಅದಕ್ಕಾಗಿಯೇ ನಮ್ದು ರೈತ ಉತ್ಪಾದಕ ಕಂಪನಿ ಮುಖಾಂತರ ರೈತ ಸಂತೆ ನಡೆಸಿ ಮಾರುಕಟ್ಟೆಅರಿವು ಮೂಡಿಸಲಾಗುವುದು. ಇದನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಡಾ. ಗುರುಪ್ರಸಾದ್, ಉಪಾಧ್ಯಕ್ಷ ಕುಂದಕೆರೆ ಸಂಪತ್ತು, ಹನೂರು ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ, ನಮ್ದು ಅಂಗಡಿಯ ಹರೀಶ್ ಇದ್ದರು.
ರೈತರಿಗೆ 10 ತಾಸು ವಿದ್ಯುತ್ ನೀಡಲು ಚಿಂತನೆ
: ರೈತರಿಗೆ ಏಳು ತಾಸು ಬದಲಾಗಿ 10 ತಾಸು ವಿದ್ಯುತ್ ಒದಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದರು.
ತಾಲೂಕಿನ ಸುಳೇಕಲ್ ಗ್ರಾಮದ ಬಳಿಯ .150 ಕೋಟಿ ವೆಚ್ಚದ 220/110/11ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿ, ಎರಡು ವರ್ಷದ ಅವಧಿಯಲ್ಲಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಹೊಸ ವಿದ್ಯುತ್ ಉಪಕೇಂದ್ರಗಳ ಅನಾವರಣ ಮಾಡಲಾಗಿದೆ. ಇಂಧನ ಇಲಾಖೆ ಇತಿಹಾಸದಲ್ಲಿ ಇದು ಹೊಸ ಮೈಲುಗಲ್ಲು. ಇಂಧನ ಇಲಾಖೆಯನ್ನು ಜನಸ್ನೇಹಿ ಮಾಡಲು ಸರ್ಕಾರ ಬದ್ಧವಿದೆ. ಗ್ರಾಮೀಣ ಭಾಗದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಜನಾಂಗಕ್ಕೆ ಅಮೃತ ಜ್ಯೋತಿ ಯೋಜನೆಯಡಿ 75 ಯುನಿಟ್ ಉಚಿತ ವಿದ್ಯುತ್ ಪೂರೈಸಲು ಘೋಷಿಸಲಾಗಿದೆ. ರಾಜ್ಯದ ವಿದ್ಯುತ್ ರಹಿತ ಪ್ರದೇಶದಲ್ಲಿ 6 ಸಾವಿರ ಕಿ.ಮೀ. ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ. ಬೆಳಕು ಯೋಜನೆಯಡಿ ವಿದ್ಯುತ್‌ರಹಿತ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿ, ಸಾರ್ವಜನಿಕರಿಗೆ ನೆರವಾಗಿದ್ದೇವೆ ಎಂದರು.